ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ನಲ್ಲಿ ದೇಶಿ ಬ್ಯಾಡ್ಮಿಂಟನ್ ಟೂರ್ನಿಗಳ ಆರಂಭ

Last Updated 31 ಜನವರಿ 2021, 3:12 IST
ಅಕ್ಷರ ಗಾತ್ರ

ನವದೆಹಲಿ: ಬಹು ನಿರೀಕ್ಷಿತ ದೇಶಿ ಬ್ಯಾಡ್ಮಿಂಟನ್ ಟೂರ್ನಿಗಳು ಏಪ್ರಿಲ್‌ನಿಂದ ಪುನರಾರಂಭಗೊಳ್ಳಲಿವೆ. ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಸುಮಾರು ಒಂದು ವರ್ಷದಿಂದ ಬ್ಯಾಡ್ಮಿಂಟನ್ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಏಪ್ರಿಲ್‌ನಲ್ಲಿ ಎರಡು ಸೀನಿಯರ್ ರ‍್ಯಾಂಕಿಂಗ್‌ ಟೂರ್ನಿಗಳನ್ನು ಆಯೋಜಿಸಲಾಗುವುದು ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ತಿಳಿಸಿದೆ.

ಶನಿವಾರ ನಡೆದ ಬಿಎಐ ಕಾರ್ಯಕಾರಿ ಸಮಿತಿಯವರ್ಚುವಲ್ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಯಿತು.

ರಾಜ್ಯ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ, ಎಲ್ಲಾ ರೀತಿಯ ರಾಷ್ಟ್ರೀಯ ಶಿಬಿರಗಳನ್ನು ಏಪ್ರಿಲ್‌ನಿಂದಲೇ ಪುನರಾರಂಭಿಸಲು ಬಿಎಐ ನಿರ್ಧರಿಸಿದೆ.

ಪರಿಷ್ಕೃತ ದೇಶಿ ಟೂರ್ನಿಗಳ ಅನ್ವಯ ಸೀನಿಯರ್ ರ‍್ಯಾಂಕಿಂಗ್ ಟೂರ್ನಿಯನ್ನು ಮೂರು ಹಂತಗಳಾಗಿ ವಿಂಗಡಿಸಲಾಗುತ್ತದೆ. ಹಂತ 3, ವರ್ಷದಲ್ಲಿ ಆರು ಸಿರೀಸ್ ಟೂರ್ನಿಗಳನ್ನು ಒಳಗೊಂಡಿರಲಿದೆ. ಹಂತ 2, ನಾಲ್ಕು ಸೂಪರ್‌ ಸಿರೀಸ್‌ ಟೂರ್ನಿಗಳನ್ನು ಒಳಗೊಂಡಿರಲಿದೆ.

‘ದ ಪ್ರೀಮಿಯರ್ ಸೂಪರ್ ಸಿರೀಸ್ ಟೂರ್ನಿಯನ್ನು ಹಂತ 1ರ ಟೂರ್ನಿ ಎಂದು ಕರೆಯಲಾಗುತ್ತಿದ್ದು, ಇದರಲ್ಲಿ ವರ್ಷಕ್ಕೆ ಎರಡು ಟೂರ್ನಿಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT