ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಕಾ, ಕುಶಾಲ್‌ಗೆ ಅಗ್ರಸ್ಥಾನ

ದಸರಾ ಉತ್ಸವದ ಈಜು ಚಾಂಪಿಯನ್‌ಷಿಪ್‌ಗೆ ತೆರೆ
Last Updated 15 ಅಕ್ಟೋಬರ್ 2018, 14:23 IST
ಅಕ್ಷರ ಗಾತ್ರ

ಮೈಸೂರು: ಪಿಇಟಿ ಈಜು ಕೇಂದ್ರದ ಎಸ್‌.ಕುಶಾಲ್‌ ಮತ್ತು ಬೆಂಗಳೂರು ಈಜು ಸಂಶೋಧನಾ ಕೇಂದ್ರದ (ಬಿಎಸ್‌ಆರ್‌ಸಿ) ಭೂಮಿಕಾ ಆರ್‌ ಕೇಸರ್ಕರ್ ಅವರು ದಸರಾ ಈಜು ಕೂಟದ ಕೊನೆಯ ದಿನ ಚಿನ್ನ ಗೆದ್ದುಕೊಂಡರು.

ಚಾಮುಂಡಿವಿಹಾರ ಈಜುಕೊಳದಲ್ಲಿ ಸೋಮವಾರ ನಡೆದ ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಕುಶಾಲ್ 30.24 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಬಸವನಗುಡಿ ಈಜು ಕೇಂದ್ರದ (ಬಿಎಸಿ) ಎಂ.ಶರತ್‌ (30.49ಸೆ.) ಎರಡನೇ ಸ್ಥಾನ ಪಡೆದರೆ, ಮತ್ಸ್ಯ ಇಂಕ್ ಕ್ಲಬ್‌ನ ಮಿಹಿರ್‌ ಅಹುಜಾ (32.62 ಸೆ.) ಮೂರನೇ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ಭೂಮಿಕಾ ಅವರು 33.75 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಬಿಎಸಿಯ ವಿ.ಮೋಹಿತ್‌ ಮತ್ತು ಖುಷಿ ದಿನೇಶ್ ಅವರು 400 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನ ಪಡೆದರುಕೊಂಡರು.

ಫಲಿತಾಂಶ: ಪುರುಷರ ವಿಭಾಗ: 50 ಮೀ. ಬ್ಯಾಕ್‌ಸ್ಟ್ರೋಕ್: ಎಸ್‌.ಕುಶಾಲ್ (ಪಿಇಟಿ ಈಜು ಕೇಂದ್ರ)–1, ಎಂ.ಶರತ್ (ಬಿಎಸಿ)–2, ಮಿಹಿರ್ ಅಹುಜಾ (ಮತ್ಸ್ಯ ಇಂಕ್)–3 ಕಾಲ: 30.24 ಸೆ.

200 ಮೀ. ಬಟರ್‌ಫ್ಲೈ: ಸೈಫ್‌ ಚಂದನ್‌ ಅಲಿ (ಬಿಎಸ್‌ಆರ್‌ಸಿ)–1, ವಲ್ಲಭ ಕೃಷ್ಣ (ಪೂಜಾ ಈಜು ಕೇಂದ್ರ)–2, ಅಚ್ಯುತ್‌ ವಿ.ಆರ್‌. (ನೆಟ್ಟಕಲ್ಲಪ್ಪ ಈಜು ಕೇಂದ್ರ)–3 ಕಾಲ: 2 ನಿ. 13.46 ಸೆ.

400 ಮೀ. ಫ್ರೀಸ್ಟೈಲ್: ವಿ.ಮೋಹಿತ್ (ಬಿಎಸಿ)–1, ರಯಾನ್‌ ಮೊಹಮ್ಮದ್ (ಬಿಎಸಿ)–2, ವಿಷ್ಣು ಎಸ್‌.ಹೊನ್ನವಳ್ಳಿ (ಪೂಜಾ ಈಜು ಕೇಂದ್ರ)–3 ಕಾಲ: 4 ನಿ.19.33 ಸೆ.

ಮಹಿಳೆಯರ ವಿಭಾಗ: 50 ಮೀ. ಬ್ಯಾಕ್‌ಸ್ಟ್ರೋಕ್: ಭೂಮಿಕಾ ಆರ್‌.ಕೇಸರ್ಕರ್(ಬಿಎಸ್‌ಆರ್‌ಸಿ)–1, ಸಾನಿಯಾ ಜೆಸ್ಲಿನ್‌ ಡಿಸೋಜಾ (ಜೈಹಿಂದ್ ಈಜು ಕ್ಲಬ್‌, ಮಂಗಳೂರು)–3 ಕಾಲ: 33.75 ಸೆ.

200 ಮೀ. ಬಟರ್‌ಫ್ಲೈ: ಜಿ.ಸಾಚಿ (ಬಿಎಸಿ)–1, ಅನ್ವೇಶಾ ಗಿರೀಶ್ (ವಿಜಯನಗರ ಈಜು ಕೇಂದ್ರ)–2, ವಿಭಾ ಅಪರ್ಣಾ ಭೋಂಸ್ಲೆ (ಪೂಜಾ ಈಜು ಕೇಂದ್ರ)–3

400 ಮೀ. ಫ್ರೀಸ್ಟೈಲ್: ಖುಷಿ ದಿನೇಶ್ (ಬಿಎಸಿ)–1, ಎಸ್‌.ವಿ.ನಿಖಿತಾ (ಬಿಎಸಿ)–2, ಅನ್ವೇಶಾ ಗಿರೀಶ್ (ವಿಜಯನಗರ ಈಜು ಕೇಂದ್ರ)–3. ಕಾಲ: 4 ನಿ. 44.81 ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT