ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಟ್ರಯಥ್ಲಾನ್: ಓಂಕುಮಾರ್, ಅಭಿಜ್ಞಾಗೆ ಅಗ್ರಸ್ಥಾನ

ದಸರಾ ಟ್ರಯಥ್ಲಾನ್: ಕೀರ್ತಿಕುಮಾರ್, ಗೀತಿಕಾ ಮಿಂಚು
Last Updated 7 ಅಕ್ಟೋಬರ್ 2018, 18:39 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರಿನ ಓಂಕುಮಾರ್ ಮತ್ತು ಅಭಿಜ್ಞಾ ಆನಂದ್ ಅವರು ದಸರಾ ಅಂಗವಾಗಿ ಭಾನುವಾರ ಇಲ್ಲಿ ಆಯೋಜಿಸಿದ್ದ ಟ್ರಯಥ್ಲಾನ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ‘ಸ್ಪ್ರಿಂಟ್‌ ಟ್ರಯಥ್ಲಾನ್’ ವಿಭಾಗದಲ್ಲಿ ಅಗ್ರಸ್ಥಾನ ಪಡೆದುಕೊಂಡರು.

‘ಸೂಪರ್‌ ಸ್ಪ್ರಿಂಟ್‌’ ವಿಭಾಗದಲ್ಲಿ ಬೆಂಗಳೂರಿನ ಕೀರ್ತಿ ಕುಮಾರ್‌ ಮತ್ತು ಕೊಡಗಿನ ಗೀತಿಕಾ ಬಸಪ್ಪ ಅವರು ಮೊದಲ ಸ್ಥಾನ ತಮ್ಮದಾಗಿಸಿಕೊಂಡರು.

ದಸರಾ ಉತ್ಸವದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಮತ್ತ ಜಿಲ್ಲಾಡಳಿತ ವತಿಯಿಂದ ಇದೇ ಮೊದಲ ಬಾರಿಗೆ ಟ್ರಯಥ್ಲಾನ್‌ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪ್ರಿಂಟ್‌ ವಿಭಾಗದ ಸ್ಪರ್ಧಿಗಳು 750 ಮೀ. ಈಜು, 20 ಕಿ.ಮೀ. ಸೈಕ್ಲಿಂಗ್‌, 5 ಕಿ.ಮೀ. ಓಟ ಹಾಗೂ ಸೂಪರ್‌ ಸ್ಪ್ರಿಂಟ್‌ ವಿಭಾಗದಲ್ಲಿ ಸ್ಪರ್ಧಿಗಳು 400 ಮೀ ಈಜು, 10 ಕಿ.ಮೀ. ಸೈಕ್ಲಿಂಗ್‌ ಮತ್ತು 2.5 ಕಿ.ಮೀ ಓಟದಲ್ಲಿ ಪಾಲ್ಗೊಂಡರು.

ಮೈಸೂರಿನ 67ರ ಹರೆಯದ ಪೀಯೂಷ್‌ ಕಾಂತಿ ದಾಸ್‌ ಅವರು ಈ ಸ್ಪರ್ಧೆ ಪೂರ್ಣಗೊಳಿಸಿದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡರೆ, ಬೆಂಗಳೂರಿನ 10ರ ಹರೆಯದ ಬಾಲಕ ಯಜತ್ ಅವರು ಅತಿಕಿರಿಯ ಸ್ಪರ್ಧಿ ಎಂಬ ಗೌರವ ಪಡೆದುಕೊಂಡರು.

ಫಲಿತಾಂಶ ಹೀಗಿದೆ: ಸ್ಪ್ರಿಂಟ್‌ ಟ್ರಯಥ್ಲಾನ್: 16 ವರ್ಷಕ್ಕಿಂತ ಮೇಲಿನವರು:

ಪುರುಷರ ವಿಭಾಗ: ಟಿ.ಎಚ್.ಓಂಕುಮಾರ್ (ಬೆಂಗಳೂರು)–1, ಆರ್‌.ವಿನೋದ್ (ಬೆಂಗಳೂರು)–2, ಎನ್.ಎಸ್‌.ಸುಜನ್ (ಮೈಸೂರು)–3

ಮಹಿಳೆಯರ ವಿಭಾಗ: ಅಭಿಜ್ಞಾ ಆನಂದ್ (ಬೆಂಗಳೂರು)–1, ಶಿವಾನಿ ಸಂಕಲ್ಪ್ (ಮುಂಬೈ)–2, ಆರ್‌.ದಿವ್ಯಾ (ಬೆಂಗಳೂರು)–3

16 ವರ್ಷಕ್ಕಿಂತ ಕೆಳಗಿನ ಬಾಲಕಿಯರು: ಶ್ರುತಿ ಅರುಣ್ ಪಾಟೀಲ (ಬೆಳಗಾವಿ)–1, ಎಂ.ದಿಶ್ನಾ (ಮೈಸೂರು)–2, ಪ್ರಾಚಿ ನಗರ್ (ಬೆಂಗಳೂರು)–3

ಸೂಪರ್ ಸ್ಪ್ರಿಂಟ್‌ ಟ್ರಯಥ್ಲಾನ್: 16 ವರ್ಷಕ್ಕಿಂತ ಮೇಲಿನವರು: ಪುರುಷರ ವಿಭಾಗ: ಕೀರ್ತಿ ಕುಮಾರ್ (ಬೆಂಗಳೂರು)–1, ಆರ್.ಅಮೋಘ್ (ಬೆಂಗಳೂರು)–2, ತೇಜಸ್‌ ಜಿ ಅಯ್ಯರ್‌ (ಮೈಸೂರು)–3

ಮಹಿಳೆಯರ ವಿಭಾಗ: ಗೀತಿಕಾ ಬಸಪ್ಪ (ಕೊಡಗು)–1, ಪೂರ್ಣಿಮಾ ಪಿ. (ಮೈಸೂರು)–2, ವೈ.ಯಶಿಕಾ (ಮೈಸೂರು)–3

16 ವರ್ಷಕ್ಕಿಂತ ಕೆಳಗಿನವರು: ಬಾಲಕರ ವಿಭಾಗ: ಎಸ್.ನಿಹಾರ್‌ ನಾಯ್ಕ್–1, ಎಸ್‌.ಮನೋಜ್‌ ಗೌಡ–2, ಬಿ.ಆರ್‌.ಶ್ರೇಯಸ್‌ ಸಿಂಗ್‌ (ಎಲ್ಲರೂ ಮೈಸೂರು)–3.

ಬಾಲಕಿಯರ ವಿಭಾಗ: ಎಚ್‌.ಎನ್‌.ನಾಗಸಿರಿ (ಮೈಸೂರು)–1, ವೈ.ಎಸ್‌.ಶೋಭಿತಾ (ಬೆಂಗಳೂರು)–2, ಪರ್ಲ್‌ ಅನಿಲ್ (ಮೈಸೂರು–3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT