ಬುಧವಾರ, ಆಗಸ್ಟ್ 21, 2019
24 °C

ದಕ್ಷಿಣ್‌ ಡೇರ್‌ ರ‍್ಯಾಲಿ: ಗಿಲ್‌– ಮೂಸಾ ಚಾಂಪಿಯನ್ಸ್‌

Published:
Updated:
Prajavani

ಬೆಂಗಳೂರು: ಟೀಮ್‌ ಮಹೀಂದ್ರಾದ ಅನುಭವಿ ಚಾಲಕರಾದ ಗೌತಮ್‌ ಗಿಲ್‌, ಮೂಸಾ ಶರೀಫ್‌, ಗುರುವಾರ ಹುಬ್ಬಳ್ಳಿಯಲ್ಲಿ ಮುಕ್ತಾಯಗೊಂಡ ದಕ್ಷಿಣ್‌ ಡೇರ್‌ ರ‍್ಯಾಲಿಯ ಕಾರುಗಳ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಕಳೆದ ವರ್ಷವೂ ಈ ಜೋಡಿಯೇ ಚಾಂಪಿಯನ್‌ ಆಗಿತ್ತು.

ಬೆಂಗಳೂರಿನ ರಾಜಾಜಿನಗರದ ‘ಮ್ಯಾರಿಯಟ್‌’ ಹೋಟೆಲ್‌ ಮುಂಭಾಗ ಭಾನುವಾರ ಆರಂಭವಾಗಿದ್ದ ಸುಮಾರು 2,000 ಕಿ.ಮೀ. ದೂರದ ಈ ನಾಲ್ಕು ದಿನಗಳ ರ್‍ಯಾಲಿ ಚಾಲಕರ ಕೌಶಲ, ವೇಗ, ಸಾಹಸಿ ಮನೋಭಾವಕ್ಕೆ ಪರೀಕ್ಷೆಯಾಗಿತ್ತು.

ಅನಿಲ್‌ ವಾಡಿಯಾ, ಸೋಮೈಯಾ ಎರಡನೇ, ಟೀಮ್‌ ಹಾರ್ಜಿ ಮೋಟಾರ್‌ ಸ್ಪೋರ್ಟ್ಸ್‌ನ ಹರವಿಂದರ್‌ ಭೋಲಾ ಮತ್ತು ಚಿರಾಗ್‌ ಠಾಕೂರ್‌ ಮೂರನೇ ಸ್ಥಾನ ಪಡೆದರು. ಬೈಕ್‌ಗಳ ವಿಭಾಗದಲ್ಲಿ ದೇಶದ ವಿವಿಧೆಡೆಗಳಿಂದ ಸವಾರರು ಭಾಗ ವಹಿಸಿದ್ದು, ಬೆಂಗಳೂರಿನ ಸಂಜಯ್‌ ವಿಜೇತರಾದರು. 

Post Comments (+)