ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಯೆಟ್ನಾಂ ಓಪನ್‌: ಸಿರಿಲ್‌ಗೆ ಅಚ್ಚರಿಯ ಜಯ

ಸೌರಬ್‌ ಮುನ್ನಡೆ; ಶುಭಂಕರ್‌ ನಿರ್ಗಮನ
Last Updated 12 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಹೊ ಚಿ ಮಿನ್‌ ಸಿಟಿ, ವಿಯೆಟ್ನಾಂ: ಮೂರು ಗೇಮ್‌ಗಳ ಸೆಣಸಾಟದಲ್ಲಿ ಅಗ್ರ ಶ್ರೇಯಾಂಕದ ಡ್ಯಾರೆನ್‌ ಲಿವ್ ಮೇಲೆ ಅಚ್ಚರಿಯ ಜಯಗಳಿಸಿದ ಭಾರತದ ಸಿರಿಲ್‌ ವರ್ಮಾ, ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಮೂರನೇ ಸುತ್ತಿಗೆ ಮುನ್ನಡೆದರು.

ವಿಶ್ವ ಕ್ರಮಾಂಕದಲ್ಲಿ 97ನೇ ಸ್ಥಾನದಲ್ಲಿರುವ ಸಿರಿಲ್‌ಗುರುವಾರ ನಡೆದ ಪಂದ್ಯದಲ್ಲಿ 17–21, 21–19, 21–12 ರಿಂದ 22ನೇ ಕ್ರಮಾಂಕದ ಲಿವ್‌ ಮೇಲೆ ಜಯಗಳಿಸಿದರು. ಈ ಪ್ರಯಾಸದ ಗೆಲುವಿಗೆ 52 ನಿಮಿಷ ತೆಗೆದುಕೊಂಡರು. ಅರ್ಹತಾ ಸುತ್ತನ್ನು ದಾಟಿ ಬಂದಿರುವ ಚೀನಾದ ಲೀ ಲಾನ್‌, ಈ ‘ಸೂಪರ್‌ 100 ಟೂರ್ನಿ’ಯಲ್ಲಿ ಸಿರಿಲ್‌ ಅವರ ಮುಂದಿನ ಎದುರಾಳಿಯಾಗಿದ್ದಾರೆ.

ಸೌರಬ್‌ ವರ್ಮಾ ಕೂಡ ಮೂರನೇ ಸುತ್ತನ್ನು ತಲುಪಿದರು. ಆದರೆ ಭಾರತದ ಇನ್ನೊಬ್ಬ ಆಟಗಾರ ಶುಭಂಕರ್‌ ಡೇ ಟೂರ್ನಿಯಿಂದ ಹೊರಬಿದ್ದರು.

ಸೌರಬ್‌ ವರ್ಮಾ 22–20, 22–20 ರಿಂದ ಜಪಾನ್‌ನ ಕೊಡೈ ನರವೊಕ ಅವರನ್ನು 54 ನಿಮಿಷಗಳ ಸೆಣಸಾಟದಲ್ಲಿ ಸೋಲಿಸಿದರು. ಜಪಾನ್‌ನ ಯು ಇಗರಾಶಿ, ಭಾರತದ ಆಟಗಾರನ ಮುಂದಿನ ಎದುರಾಳಿ ಆಗಿದ್ದಾರೆ.

ಶುಭಂಕರ್‌ ಡೇ 11–21, 17–21 ರಲ್ಲಿ ಶ್ರೇಯಾಂಕರಹಿತ ಆಟಗಾರ ಝಿಯಾ ವೀ ತಾನ್‌ (ಮಲೇಷಿಯಾ) ಅವರಿಗೆ ಶರಣಾದರು. ಪುರುಷರ ಡಬಲ್ಸ್‌ನಲ್ಲೂ ಭಾರತದ ಸವಾಲು ಅಂತ್ಯಗೊಂಡಿತು. ಅರುಣ್‌ ಜಾರ್ಜ್‌ – ಸನ್ಯಮ್‌ ಶುಕ್ಲಾ ಹೆಚ್ಚು ಪ್ರತಿರೋಧ ಒಡ್ಡದೇ 13–21, 11–21 ರಲ್ಲಿ ಅಗ್ರ ಶ್ರೇಯಾಂಕದ ಲು ಚಿಂಗ್‌ ಯಾವೊ– ಯಾಂಗ್ ಪೊ ಹ್ಯಾನ್‌ (ಚೀನಾ ತೈಪಿ) ಅವರಿಗೆ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT