ಸೋಮವಾರ, ಡಿಸೆಂಬರ್ 9, 2019
17 °C

ಕಬಡ್ಡಿ: ಡೆಲ್ಲಿ-ಪ್ಯಾಂಥರ್ಸ್ ಪಂದ್ಯ ಡ್ರಾ

Published:
Updated:
Prajavani

ಪಂಚಕುಲಾ: ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ದಬಂಗ್‌ ಡೆಲ್ಲಿ ಮತ್ತು ಜೈಪುರ ಪಿಂಕ್‌ ಪ್ಯಾಂಥರ್ಸ್ ತಂಡಗಳು 37–37ರಿಂದ ಡ್ರಾ ಸಾಧಿಸಿದವು.

ಗುರುವಾರ ರಾತ್ರಿ ಇಲ್ಲಿನ ತವು ದೇವಿಲಾಲ್ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಉಭಯ ತಂಡಗಳು ಆರಂಭದಿಂದಲೇ ಸಮಬಲದ ಪೈಪೋಟಿ ನಡೆಸಿದ್ದವು. ದೀಪಕ್ ಹೂಡಾ ಎಂಟು ಪಾಯಿಂಟ್ ಗಳಿಸಿ ಜೈಪುರ ತಂಡದಲ್ಲಿ ಮಿಂಚಿದರು. ಡೆಲ್ಲಿ ಪರ ಚಂದ್ರನ್‌ ರಂಜಿತ್‌ ಸೂಪರ್ ಟೆನ್‌ (11 ಪಾಯಿಂಟ್‌) ಮೂಲಕ ಗಮನ ಸೆಳೆದರು.

ಅವರಿಗೆ ಉತ್ತಮ ಸಹಕಾರ ನೀಡಿದ ಪವನ್ ಕಡಿಯಾನ್ (ಒಂಬತ್ತು ಪಾಯಿಂಟ್‌) ಕೂಡ ಪ್ರೇಕ್ಷಕರ ಮನಸೂರೆಗೈದರು.

ಸೆಲ್ವಮಣಿ ಒಂದೇ ರೇಡ್‌ನಲ್ಲಿ ನಾಲ್ಕು ಪಾಯಿಂಟ್ ಗಳಿಸಿದ್ದು ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟಿತು. ಸಂದೀಪ್ ಧುಳ್‌ ಆರು ಟ್ಯಾಕಲ್ ಪಾಯಿಂಟ್‌ಗಳನ್ನು ಕಲೆ ಹಾಕಿದರು.

ಆರಂಭದಲ್ಲಿ ದಬಂಗ್ ಡೆಲ್ಲಿ 5–0ಯಿಂದ ಮುನ್ನಡೆದಿತ್ತು. ಐದನೇ ನಿಮಿಷದಲ್ಲಿ ಸೂಪರ್‌ ಟ್ಯಾಕಲ್ ಮೂಲಕ ಜೈಪುರ ತಂಡದವರು ಪಾಯಿಂಟ್ ಗಳಿಸಲು ಆರಂಭಿಸಿದರು. ನಂತರ ಪಂದ್ಯ ಪ್ರತಿ ಕ್ಷಣವೂ ರೋಚಕವಾಗುತ್ತ ಸಾಗಿತು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು