ಗುರುವಾರ , ಅಕ್ಟೋಬರ್ 17, 2019
28 °C
ಅವಿನಾಶ್‌ ಮತ್ತು ದೀಕ್ಷಾಗೆ ತಲಾ ಎರಡು ಚಿನ್ನ

ದಸರಾ ಈಜು: ಬೆಂಗಳೂರು ಸ್ಪರ್ಧಿಗಳ ಪ್ರಾಬಲ್ಯ

Published:
Updated:
ಮಹಿಳೆಯರ 50 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ದೀಕ್ಷಾ ರಮೇಶ್

ಮೈಸೂರು: ಬೆಂಗಳೂರು ನಗರ ವಿಭಾಗದ ಸ್ಪರ್ಧಿಗಳು ಶುಕ್ರವಾರ ಕೊನೆಗೊಂಡ ದಸರಾ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಪ್ರಾಬಲ್ಯ ಮೆರೆದರು.

ಎಸ್.ಹಿತೇನ್‌ ಮಿತ್ತಲ್, ಅವಿನಾಶ್‌ ಮಣಿ ಮತ್ತು ದೀಕ್ಷಾ ರಮೇಶ್‌ ಅವರು ಅಂತಿಮ ದಿನ ತಲಾ ಎರಡು ಚಿನ್ನದ ಪದಕಗಳನ್ನು ಗೆದ್ದುಕೊಂಡರು.

ಫಲಿತಾಂಶ ಹೀಗಿದೆ: ಪುರುಷರ ವಿಭಾಗ: 50 ಮೀ. ಬ್ರೆಸ್ಟ್‌ಸ್ಟ್ರೋಕ್: ಎಸ್‌.ಹಿತೇನ್‌ ಮಿತ್ತಲ್ (ಬೆಂಗಳೂರು ನಗರ ವಿಭಾಗ)–1, ನೀಲ್‌ ಮಸ್ಕರೇನಸ್‌ (ಮೈಸೂರು)–2, ಎಲ್‌.ಮಣಿಕಂಠ (ಬೆಂಗಳೂರು ಗ್ರಾಮಾಂತರ)–3. ಕಾಲ: 31.85 ಸೆ. 50 ಮೀ. ಫ್ರೀಸ್ಟೈಲ್: ಎಸ್‌.ಹಿತೇನ್‌ ಮಿತ್ತಲ್ (ಬೆಂಗಳೂರು ನಗರ ವಿಭಾಗ)–1, ಎಂ.ವಿ.ಜವೀನ್ (ಮೈಸೂರು ವಿಭಾಗ)–2, ಪೃಥ್ವಿ ಗೌಡ (ಮೈಸೂರು ವಿಭಾಗ)–3. ಕಾಲ: 24.16 ಸೆ.

100 ಮೀ. ಬಟರ್‌ಫ್ಲೈ: ಅವಿನಾಶ್‌ ಮಣಿ (ಬೆಂಗಳೂರು ನಗರ)–1, ಎಂ.ಎಲ್‌. ಉದಯ್ (ಮೈಸೂರು ನಗರ)–2, ಸ್ಮರಣ್‌ ಎಂ. (ಬೆಳಗಾವಿ)–3. ಕಾಲ: 1 ನಿ. 1.59 ಸೆ.

200 ಮೀ. ಫ್ರೀಸ್ಟೈಲ್‌: ಅವಿನಾಶ್‌ ಮಣಿ (ಬೆಂಗಳೂರು ನಗರ)–1, ಹೇಮಂತ್‌ ಜೆ. (ಮೈಸೂರು)–2, ಎಂ.ವಿ.ಜವೀನ್‌ (ಮೈಸೂರು)–3. ಕಾಲ: 2 ನಿ. 54.36 ಸೆ.

200 ಮೀ. ಬ್ಯಾಕ್‌ಸ್ಟ್ರೋಕ್‌: ಬಿ.ಜತಿನ್‌ (ಬೆಂಗಳೂರು ನಗರ)–1, ಎಸ್‌.ಕುಶಾಲ್‌ (ಮೈಸೂರು)–2, ಪ್ರಥಮ್‌ ಎ.ಕುಂದರ್‌ (ಮೈಸೂರು)–3. ಕಾಲ: 2 ನಿ. 25.44 ಸೆ.

800 ಮೀ. ಫ್ರೀಸ್ಟೈಲ್‌: ಧ್ಯಾನ್‌ ಬಾಲಕೃಷ್ಣ (ಬೆಂಗಳೂರು ನಗರ)–1, ಹೇಮಂತ್‌ ಜೆ (ಮೈಸೂರು)–2, ಎಲ್‌.ಮಣಿಕಂಠ (ಬೆಂಗಳೂರು ಗ್ರಾಮಾಂ ತರ)–3. ಕಾಲ: 9 ನಿ. 20.93 ಸೆ.

ಮಹಿಳೆಯರ ವಿಭಾಗ: 50 ಮೀ. ಬ್ರೆಸ್ಟ್‌ಸ್ಟ್ರೋಕ್: ದೀಕ್ಷಾ ರಮೇಶ್ (ಬೆಂಗಳೂರು ನಗರ)–1, ರಿದ್ದಿ ಎಸ್‌. ಬೊಹ್ರಾ (ಬೆಂಗಳೂರು ನಗರ)–2, ದಿಯಾ ಡಿ.ಶೆಟ್ಟಿ (ಮೈಸೂರು)–3. ಕಾಲ: 35.96 ಸೆ.

50 ಮೀ. ಫ್ರೀಸ್ಟೈಲ್: ದೀಕ್ಷಾ ರಮೇಶ್ (ಬೆಂಗಳೂರು ನಗರ)–1, ಕುಷ್‌ನಾಜ್‌ ಸೋನಿ (ಬೆಂಗಳೂರು ನಗರ)–2, ಸ್ಮೃತಿ (ಮೈಸೂರು)–3. ಕಾಲ: 28 ಸೆ.

100 ಮೀ. ಬಟರ್‌ಫ್ಲೈ: ಅನ್ವೇಷಾ ಗಿರೀಶ್ (ಬೆಂಗಳೂರು ನಗರ)–1, ಎಸ್‌.ತನುಜಾ (ಬೆಂಗಳೂರು ನಗರ)–2, ಸಾನ್ಯ ಡಿ.ಶೆಟ್ಟಿ (ಮೈಸೂರು)–3. ಕಾಲ: 1 ನಿ.7.56 ಸೆ.

200 ಮೀ.ಫ್ರೀಸ್ಟೈಲ್: ದಿವ್ಯಾ ಘೋಷ್‌ (ಬೆಂಗಳೂರು ನಗರ)–1, ವಿ.ಪ್ರೀತಾ (ಮೈಸೂರು)–2, ಸ್ಮೃತಿ (ಮೈಸೂರು)–3. ಕಾಲ: 2 ನಿ. 22. 31 ಸೆ.

200 ಮೀ. ಬ್ಯಾಕ್‌ಸ್ಟ್ರೋಕ್: ಭೂಮಿಕಾ ಆರ್‌. ಕೇಸರ್ಕರ್ (ಬೆಂಗಳೂರು ನಗರ)–1, ವಿ.ಬರ್ಷಾ (ಬೆಂಗಳೂರು ನಗರ)–2, ಸ್ಫೂರ್ತಿ ಆರ್‌. ರಾವ್ (ಮೈಸೂರು)–3.

800 ಮೀ. ಫ್ರೀಸ್ಟೈಲ್: ಜಾಹ್ನವಿ ಪಿ. (ಬೆಳಗಾವಿ)–1, ದಿವ್ಯಾ ಘೋಷ್‌ (ಬೆಂಗಳೂರು ನಗರ)–2, ಎಸ್‌.ಎಸ್‌.ನಂದಿನಿ (ಮೈಸೂರು)–3. ಕಾಲ: 10 ನಿ. 57.25 ಸೆ.

Post Comments (+)