ಗುರುವಾರ , ಆಗಸ್ಟ್ 22, 2019
23 °C

ದೀಪಕ್ ಕುಸ್ತಿ ಚಾಂಪಿಯನ್

Published:
Updated:
Prajavani

ನವದೆಹಲಿ (ಪಿಟಿಐ): ಭಾರತದ ದೀಪಕ್ ಪೂನಿಯಾ ಬುಧವಾರ  ಜೂನಿಯರ್ ವಿಭಾಗದ ಕುಸ್ತಿಯಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಎಸ್ತೋನಿಯಾದ ಟ್ಯಾಲ್ಲಿನ್‌ ನಲ್ಲಿ ನಡೆದ 18 ವರ್ಷದೊಳಗಿನವರ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಅವರು 86 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಚಿನ್ನ ಗೆದ್ದರು. ಫೈನಲ್‌ ಬೌಟ್‌ನಲ್ಲಿ ದೀಪಕ್ ಅವರು ರಷ್ಯಾದ ಅಲಿಕ್ ಶಿಬುಜುಕೋವ್ ಅವರ ವಿರುದ್ಧ ಮೇಲುಗೈ ಸಾಧಿಸಿದರು. ಬೌಟ್‌ 2–2ರಿಂದ ಸಮಬಲವಾಯಿತು. ಆದರೆ, ಕೊನೆಯ ಪಾಯಿಂಟ್‌ ಗಳಿಕೆಯ ಆಧಾರದಲ್ಲಿ ದೀಪಕ್ ಅವರನ್ನು ವಿಜಯೀ ಎಂದು ಘೋಷಿಸಲಾಯಿತು.

18 ವರ್ಷಗಳ ನಂತರ ಈ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ಲಭಿಸಿದೆ. 2001ರಲ್ಲಿ ರಮೇಶ್ ಕುಮಾರ್ (69 ಕೆ.ಜಿ)  ಮತ್ತು ಪಲ್ವಿಂದರ್ ಸಿಂಗ್ ಚೀಮಾ (130 ಕೆ.ಜಿ) ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ದೀಪಕ್ 2016ರಲ್ಲಿ ಕೆಡೆಟ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದರು.

 

Post Comments (+)