ಗುರುವಾರ , ನವೆಂಬರ್ 14, 2019
18 °C

ಸೈಕ್ಲಿಸ್ಟ್‌ಗಳ ದೈಹಿಕ ಸಾಮರ್ಥ್ಯ ಪರೀಕ್ಷೆ 24ಕ್ಕೆ

Published:
Updated:

ಹುಬ್ಬಳ್ಳಿ: ಹೈದರಾಬಾದ್‌ನಲ್ಲಿ ಆರಂಭ ವಾಗಿರುವ ಖೇಲೊ ಇಂಡಿಯಾ ಸೈಕ್ಲಿಂಗ್‌ ಅಕಾಡೆಮಿಗೆ ರಾಜ್ಯದ ಸೈಕ್ಲಿಸ್ಟ್‌ಗಳನ್ನು ಆಯ್ಕೆ ಮಾಡಲು ಇದೇ 24ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ.

16 ವರ್ಷದ ಒಳಗಿನ ಬಾಲಕ ಹಾಗೂ ಬಾಲಕಿಯರು ಟ್ರಯಲ್ಸ್‌ನಲ್ಲಿ ಭಾಗವಹಿಸಬಹುದು. ಆಸಕ್ತ ಸೈಕ್ಲಿಸ್ಟ್‌ಗಳು ಜನನ ಪ್ರಮಾಣ ಪತ್ರ, ವೈದ್ಯಕೀಯ ಸದೃಢತಾ ಪತ್ರದ ದಾಖಲೆಯೊಂದಿಗೆ ಅಂದು ಬೆಳಿಗ್ಗೆ 10 ಗಂಟೆಗೆ ಕ್ರೀಡಾಂಗಣಕ್ಕೆ ಬರಬೇಕು.

ಇನ್ನಷ್ಟು ಮಾಹಿತಿಗೆ ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಶೈಲ ಎಂ. ಕುರಣಿ (9008377875) ಅವರನ್ನು ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)