ಗಿನ್ನಿಸ್‌ ದಾಖಲೆಗಾಗಿ ಸೈಕ್ಲೋತ್ಸವ ಜ.26ಕ್ಕೆ

7

ಗಿನ್ನಿಸ್‌ ದಾಖಲೆಗಾಗಿ ಸೈಕ್ಲೋತ್ಸವ ಜ.26ಕ್ಕೆ

Published:
Updated:

ಹುಬ್ಬಳ್ಳಿ: ಜನವರಿ 26ರಂದು ನಗರದಲ್ಲಿ ಏರ್ಪಡಿಸಲಾಗಿರುವ ‘ಸೈಕ್ಲೋತ್ಸವ’ದಲ್ಲಿ ದೇಶದ 1500ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು ಒಬ್ಬರ ಹಿಂದೆ ಒಬ್ಬರು 4 ಕಿ.ಮೀ. ದೂರ ಸಾಲಾಗಿ ಚಲಿಸುವ ಮೂಲಕ ಗಿನ್ನಿಸ್‌ ವಿಶ್ವ ದಾಖಲೆ ಬರೆಯಲಿದ್ದಾರೆ ಎಂದು ಹುಬ್ಬಳ್ಳಿ ಬೈಸಿಕಲ್‌ ಕ್ಲಬ್‌ನ ಆನಂದ ಬೈದ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ವಿಜಯಪುರ ರಸ್ತೆಯ ಆಕ್ಸ್‌ಫರ್ಡ್‌ ಕಾಲೇಜು ಬಳಿಯಿಂದ ಕುಸುಗಲ್‌ ಬೈಪಾಸ್‌ ವರೆಗೆ ನಡೆಯಲಿರುವ ಸೈಕ್ಲೋತ್ಸವದಲ್ಲಿ ಗಂಟೆಗೆ ಸರಾಸರಿ 10 ರಿಂದ 12 ಕಿ.ಮೀ.ವೇಗದಲ್ಲಿ ಸೈಕ್ಲಿಸ್ಟ್‌ಗಳು ಚಲಿಸಲಿದ್ದಾರೆ ಎಂದರು.

ಬಾಂಗ್ಲಾದೇಶದಲ್ಲಿ 1186 ಸೈಕ್ಲಿಸ್ಟ್‌ಗಳು 3.2 ಕಿ.ಮೀ. ದೂರವನ್ನು ಈ ಹಿಂದೆ ನಿಧಾನವಾಗಿ ಕ್ರಮಿಸುವ ಮೂಲಕ ಬರೆದಿರುವ ಗಿನ್ನಿಸ್‌ ದಾಖಲೆಯನ್ನು ಹುಬ್ಬಳ್ಳಿಯಲ್ಲಿ ನಡೆಯುವ ಸೈಕ್ಲೋತ್ಸವದಲ್ಲಿ ಮುರಿಯಲಾಗುವುದು ಎಂದು ಹೇಳಿದರು.

ಜನವರಿ 17ರ ವರೆಗೂ ಹೆಸರು ನೋಂದಾಯಿಸಲು ಅವಕಾಶವಿದೆ. ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 9108507179 ಸಂಪರ್ಕಿಸಬಹುದಾಗಿದೆ ಎಂದರು.

ಗಣರಾಜ್ಯೋತ್ಸವದ ಅಂಗವಾಗಿ ಅಂದು ಸೈಕ್ಲಿಸ್ಟ್‌ಗಳು ಕೇಸರಿ, ಬಿಳಿ, ಹಸಿರು ಬಣ್ಣವುಳ್ಳ ಜೆರ್ಸಿಯನ್ನು ತೊಟ್ಟು ಸೈಕ್ಲೋತ್ಸವದಲ್ಲಿ ಭಾಗವಹಿಸಲಿದ್ದು, ಎಲ್ಲರಿಗೂ ಸರ್ಟಿಫಿಕೇಟ್‌ ಮತ್ತು ಮೆಡಲ್‌ ನೀಡಲಾಗುವುದು ಎಂದು ಹೇಳಿದರು.

ಸೈಕ್ಲೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಕಲಾ ಪ್ರದರ್ಶನ ಹಾಗೂ ಆಹಾರ ಉತ್ಸವ ಕೂಡ ಇರಲಿದೆ ಎಂದು ತಿಳಿಸಿದರು.

ಹುಬ್ಬಳ್ಳಿ ಬೈಸಿಕಲ್‌ ಕ್ಲಬ್‌ನ ಕೌಸ್ತುಬ್‌ ಸಂಶಿಕರ್‌, ಶ್ರೀಕಾಂತ ದೇಶಪಾಂಡೆ, ಚಿಂತನ್‌ ಶಾ, ಪ್ರದೀಪ್‌ ಭಟ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !