ಶನಿವಾರ, ಆಗಸ್ಟ್ 24, 2019
28 °C

ಕಬಡ್ಡಿ: ದೀಪಕ್‌ ಸೂಪರ್ ಆಟ; ಪ್ಯಾಂಥರ್ಸ್‌‌ಗೆ ಜಯ

Published:
Updated:
Prajavani

ಅಹಮದಾಬಾದ್ : ದೀಪಕ್ ಹೂಡಾ ಅವರ ‘ಸೂಪರ್’ ಆಟದ ನೆರವಿನಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಗುರುವಾರ ಭರ್ಜರಿ ಜಯ ಸಾಧಿಸಿತು.

ಇಲ್ಲಿನ ಏಕಾ ಅರೆನಾ ಬೈ ಟ್ರಾನ್ಸ್‌ಸ್ಟೇಡಿಯಾದಲ್ಲಿ ನಡೆದ ಪಂದ್ಯದಲ್ಲಿ ಪ್ಯಾಂಥರ್ಸ್‌‌ 33–25ರಲ್ಲಿ ಪುಣೇರಿ ಪಲ್ಟನ್ ಸವಾಲನ್ನು ಮೆಟ್ಟಿ ನಿಂತಿತು.

ಮೊದಲ ರೇಡ್‌ನಿಂದಲೇ ಪಾಯಿಂಟ್ ಗಳಿಸುತ್ತ ಸಾಗಿದ ದೀಪಕ್ ಹೂಡಾ ಅವರು ತಂಡಕ್ಕೆ ಸತತ ಮುನ್ನಡೆ ತಂದುಕೊಟ್ಟರು. ಆದರೆ ಮೂರನೇ ನಿಮಿಷದಲ್ಲಿ ಮಂಜೀತ್ ಅವರ ಅಮೋಘ ರೇಡ್ ಮೂಲಕ ಪಲ್ಟನ್ 3–3ರ ಸಮಬಲ ಸಾಧಿಸಿತು. ಪಟ್ಟು ಬಿಡದ ಪಿಂಕ್ ಪ್ಯಾಂಥರ್ಸ್‌ 16ನೇ ನಿಮಿಷದಲ್ಲಿ 15–8ರ ಮುನ್ನಡೆ ಸಾಧಿಸಿತು. ಮೊದಲಾರ್ಧದ ಮುಕ್ತಾಯಕ್ಕೆ ಹಿನ್ನಡೆಯನ್ನು 11–17ಕ್ಕೆ ಇಳಿಸುವಲ್ಲಿ ಪುಣೇರಿ ಯಶಸ್ವಿಯಾಯಿತು.

ದ್ವಿತೀಯಾರ್ಧದಲ್ಲಿ ಪಿಂಕ್ ಪ್ಯಾಂಥರ್ಸ್ ಪ್ರಬಲ ಆಟ ಆಡಿತು. ಪಂದ್ಯ ಮುಕ್ತಾಯಕ್ಕೆ ಎರಡು ನಿಮಿಷ ಬಾಕಿ ಇದ್ದಾಗ ದೀಪಕ್ ಹೂಡಾ ಸೂಪರ್ ಟೆನ್ ಸಾಧನೆ ಮಾಡಿದರು. ವಿಶಾಲ್‌ (), ನಿತಿನ್ ರಾವಲ್‌ (), ಸಂದೀಪ್ ಧುಲ್‌ (), ನೀಲೇಶ್ ಸಾಲುಂಕೆ () ಮತ್ತು ಅಮಿತ್ ಹೂಡ () ಅವರೂ ಉತ್ತಮ ಕಾಣಿಕೆ ನೀಡಿದರು. ಪಲ್ಟನ್ ಪರ ಮಂಜೀತ್ 5 ಪಾಯಿಂಟ್ ಗಳಿಸಿದರು.

Post Comments (+)