ಗುರುವಾರ , ಅಕ್ಟೋಬರ್ 24, 2019
21 °C

ಶಶಿಕಾಂತ್‌ ‘ದಸರಾ ಶ್ರೀ’

Published:
Updated:
Prajavani

ಮೈಸೂರು: ಬೆಂಗಳೂರಿನ ಆರ್‌.ಶಶಿಕಾಂತ್‌ ಅವರು ದಸರಾ ದೇಹ ದಾರ್ಢ್ಯ ಸ್ಪರ್ಧೆಯಲ್ಲಿ ‘ದಸರಾ ಶ್ರೀ’ ಗೌರವ ತಮ್ಮದಾಗಿಸಿಕೊಂಡರು.

ಗುರುವಾರ ನಡೆದ ಸ್ಪರ್ಧೆಯ ‘ಗುಂಪು–1’ ವಿಭಾಗದಲ್ಲಿ ಅವರಿಗೆ ಅಗ್ರ ಸ್ಥಾನ ಲಭಿಸಿತು. ಶಶಿಕಾಂತ್‌ ಜುಲೈನಲ್ಲಿ ‘ಮಿಸ್ಟರ್ ಏಷ್ಯಾ’ ಪ್ರಶಸ್ತಿ ಗಳಿಸಿದ್ದರು.

ಬೆಂಗಳೂರಿನ ಅವಿನಾಶ್‌ ಸುವರ್ಣ (ಗುಂಪು–2), ಮೈಸೂರಿನ ಪವನ್‌ ಕುಮಾರ್ (ಗುಂಪು–3) ಮತ್ತು ದಕ್ಷಿಣ ಕನ್ನಡದ ಸಂದೀಪ್‌ ಬಂಗೇರಾ (ಗುಂಪು–4) ಅವರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಸಂದೀಪ್‌ ಬಂಗೇರ ‘ಬೆಸ್ಟ್‌ ಪೋಸರ್‌’ ಪ್ರಶಸ್ತಿ ಜಯಿಸಿದರೆ, ಪವನ್‌ ಕುಮಾರ್‌ ಅವರು ‘ಮೋಸ್ಟ್‌ ಮಸ್ಕ್ಯುಲರ್‌’ ಗೌರವ ಪಡೆದುಕೊಂಡರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)