ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಯೂತ್ ಬಾಕ್ಸಿಂಗ್‌: ದೀಪಕ್, ವಂಶಜ್ ಶುಭಾರಂಭ

Last Updated 16 ನವೆಂಬರ್ 2022, 21:16 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ದೀಪಕ್ ಹಾಗೂ ವಂಶಜ್ ಅವರು ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಆರಂಭ ಮಾಡಿದ್ದಾರೆ.

ಸ್ಪೇನ್‌ನ ಲಾ ನೂಸಿಯಾದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಮಂಗಳವಾರ ದೀಪಕ್‌ (75 ಕೆಜಿ ವಿಭಾಗ) ಅವರು ಅಲ್ಬೇನಿಯಾದ ಯುಸೇದ್‌ ನಿಕಾ ಎದುರುಆರ್‌ಎಸ್‌ಸಿ (ರೆಫರಿಯಿಂದ ಸ್ಪರ್ಧೆ ಸ್ಥಗಿತ) ಆಧಾರದಲ್ಲಿ ಗೆದ್ದರು.

63.5 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಂಶಜ್ ಅವರು ಉಜ್ಬೆಕಿಸ್ತಾನದ ಬೊಲ್ತಯೆವ್‌ ಶಾವಕತೊನ್ ಎದುರು ಪಾರಮ್ಯ ಮೆರೆದರು. 5–0 ಪಾಯಿಂಟ್‌ಗಳಿಂದ ಗೆದ್ದು ಬೀಗಿದರು.

ಕಳೆದ ಬಾರಿಯ ವಿಶ್ವ ಯೂತ್‌ ಬಾಕ್ಸಿಂಗ್‌ನಲ್ಲಿ ಭಾರತ ತಂಡ ಎಂಟು ಚಿನ್ನ ಸೇರಿದಂತೆ ಒಟ್ಟು 11 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT