ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಶಿಕಾಂತ್‌, ರೀನಾ ಜಾರ್ಜ್‌ಗೆ ಚಿನ್ನ

ದಸರಾ ಅಥ್ಲೆಟಿಕ್ಸ್: ಶಾಟ್‌ಪಟ್‌ನಲ್ಲಿ ಮೈಸೂರಿನ ಸ್ಪರ್ಧಿಗಳ ಪ್ರಾಬಲ್ಯ
Last Updated 14 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರಿನ ಶಶಿಕಾಂತ್‌ ಮತ್ತು ಮೈಸೂರಿನ ರೀನಾ ಜಾರ್ಜ್‌ ಅವರು ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್‌ನ 200 ಮೀ. ಓಟದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನ ಗೆದ್ದರು.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸ್ಪರ್ಧೆಯಲ್ಲಿ ಮಿಂಚಿನ ಪ್ರದರ್ಶನ ನೀಡಿದ ಶಶಿಕಾಂತ್ 21.5 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಬೆಂಗಳೂರಿನವರೇ ಆದ ಎಂ.ಜೆ.ಅಶ್ವಿನ್ (21.7 ಸೆ.) ಮತ್ತು ಗಣೇಶ್ (21.8 ಸೆ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ರೀನಾ ಜಾರ್ಜ್‌ ಅವರು 23.5 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಶಾಟ್‌ಪಟ್‌ ಸ್ಪರ್ಧೆಯಲ್ಲಿ ಮೈಸೂರಿನ ಸ್ಪರ್ಧಿಗಳು ಪ್ರಾಬಲ್ಯ ಮೆರೆದರು. ಪುರುಷರ ವಿಭಾಗದಲ್ಲಿ ಬಿ.ಮನುಷ್‌ ಮತ್ತು ಮಹಿಳೆಯರ ವಿಭಾಗದಲ್ಲಿ ಡಿ.ಮೇಘನಾ ಮೊದಲ ಸ್ಥಾನ ಜಯಿಸಿದರು.

ಫಲಿತಾಶ: ಪುರುಷರ ವಿಭಾಗ: 200 ಮೀ. ಓಟ: ಶಶಿಕಾಂತ್ (ಬೆಂಗಳೂರು)–1, ಎಂ.ಜೆ.ಅಶ್ವಿನ್ (ಬೆಂಗಳೂರು)–2, ಗಣೇಶ್ (ಬೆಂಗಳೂರು)–3. ಕಾಲ: 21.5 ಸೆ.

800 ಮೀ. ಓಟ: ಟಿ.ಎಚ್.ದೇವಯ್ಯ (ಬೆಂಗಳೂರು)–1, ಮಿಜೊ ಚಾಕೊ ಕುರಿಯನ್ (ದ.ಕನ್ನಡ)–2, ಬಿ.ಕೆ.ಕುಮಾರಸ್ವಾಮಿ (ಬೆಂಗಳೂರು)–3. ಕಾಲ:1 ನಿ. 56.5 ಸೆ.

5000 ಮೀ. ಓಟ: ವಿಶ್ವಾಂಭರ್ (ಬೆಂಗಳೂರು)–1, ಜಿ.ಜೆ.ಚೇತನ್ (ಮೈಸೂರು)–2, ಪರಶುರಾಂ (ದ.ಕನ್ನಡ)–3. ಕಾಲ: 15 ನಿ. 55 ಸೆ.

ಲಾಂಗ್‌ಜಂಪ್: ಸನ್ನಿ ಆಂಥೋಣಿ ಡಿಸೋಜಾ (ಉಡುಪಿ)–1, ರವಿ (ದ.ಕನ್ನಡ)–2, ಎ.ಜೆರಾಲ್ಡ್ (ಚಿಕ್ಕಬಳ್ಳಾಪುರ)–3. ದೂರ: 6.88 ಮೀ.

ಜಾವೆಲಿನ್ ಥ್ರೋ: ಡಿ.ಪಿ.ಮನು (ದ.ಕನ್ನಡ)–1, ಕೆ.ಎಸ್‌.ಕೀರ್ತಿರಾಜ್ (ಉಡುಪಿ)–2, ಶಾರುಖ್ (ಧಾರವಾಡ)–3. ಕಾಲ: ದೂರ: 65.69 ಮೀ.

ಶಾಟ್‌ಪಟ್: ಬಿ.ಮನುಷ್ (ಮೈಸೂರು)–1, ಎಂ.ಸಿ.ಮೋಹನ್ ಕುಮಾರ್ (ಮೈಸೂರು)–2, ಎಂ.ಆರ್‌.ನಂದೀಶ್ (ಮೈಸೂರು)–3. ದೂರ: 15.61 ಮೀ

ಪೋಲ್‌ವಾಲ್ಟ್: ಬಿನೀಶ್ ಜೇಕಬ್ (ಬೆಂಗಳೂರು)–1, ಜಿ.ಪಿ.ಯೋಗೇಶ್ (ದ.ಕನ್ನಡ)–2, ಎಚ್‌.ಜಿ.ಶ್ರೀಮಂತ್ (ದ.ಕನ್ನಡ)–3. ಎತ್ತರ: 4.40 ಮೀ.

ಮಹಿಳೆಯರ ವಿಭಾಗ: 200 ಮೀ. ಓಟ: ರೀನಾ ಜಾರ್ಜ್‌ (ಮೈಸೂರು)–1, ಎಂ.ನಿಖಿತಾ (ಬೆಂಗಳೂರು)–2, ಧಾನೇಶ್ವರಿ (ಬೆಂಗಳೂರು ಗ್ರಾಮಾಂತರ)–3. ಕಾಲ: 23.5 ಸೆ.

800 ಮೀ. ಓಟ: ಎಂ.ಗೋಮತಿ (ಬೆಂಗಳೂರು)–1, ಇ.ಬಿ.ಅರ್ಪಿತಾ (ಬೆಂಗಳೂರು ಗ್ರಾಮಾಂತರ)–2, ಬಿ. ದೀ‌ಕ್ಷಾ (ದ.ಕನ್ನಡ)–3. ಕಾಲ: 2 ನಿ.14.4 ಸೆ.

5000 ಮೀ. ಓಟ: ಕೆ.ಎಂ.ಅರ್ಚನಾ (ದಕ್ಷಿಣ ಕನ್ನಡ)–1, ಚೈತ್ರಾ ದೇವಾಡಿಗ (ದ.ಕನ್ನಡ)–2, ಆರ್‌.ಉಷಾ (ಬೆಂಗಳೂರು ಗ್ರಾಮಾಂತರ)–3. ಕಾಲ: 18 ನಿ. 40.60 ಸೆ.

ಲಾಂಗ್‌ಜಂಪ್: ಬಿ.ಐಶ್ವರ್ಯಾ (ದ.ಕನ್ನಡ)–1, ಎಂ.ಆರ್‌.ಧನುಷಾ (ಮೈಸೂರು)–2, ಆರ್‌.ಕುಸುಮಾ (ಬೆಂಗಳೂರು)–3. ದೂರ: 5.83 ಮೀ.

ಶಾಟ್‌ಪಟ್‌: ಡಿ.ಮೇಘನಾ (ಮೈಸೂರು)–1, ಬಿ.ಅಂಬಿಕಾ (ಮೈಸೂರು)–2, ಎಸ್‌.ಜಿ.ಚಿನ್ನವ (ದ.ಕನ್ನಡ)–3. ದೂರ: 13.61 ಮೀ.

ಪೋಲ್‌ವಾಲ್ಟ್: ಮರಿಯಾ ಜೈಸನ್ (ಬೆಂಗಳೂರು)–1, ಜಿ.ಸಿಂಧುಶ್ರೀ (ಬೆಂಗಳೂರು)–2, ಸಿಂಧು ಭಟ್ (ದ.ಕನ್ನಡ)–3. ಎತ್ತರ: 3.65 ಮೀ.

ಅನಂತ, ಅಕ್ಷತಾಗೆ ಅಗ್ರಸ್ಥಾನ
ಮಡಿಕೇರಿಯ ಟಿ.ಎನ್‌.ಅನಂತ ಮತ್ತು ದಾವಣಗೆರೆಯ ಅಕ್ಷತಾ ಅವರು ದಸರಾ ಅಂಗವಾಗಿ ಭಾನುವಾರ ಆಯೋಜಿಸಿದ್ದ 10 ಕಿ.ಮೀ. ಓಟದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

ಬೀದರ್‌ನ ಸಂತೋಷ್‌ ಮತ್ತು ಮಂಡ್ಯದ ಆರ್‌.ಸಂದೀಪ್ ಅವರು ಪುರುಷರ ವಿಭಾಗದಲ್ಲೂ, ಬೆಂಗಳೂರಿನ ಕೆ.ಸಿ.ಶ್ರುತಿ ಮತ್ತು ಮೂಡುಬಿದಿರೆಯ ಆಳ್ವಾಸ್‌ನ ಕೆ.ಎಸ್‌.ಶಾಲಿನಿ ಮಹಿಳೆಯರ ವಿಭಾಗದಲ್ಲೂ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT