ರಾಷ್ಟ್ರೀಯ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ವೆಂಕಪ್ಪ ಕೆಂಗಲಗುತ್ತಿ, ದಾನಮ್ಮಗೆ ಕಂಚು

7

ರಾಷ್ಟ್ರೀಯ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ವೆಂಕಪ್ಪ ಕೆಂಗಲಗುತ್ತಿ, ದಾನಮ್ಮಗೆ ಕಂಚು

Published:
Updated:

ಹುಬ್ಬಳ್ಳಿ: ಕರ್ನಾಟಕದ ವೆಂಕಪ್ಪ ಕೆಂಗಲಗುತ್ತಿ ಹಾಗೂ ದಾನಮ್ಮ ಚಿಚಖಂಡಿ ಅವರು ಜೈಪುರದಲ್ಲಿ ನಡೆಯುತ್ತಿರುವ 71ನೇ ರಾಷ್ಟ್ರೀಯ ಸೀನಿಯರ್‌ ಹಾಗೂ ಜೂನಿಯರ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಕಂಚಿನ ಪದಕ ಗೆದ್ದರು.

ಪುರುಷರ ನಾಲ್ಕು ಕಿ.ಮೀ. ವೈಯಕ್ತಿಕ ಪರ್ಸ್ಯೂಟ್‌ನಲ್ಲಿ ಬಾಗಲಕೋಟೆ ತಾಲ್ಲೂಕು ತುಳಸಿಗೇರಿಯ ವೆಂಕಪ್ಪ ಐದು ನಿಮಿಷ 00.09 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.

18 ವರ್ಷದೊಳಗಿನ ಬಾಲಕಿಯರ 10 ಕಿ.ಮೀ. ಪಾಯಿಂಟ್‌ ರೇಸ್‌ನಲ್ಲಿ ಜಮಖಂಡಿ ತಾಲ್ಲೂಕು ನಾವಲಗಿ ಗ್ರಾಮದ ದಾನಮ್ಮ 11 ಪಾಯಿಂಟ್‌ ಕಲೆಹಾಕಿ ‍ಪದಕ ಗೆದ್ದರು. ಇದೇ ಸ್ಪರ್ಧೆಯಲ್ಲಿ ಬೆಂಗಳೂರಿನ ಸೈಕ್ಲಿಸ್ಟ್‌ ಕೀರ್ತಿ ರಂಗಸ್ವಾಮಿ ಒಂಬತ್ತು ಪಾಯಿಂಟ್‌ ಗಳಿಸಿ ನಾಲ್ಕನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡರು. ಮೂರನೇ ದಿನದ ಅಂತ್ಯಕ್ಕೆ ಕರ್ನಾಟಕದ ಸೈಕ್ಲಿಸ್ಟ್‌ಗಳು ಒಟ್ಟು 13 ಪದಕಗಳನ್ನು ಜಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !