ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷೆ ‍ಮುಗಿಸಿದವರ ಒಲಿಂಪಿಕ್ಸ್‌ ಹಾದಿ ಸುಗಮ

ಎಐಯು ಮುಖ್ಯಸ್ಥ ಬ್ರೆಟ್‌ ಕ್ಲೋಥಿಯರ್‌ ಹೇಳಿಕೆ
Last Updated 18 ಏಪ್ರಿಲ್ 2020, 17:57 IST
ಅಕ್ಷರ ಗಾತ್ರ

ಲಂಡನ್‌ (ರಾಯಿಟರ್ಸ್‌): ‘ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿ ಬಿದ್ದು ಈ ವರ್ಷದ ಅಂತ್ಯದೊಳಗೆ ನಿಷೇಧ ಶಿಕ್ಷೆ ಪೂರ್ಣಗೊಳಿಸಲಿರುವ ಅಥ್ಲೀಟ್‌ಗಳು 2021ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಪ್ರಯತ್ನಿಸಬಹುದು’ಎಂದು ಅಥ್ಲೆಟಿಕ್ಸ್‌ ಇಂಟಿಗ್ರಿಟಿ ಯೂನಿಟ್‌ನ (ಎಐಯು) ಮುಖ್ಯಸ್ಥ ಬ್ರೆಟ್‌ ಕ್ಲೋಥಿಯರ್‌ ಶನಿವಾರ ಹೇಳಿದ್ದಾರೆ.

ಈ ವರ್ಷದ ಜುಲೈ ಮತ್ತು ಆಗಸ್ಟ್‌ನಲ್ಲಿ ನಿಗದಿಯಾಗಿದ್ದ ಟೋಕಿಯೊ ಕೂಟವನ್ನು ಕೊರೊನಾ ವೈರಾಣುವಿನ ಭೀತಿಯಿಂದಾಗಿ 2021ರ ಜುಲೈಗೆ ಮುಂದೂಡಲಾಗಿದೆ.

‘ವಿಶ್ವ ಉದ್ದೀಪನಾ ಮದ್ದು ತಡೆ ಘಟಕದ (ವಾಡಾ) ನಿಯಮದ ಪ್ರಕಾರ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವವರಿಗೆ ಗರಿಷ್ಠ ನಾಲ್ಕು ವರ್ಷ ಶಿಕ್ಷೆ ವಿಧಿಸಬಹುದಾಗಿದೆ. ನಿರ್ದಿಷ್ಟ ಕೂಟವನ್ನು ಗಮನದಲ್ಲಿಟ್ಟುಕೊಂಡು ಯಾರ ಮೇಲೂ ನಿಷೇಧ ಹೇರಲಾಗುವುದಿಲ್ಲ. ಈ ವರ್ಷಾಂತ್ಯದೊಳಗೆ ಶಿಕ್ಷೆ ಪೂರ್ಣಗೊಳಿಸಿದವರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಅವಕಾಶ ನೀಡಲೇಬೇಕು. ಇಲ್ಲದಿದ್ದರಿಂದ ಕಾನೂನು ತೊಡಕಾಗಲಿದೆ’ ಎಂದಿದ್ದಾರೆ.

‘ಈ ವರ್ಷದ ಆಗಸ್ಟ್‌ ನಂತರ ಉದ್ದೀಪನಾ ಸೇವನೆ ಪ್ರಕರಣದಲ್ಲಿ ಸಿಲುಕಿಕೊಂಡವರು 2021ರ ಟೋಕಿಯೊ ಹಾಗೂ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗಳಿಗೆ ಅರ್ಹತೆ ಗಳಿಸುವ ಅವಕಾಶ ಕಳೆದುಕೊಳ್ಳಲಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

‘ಕೊರೊನಾ ವೈರಾಣುವಿನ ಉಪಟಳದಿಂದಾಗಿ ಜಗತ್ತಿನ ಹಲವೆಡೆ ಲಾಕ್‌ಡೌನ್‌ ಆದೇಶ ಜಾರಿಗೊಳಿಸಲಾಗಿದೆ. ಇದರಿಂದಾಗಿ ಉದ್ದೀಪನಾಮದ್ದು ಪರೀಕ್ಷೆಗೆ ತೊಡಕುಂಟಾಗಿದೆ. ಕೆಲ ಅಥ್ಲೀಟ್‌ಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಅವರಿಂದ ಆದಷ್ಟು ಬೇಗ ಮೂತ್ರ ಅಥವಾ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುತ್ತೇವೆ’ ಎಂದು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT