ಶುಕ್ರವಾರ, ಸೆಪ್ಟೆಂಬರ್ 20, 2019
27 °C

ದಸರಾದಲ್ಲಿ 11 ಸಾಹಸ ಕ್ರೀಡೆ

Published:
Updated:

ಮೈಸೂರು: ಈ ಬಾರಿ ದಸರಾದಲ್ಲಿ 11 ಸಾಹಸ ಕ್ರೀಡೆಗಳು ಒಳಗೊಂಡಂತೆ 28 ಕ್ರೀಡೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಕ್ರೀಡಾ ಇಲಾಖೆಯ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಸಾಹಸ ಕ್ರೀಡೆ ಗಳು ಆಯೋಜನೆಯಾಗಿವೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಗುರುವಾರ ನಡೆದ ದಸರಾ ಕುರಿತ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಯಿತು.

ಶ್ರೀರಂಗಪಟ್ಟಣದಲ್ಲಿ ರಾಫ್ಟಿಂಗ್, ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವಾಲ್‌ ಕ್ಲೈಂಬಿಂಗ್‌ ಮತ್ತು ಲಲಿತ್‌ಮಹಲ್‌ ಹೆಲಿಪ್ಯಾಡ್‌ನಲ್ಲಿ ಮಡ್‌ ಕಾರ್ಟಿಂಗ್‌ ಸ್ಪರ್ಧೆಗಳು ನಡೆಯಲಿವೆ. ಇದಲ್ಲದೆ ಪ್ಯಾರಾಸೇಲಿಂಗ್, ರ‍್ಯಾಪೆ ಲಿಂಗ್, ಜೆಟ್‌ಸ್ಕೀ, ಕೆನೊಯಿಂಗ್‌ ಮತ್ತು ಕಯಾಕಿಂಗ್ ಕ್ರೀಡೆಗಳನ್ನು ಆಯೋಜಿಸಲಾಗುವುದು ಎಂದು ಅಕಾಡೆಮಿಯ ಅಧಿಕಾರಿ ಜಿತೇಂದ್ರ ಶೆಟ್ಟಿ ತಿಳಿಸಿದರು.

ಸಿಂಧುಗೆ ಆಹ್ವಾನ: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್ ಪಿ.ವಿ.ಸಿಂಧು ಅವರನ್ನು ದಸರಾ ಕೂಟಕ್ಕೆ ಆಹ್ವಾನಿಸಲಾಗಿದೆ. ದಸರಾ ಕ್ರೀಡೆ, ಯುವ ದಸರಾ ಅಥವಾ ಇತರ ಯಾವುದಾದರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Post Comments (+)