ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಂಕೊ ನೆರವಿಗೆ ಬಿಎಫ್‌ಐ

ಕ್ಯಾನ್ಸರ್‌ಪೀಡಿತ ಬಾಕ್ಸರ್‌ಗೆ ಏರ್‌ ಆಂಬುಲೆನ್ಸ್‌ನಲ್ಲಿ ದೆಹಲಿಗೆ ಕರೆತರಲು ನಿರ್ಧಾರ
Last Updated 21 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

ನವದೆಹಲಿ: ಕ್ಯಾನ್ಸರ್‌ಪೀಡಿತ ಬಾಕ್ಸರ್‌ ಡಿಂಕೊ ಸಿಂಗ್‌ ಅವರಿಗೆ ಚಿಕಿತ್ಸೆ ಮುಂದುವರಿಸಲು ಭಾರತ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ನೆರವಿಗೆ ಬಂದಿದೆ. ಅವರನ್ನು ಏಪ್ರಿಲ್‌ 25ರಂದು ಏರ್‌ ಆಂಬುಲೆನ್ಸ್‌ ಮೂಲಕ ಇಂಫಾಲ್‌ನಿಂದ ಇಲ್ಲಿಗೆ ಕರೆತರಲಿದೆ.

ಕೊರೊನಾ ಸೋಂಕು ಪರಿಣಾಮ ಹೇರಿರುವ ಲಾಕ್‌ಡೌನ್‌ ಕಾರಣ,ಸದ್ಯ ಇಂಫಾಲ್‌ನಲ್ಲಿರುವ 41 ವರ್ಷದ ಸಿಂಗ್‌ ಅವರಿಗೆ ನಿಗದಿ ಸಮಯಕ್ಕೆ ರೆಡಿಯೇಷನ್‌ ಚಿಕಿತ್ಸೆ ಪಡೆಯಲು ಸಾಧ್ಯವಾಗಿಲ್ಲ. 15 ದಿನ ಹಿಂದೆ ದೆಹಲಿಯಲ್ಲಿ ಈ ಚಿಕಿತ್ಸೆ ಪಡೆಯಬೇಕಿತ್ತು.

‘ಡಿಂಕೊ ಅವರನ್ನು ಸಂರ್ಪರ್ಕಿಸಿದ್ದೇವೆ. ಅವರ ಚಿಕಿತ್ಸೆ ಅನುಕೂಲವಾಗುವಂತೆ ಏರ್‌ ಆಂಬುಲೆನ್ಸ್‌ನಲ್ಲಿ ಇಲ್ಲಿಗೆ ಕರೆತರುತ್ತೇವೆ‘ ಎಂದು ಬಿಎಫ್‌ಐ ಕಾರ್ಯನಿರ್ವಾಹಕ ನಿರ್ದೇಶಕ ಆರ್‌.ಕೆ.ಸಚೇತಿ ಮಂಗಳವಾರ ತಿಳಿಸಿದರು.

1988ರ ಬ್ಯಾಂಕಾಕ್‌ ಏಷ್ಯನ್‌ ಕ್ರೀಡೆಗಳಲ್ಲಿ ಡಿಂಕೊ ಬ್ಯಾಂಟಂವೇಟ್‌ ವಿಭಾಗದಲ್ಲಿ ಸ್ವರ್ಣಪದಕ ಗೆದ್ದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT