ಶನಿವಾರ, ಅಕ್ಟೋಬರ್ 23, 2021
25 °C
ಮತ್ಸ್ಯ, ಡಾಲ್ಫಿನ್ ಪಾರಮ್ಯ

ರಾಜ್ಯ ಈಜು ಚಾಂಪಿಯನ್‌ಷಿಪ್‌: ಧೀನಿಧಿ, ತನಿಶಿ ಕೂಟ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡಾಲ್ಫಿನ್ ಅಕ್ವಾಟಿಕ್ಸ್‌ನ ಧೀನಿಧಿ ದೇಸಿಂಗು ಹಾಗೂ ತನಿಶಿ ಗುಪ‍್ತಾ ಅವರು ರಾಜ್ಯ ಈಜುಸಂಸ್ಥೆ ಆಶ್ರಯದ ಈಜು ಚಾಂಪಿಯನ್‌ಷಿಪ್‌ನ ಕ್ರಮವಾಗಿ ಬಾಲಕಿಯರ 200 ಮೀಟರ್ಸ್ ಮೆಡ್ಲೆ ಹಾಗೂ 50 ಮೀಟರ್ಸ್ ಬಟರ್‌ಫ್ಲೈ ವಿಭಾಗದ ಮೂರನೇ ಗುಂಪಿನ ಸ್ಪರ್ಧೆಯಲ್ಲಿ ಎರಡನೇ ದಿನ ಕೂಟ ದಾಖಲೆ ಬರೆದರು.

ಬಸವನಗುಡಿ ಈಜುಕೇಂದ್ರದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಧೀನಿಧಿ 2 ನಿಮಿಷ 33.84 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗಳಿಸಿದರು. ಅವರು ಬಾಲಕಿಯರ 100 ಮೀ. ಫ್ರೀಸ್ಟೈಲ್‌ನಲ್ಲೂ 1ನಿಮಿಷ 2.30 ಸೆಕೆಂಡುಗಳ ಸಾಧನೆಯೊಂದಿಗೆ ಕೂಟ ದಾಖಲೆ ಬರೆದರು.

ಬಾಲಕಿಯರ 50 ಮೀ. ಬಟರ್‌ಫ್ಲೈನಲ್ಲಿ ತನಿಶಿ 30.82 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನಕ್ಕೆ ಮುತ್ತಿಟ್ಟರು.

ಡೈವಿಂಗ್‌ನ ಪ್ಲಾಟ್‌ಫಾರ್ಮ್‌ ಪುರುಷರ ಮುಕ್ತ ವಿಭಾಗದಲ್ಲಿ ಎಂಇಜಿಯ ರಾಜದ್ವೀಪ್ ದಾಸ್‌ ಚಿನ್ನ ದ ಪದಕ ಗೆದ್ದರೆ, ಬಾಲಕರ ಗುಂಪು 1, 2 ಮತ್ತು ಮೂರರ ವಿಭಾಗದಲ್ಲಿ  ಡಾಲ್ಫಿನ್‌ ಈಜು ಕೇಂದ್ರದ ಕ್ರಮವಾಗಿ ರೋಹನ್ ಆರಾಧ್ಯ, ಆರ್ಯನ್ ಮೊಸೆಸ್‌ ವ್ಯಾಸ್ ಹಾಗೂ ಎಸ್‌. ಸೋಹನ್ ಸೂರಿ ಅಗ್ರಸ್ಥಾನ ಗಳಿಸಿದರು.

ಡೈವಿಂಗ್‌ನ ಫ್ಲಾಟ್‌ಫಾರ್ಮ್‌ ಬಾಲಕಿಯರ ಗುಂಪು ಮೂರರ ವಿಭಾಗದಲ್ಲಿ ಡಾಲ್ಫಿನ್‌ನ ಚೈತ್ರಾ ಎಸ್‌. ಪ್ರಸಾದ್‌ ಚಿನ್ನ ತಮ್ಮದಾಗಿಸಿಕೊಂಡರು.

ಎರಡನೇ ದಿನದ ಫಲಿತಾಂಶಗಳು
ಬಾಲಕರು

200 ಮೀ. ಮೆಡ್ಲೆ: ಗುಂಪು 3: ದ್ರುಪದ್ ರಾಮಕೃಷ್ಣ (ಬಸವನಗುಡಿ)–1, ಕಾಲ: 2:47.48; ನೈತಿಕ್ ಎನ್‌ (ಡಾಲ್ಫಿನ್‌)–2, ರಿಷಿತ್ ರಂಗನ್‌ (ಬಿಎಸಿ)–3;
ಗುಂಪು 4: ಅಥರ್ವ್‌ ಪಾಲ್ ಸಿಂಗ್ ರಾಥೋಡ್‌ (ಗೋಲ್ಡನ್ ಫಿನ್ಸ್)–1, ಕಾಲ:2:56.17; ದರ್ಶವೀರಸಿಂಗ್ ಜಬ್ಬಿ (ಡಾಲ್ಫಿನ್‌)–2, ವೈಭವ್‌ ಪ್ರತಾಪ್ ಎನ್‌. (ಡಿಕೆವಿ)–3;
ಗುಂಪು 5: ಜಾಸ್‌ ಸಿಂಗ್‌ (ಮತ್ಸ್ಯ)–1, ಕಾಲ:2:57.83, ಎಸ್‌. ಸೋಮಶೇಖರ್‌ (ಗೋಲ್ಡನ್ ಫಿನ್ಸ್) –2, ಅರ್ಜುನ್ ರಾಘವನ್‌ (ಡಾಲ್ಫಿನ್‌)–3. 50 ಮೀ.

ಬ್ಯಾಕ್‌ಸ್ಟ್ರೋಕ್‌: ಗುಂಪು 3: ಅಕ್ಷಜ್ ಠಾಕೂರಿಯಾ (ಡಾಲ್ಫಿನ್‌)–1, ಕಾಲ: 32.88 ಸೆ; ಆಡ್ರಿಯನ್‌ ನೀಲ್ ಸೆರಾವೊ (ಜಿಎಎಫ್‌ಆರ್‌ಎವೈ)–2, ಶಾನ್‌ ಡಾಮಿನಿಕ್‌ (ಸ್ವಿಮ್‌ಲೈಫ್‌)–3.
ಗುಂಪು 4: ಶರಣ್ ಶ್ರೀಧರ್‌ (ಮತ್ಸ್ಯ)–1, ಕಾಲ: 36.26; ಅದ್ವೈತ್‌ ವಿ.ಎಮ್‌. (ಬಿಎಸಿ)–2, ಚಿನ್ಮಯ್ ವಿ. (ಜೀ ಸ್ವಿಮ್‌)–3.
ಗುಂಪು 5: ಜಾಸ್‌ ಸಿಂಗ್‌ (ಮತ್ಸ್ಯ)–1, ಕಾಲ: 38.10 ಸೆ., ಕ್ರಿಶ್ ಎಸ್. (ಬಿಎಸಿ)–2, ಅರ್ಜುನ್ ರಾಘವನ್‌ (ಡಾಲ್ಫಿನ್‌)–3. 100 ಮೀ.

ಬ್ರೆಸ್ಟ್‌ಸ್ಟ್ರೋಕ್‌: ಗುಂಪು 3: ಯಶ್ ಎಚ್‌. ಪಾಲ್‌ (ಬಿಎಸಿ)–1, ಕಾಲ: 1:25.47, ರಕ್ಷಣ್ ಪಿ. (ಡಾಲ್ಫಿನ್‌)–2, ಆಡ್ರಿಯನ್‌ ನೀಲ್ ಸೆರಾವೊ(ಜಿಎಎಫ್‌ಆರ್‌ಎವೈ)–3.
ಗುಂಪು 4: ರೇಯಾನ್ಷಕಾಂತಿ ವೈ. (ಬಿಎಸಿ)–1, ಕಾಲ; 1:30.68, ಅಥರ್ವ್‌ ಪಾಲ್ ಸಿಂಗ್ ರಾಥೋಡ್‌ (ಗೋಲ್ಡನ್ ಫಿನ್ಸ್)–2, ವೈಭವ್‌ ಪ್ರತಾಪ್ ಎನ್‌. (ಡಿಕೆವಿ)–3.
ಗುಂಪು 5: ಜಾಸ್‌ ಸಿಂಗ್‌ (ಮತ್ಸ್ಯ)–1, ಕಾಲ:1:35.01, ಅರ್ಜುನ್ ರಾಘವನ್‌ (ಡಾಲ್ಫಿನ್‌)–2, ಅದ್ವೈತ್ ದಳವಿ–3. 50 ಮೀ.

ಬಟರ್‌ಫ್ಲೈ: ಗುಂಪು 3: ಅಕ್ಷಜ್ ಠಾಕೂರಿಯಾ (ಡಾಲ್ಫಿನ್‌)–1, ಕಾಲ: 31.40, ರಿಷಿತ್ ರಂಗನ್‌ (ಬಿಎಸಿ)–2, ಅಕ್ಷಜ್ ಪಿ. (ವಿಜಯನಗರ)–3.
ಗುಂಪು 4: ಶರಣ್ ಶ್ರೀಧರ್‌ (ಮತ್ಸ್ಯ)–1, ಕಾಲ: 34.02, ರೇಯಾನ್ಷಕಾಂತಿ ವೈ. (ಬಿಎಸಿ)–2, ದರ್ಶವೀರಸಿಂಗ್ ಜಬ್ಬಿ (ಡಾಲ್ಫಿನ್‌)–3.
ಗುಂಪು 5: ಅರ್ಜುನ್ ರಾಘವನ್‌ (ಡಾಲ್ಫಿನ್‌)–1, ಕಾಲ; 38.87, ಕ್ರಿಶ್ ಎಸ್‌. (ಬಿಎಸಿ)–2, ವೇದಾಂತ್ ಮಿಸಾಳೆ (ಸ್ವಿಮರ್ಸ್ ಕ್ಲಬ್ ಬೆಳಗಾವಿ)–3. 100 ಮೀ.

ಫ್ರೀಸ್ಟೈಲ್: ಗುಂಪು 3: ಅಕ್ಷಜ್ ಠಾಕೂರಿಯಾ (ಡಾಲ್ಫಿನ್‌)–1, ಕಾಲ:1:06.44, ರಿಷಿತ್ ರಂಗನ್‌ (ಬಿಎಸಿ)–2, ದ್ರುಪದ್ ರಾಮಕೃಷ್ಣ (ಬಿಎಸಿ)–3.
ಗುಂಪು 4: ಶರಣ್ ಶ್ರೀಧರ್‌ (ಮತ್ಸ್ಯ)–1, ಕಾಲ:1:09.27, ಸಮರ್ಥ್‌ ಗೌಡ ಆರ್‌. (ಸ್ವಿಮ್‌ಲೈಪ್‌)–2, ಸುಚೇತ್ ಎಸ್‌. (ಎಂ.ಪಿ. ಅಕ್ವಾಟಿಕ್ಸ್)–3.
ಗುಂಪು 5: ಜಾಸ್‌ ಸಿಂಗ್‌ (ಮತ್ಸ್ಯ)–1 ಕಾಲ: 1:13.13, ಎಸ್‌. ಸೋಮಶೇಖರ್ (ಗೋಲ್ಡನ್ ಫಿನ್ಸ್)–2, ಕ್ರಿಶ್ ಎಸ್‌ (ಬಿಎಸಿ)–3.

ಬಾಲಕಿಯರು
200 ಮೀ. ಮೆಡ್ಲೆ: ಗುಂಪು 3: ಧೀನಿಧಿ ದೇಶಿಂಗು (ಡಾಲ್ಫಿನ್‌)–1, ಕಾಲ: 2:33.84(ಕೂಟ ದಾಖಲೆ), ತನಿಶಿ ಗುಪ್ತಾ (ಡಾಲ್ಫಿನ್‌)–2, ನಯಿಷಾ (ಜಿ ಸ್ವಿಮ್)–3.
ಗುಂಪು 4: ಅಲಿಸ್ಸಾ ಸ್ವೀಡಾಲ್ ರೆಗೊ–1, ಕಾಲ: 3:04.81, ವರ್ಷಾ ಬಿ–2, ಶೆಲಿನ್‌ ಸುನಿಲ್‌–3 (ಮೂವರು ಡಾಲ್ಫಿನ್‌).
ಗುಂಪು 5: ಧೃತಿ ಕರಿಬಸವೇಶ್ವರ (ಜಿ ಸ್ವಿಮ್‌)–1 ಕಾಲ: 3:23.62, ಸಿರಿ ಪ್ರೀತಮ್‌ (ಏಕಲವ್ಯ)–2, ರಿಷ್ಮಿಕಾ (ಬಿಎಸಿ)–2. 50 ಮೀ.

ಬ್ಯಾಕ್‌ಸ್ಟ್ರೋಕ್‌: ಗುಂಪು 3: ನಯಿಶಾ (ಜೀ ಸ್ವಿಮ್‌)–1, ಕಾಲ: 36.24, ತಾನಿಯಾ ಎಂ.ಎನ್‌ (ಜಿಎಎಫ್‌ಆರ್‌ಎವೈ)–2, ಅನ್ಯಾ ಚಕ್ರವರ್ತಿ (ಡಾಲ್ಫಿನ್‌)–3.
ಗುಂಪು 4: ಶೆಲಿನ್‌ ಸುನಿಲ್‌ (ಡಾಲ್ಫಿನ್ಸ್)–1, ಕಾಲ: 42.33, ಆದ್ಯಾ ಗಿರೀಶ್ (ಎಂಪಿ)–2, ಧನ್ಯಾ ನಟರಾಜ್ ನಾಯ್ಕ (ಮತ್ಸ್ಯ)–3.
ಗುಂಪು 5: ವಿಭಾ ರೆಡ್ಡಿ –1, ಕಾಲ: 44.02, ಜನನಿ ವೆಂಕಟೇಶ್ವರ ಪೆರುಮಾಳ್‌–2 (ಇಬ್ಬರೂ ಡಾಲ್ಫಿನ್ಸ್), ಅರುಣಾ ಪವನ್‌ ಆಳ್ವಾ (ಗೋಲ್ಡನ್ ಫಿನ್ಸ್)–3. 100 ಮೀ.

ಫ್ರೀಸ್ಟೈಲ್‌: ಗುಂಪು 3: ಧೀನಿಧಿ ದೇಶಿಂಗು–1, ಕಾಲ: 1:02.30 (ಕೂಟ ದಾಖಲೆ), ತನಿಶಿ ಗುಪ್ತಾ (ಇಬ್ಬರೂ ಡಾಲ್ಫಿನ್ಸ್)–2, ಸಂಜನಾ ಪಿ. (ಜಿಎಎಫ್‌ಆರ್‌ಎವೈ)–3.
ಗುಂಪು 4: ಅಲಿಸ್ಸಾ ಸ್ವೀಡಲ್ ರೆಗೊ (ಡಾಲ್ಫಿನ್)–1, ಕಾಲ: 1:09.57, ತ್ರಿಶಾ ಸಿಂಧು ಎಸ್‌. (ಡಿಕೆವಿ)–2, ವರ್ಷಾ ಬಿ. (ಡಾಲ್ಫಿನ್)–3.
ಗುಂಪು 5: ಅರುಣಾ ಪವನ್ ಆಳ್ವಾ (ಗೋಲ್ಡನ್ ಫಿನ್ಸ್)–1, ಕಾಲ: 1:22.75, ಧೃತಿ ಕರಿಬಸವೇಶ್ವರ (ಜೀ ಸ್ವಿಮ್‌)–2, ಜನನಿ ವೆಂಕಟೇಶ್ವರ ಪೆರುಮಾಳ್‌ (ಡಾಲ್ಫಿನ್‌)–3.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು