ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್ | ನವೀನಕುಮಾರ್ ಆರ್ಭಟ; ಡೆಲ್ಲಿ ಅಜೇಯ ಓಟ

ಬೆಂಗಾಲ್ ವಾರಿಯರ್ಸ್‌ಗೆ ನಿರಾಸೆ
Last Updated 30 ಡಿಸೆಂಬರ್ 2021, 2:20 IST
ಅಕ್ಷರ ಗಾತ್ರ

ಬೆಂಗಳೂರು: ಅಮೋಘ ಆಟವಾಡಿದ ನವೀನಕುಮಾರ್ ನೆರವಿನಿಂದ ದಬಂಗ್ ಡೆಲ್ಲಿ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ತನ್ನ ಅಜೇಯ ಓಟ ಮುಂದುವರಿಸಿತು.

ವೈಟ್‌ಫೀಲ್ಡ್‌ನ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ದಬಂಗ್ ಡೆಲ್ಲಿ ತಂಡವು 52–35ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯಭೇರಿ ಬಾರಿಸಿತು.

ರೇಡರ್ ನವೀನಕುಮಾರ್ ಮಿಂಚಿನ ದಾಳಿ ನಡೆಸುವ ಮೂಲಕ 24 ಅಂಕಗಳನ್ನು ಗಳಿಸಿದರು. ಇದರಿಂದಾಗಿ ತಂಡವು ಮೊದಲಾರ್ಧದಲ್ಲಿಯೇ 33–15ರಿಂದ ಪಂದ್ಯದ ಮೇಲೆ ಬಿಗಿಹಿಡಿತ ಸಾಧಿಸಿತು. ನವೀನ್ ಜೊತೆಗೆ ಆಲ್‌ರೌಂಡರ್ ಕೂಡ ಮಿಂಚಿದರು. ಅವರು ಹತ್ತು ಅಂಕಗಳನ್ನು ಗಳಿಸಿದರು.

ಬೆಂಗಾಲ್ ತಂಡದ ನಾಯಕ ಮಣಿಂದರ್ ಸಿಂಗ್ ತಕ್ಕ ತಿರುಗೇಟು ನೀಡುವ ಪ್ರಯತ್ನ ಮಾಡಿದರು. ಅವರು 12 ರೇಡ್‌ಗಳಿಂದ 16 ಅಂಕಗಳನ್ನು ಗಳಿಸಿದರು. ಅವರಿಗೆ ಸುಖೇಶ್ ಹೆಗಡೆ (9 ಪಾಯಿಂಟ್ಸ್) ಕೂಡ ಉತ್ತಮ ಜೊತೆ ನೀಡಿದರು. ಆದರೆ, ಡೆಲ್ಲಿ ತಂಡದ ವೇಗಕ್ಕೆ ಬೆಂಗಾಲ್ ಆಟ ಸಾಟಿಯಾಗಲಿಲ್ಲ.

ಡೆಲ್ಲಿ ತಂಡವು ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ. ಅದರಲ್ಲಿ ಮೂರು ಗೆದ್ದು, ಒಂದರಲ್ಲಿ ಟೈ ಮಾಡಿಕೊಂಡಿದೆ. ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿದೆ.

ಯೋಧಾ–ಗುಜರಾತ್ ಪಂದ್ಯ ಟೈ
ಯುಪಿ ಯೋಧಾ ಮತ್ತು ಗುಜರಾತ್ ಜೈಂಟ್ಸ್‌ ತಂಡಗಳ ನಡುವಣ ನಡೆದ ಪಂದ್ಯವು ರೋಚಕ ಟೈನಲ್ಲಿ ಅಂತ್ಯಗೊಂಡಿತು.

ದಿನದ ಎರಡನೇ ಪಂದ್ಯದಲ್ಲಿ ಉಭಯ ತಂಡಗಳು 30–30ರಿಂದ ಸಮಬಲ ಸಾಧಿಸಿದವು.

ಯೋಧಾ ತಂಡದ ಪ್ರದೀಪ್ ನರ್ವಾಲ್ (11) ಮತ್ತು ರಾಕೇಶ್ ನರ್ವಾಲ್ (13) ಅವರ ನಡುವಣ ಪೈಪೋಟಿಯು ರಂಗೇರಿತು. ಹರಿಯಾಣ ಮೂಲದ ಇಬ್ಬರೂ ರೇಡರ್‌ಗಳು ತಮ್ಮ ತಂಡದ ಸೋಲು ತಪ್ಪಿಸಲು ಆಡಿದ ರೀತಿಯು ಅಮೋಘವಾಗಿತ್ತು.

ಅರ್ಧವಿರಾಮದ ವೇಳೆಗೆ ಗುಜರಾತ್ ತಂಡವು 20–14ರಿಂದ ಮುನ್ನಡೆ ಸಾಧಿಸಿತ್ತು. ಆದರೆ, ವಿರಾಮದ ನಂತರದ ಆಟದಲ್ಲಿ ತಿರುಗೇಟು ನೀಡುವಲ್ಲಿ ಯೋಧಾ ಸಫಲವಾಯಿತು. ಯೋಧಾ ಆಟಗಾರರು ಗುಜರಾತ್ ತಂಡವನ್ನು ಎರಡು ಬಾರಿ ಆಲೌಟ್ ಮಾಡಿತು. ಎಲ್ಲ ವಿಭಾಗಗಳಲ್ಲಿಯೂ ಮೇಲುಗೈ ಸಾಧಿಸಿತು.

ಪ್ರದೀಪ್ ಜೊತೆಗೆ ಸುರೇಂದರ್ ಗಿಲ್ (6 ಪಾಯಿಂಟ್) ಕೂಡ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT