ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬಲ್ ಫ್ಲೆಕ್ಸ್‌ ಬಳಸಿ ಬಳಕುವ ದೇಹ ಗಳಿಸಿ

Last Updated 9 ಡಿಸೆಂಬರ್ 2018, 20:30 IST
ಅಕ್ಷರ ಗಾತ್ರ

ಡಬಲ್ ಫ್ಲೆಕ್ಸ್ ಸಾಧನ ದೇಹದ ಸ್ನಾಯುಗಳಿಗೆ ಸೂಕ್ತ ವ್ಯಾಯಮಕ್ಕೆ ಸಹಾಯವಾಗುವುದರ ಜೊತೆಗೆ ಒತ್ತಡ ನಿವಾರಣೆಗೂ ಸಹಾಯಕ. ಇದನ್ನು ಬಳಸಿ ಒಟ್ಟಾರೆ ದೇಹದ ವ್ಯಾಯಮವನ್ನು ಮಾಡಬಹುದಾಗಿದೆ.ಪುರುಷರು ಮತ್ತು ಮಹಿಳೆಯರು ಇಬ್ಬರೂ ಇದನ್ನು ಉಪಯೋಗಿಸಬಹುದು.

ಸಂಚರಿಸುವಾಗ ಅಥವಾ ಕಚೇರಿಗಳಲ್ಲಿ ಸಹ ಇದನ್ನು ಬಳಸಲು ಅನುವಾಗುವಂತೆ ಈ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ.

ಯಾವೆಲ್ಲ ಅಂಗಾಂಗಕ್ಕೆ ಸಹಾಯಕಾರಿ: ಇದನ್ನು ಬಳಸಿ ಕೈ, ಕಾಲಿನ ಸ್ನಾಯುಗಳ ಮಧ್ಯ ಭಾಗ, ಭುಜದ ಭಾಗ ಮತ್ತು ದೇಹದ ಬೆನ್ನಿನ ಭಾಗ ಸೇರಿದಂತೆ ದೇಹದ ಹಲವು ಅಂಗಾಂಗಳಿಗ ವಾಯ್ಯಾಮ ಮಾಡಬಹುದು. ಸಧೃಡ ತೋಳಿಗೂ ಇದು ಸಹಾಯಕವಾಗಿದೆ.

ಇದನ್ನು ಕೈ ಬೆರಳು ಮತ್ತು ಭುಜದ ನಡುವೆ ಇಟ್ಟು ಕೊಂಡು ವ್ಯಾಯಾಮ ಮಾಡುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಎದೆಯ ಭಾಗ ಮತ್ತು ಕಾಲಿನ ಭಾಗಕ್ಕೂ ಇದರಿಂದ ಸಹಾಯವಾಗಲಿದೆ. ಒತ್ತಡಕ್ಕೆ ಒಳಗಾದಾಗ ಕೈ ಬೆರಳು ಮತ್ತು ಭುಜದ ಮಧ್ಯೆ ಈ ಸಾಧನದ ಮೂಲಕ ವ್ಯಾಯಾಮ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ.

ಈ ಸಾಧನವನ್ನು ಅತ್ಯಂತ ಸುಲಭ ವಿಧಾನದಲ್ಲಿ ಮತ್ತು ಆರಾಮದಾಯಕವಾಗಿ ಬಳಸಬಹುದಾಗಿದೆ. ಕಚೇರಿಗಳಲ್ಲಿ, ಪ್ರಯಾಣಿಸುವಾಗ ಮತ್ತು ಮನೆಯಲ್ಲಿದ್ದಾಗ ಹೀಗೆ ಎಲ್ಲ ಸಂದರ್ಭಗಳಲ್ಲಿಯೂ ಬಳಸಬಹುದು. ಕುಳಿತ ಜಾಗದಲ್ಲಿಯೇ ಈ ಸಾಧನವನ್ನು ಎರಡೂ ಕೈಗಳ ನಡುವಿನ ಸ್ನಾಯುಗಳ ವ್ಯಾಯಮಕ್ಕೆ ಉಪಯೋಗಿಸಬಹುದು.

ಕೆಲವು ಕಂಪನಿಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಹೆಚ್ಚು ಒತ್ತಡ ಎದುರಾದಾಗ 1 ರಿಂದ 10 ಅಂಕಿಗಳನ್ನು ಎಣಿಸಿ ಒತ್ತಡ ನಿವಾರಿಸಿಕೊಳ್ಳುತ್ತಾರೆ ಹೀಗೆ ದಿನ ನಿತ್ಯ ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವವರಿಗೆ ಇದು ಹೆಚ್ಚು ಸಹಾಯಕ.‌

ಹೀಗೆಲ್ಲ ಸಾಧನವನ್ನು ಬಳಸಬಹುದು: ಸೋಪಾದಲ್ಲಿ ಕುಳಿತು ಎರಡೂ ಕಾಲು ಮತ್ತು ಕೈಗಳ ನಡುವೆ, ಕುಳಿತು ಕೊಂಡು ಎರಡು ಕಾಲುಗಳಿಗೆ ಈ ಸಾಧನದಲ್ಲಿರುವ ದಾರವನ್ನು ಹಾಕಿಕೊಂಡು ವ್ಯಾಯಾಮ ಮಾಡಬಹುದು, ಮನೆಯಲ್ಲಿ ಅಥವಾ ಹೊರಗೆ ವ್ಯಾಯಾಮ ಮಾಡುವಾಗ ಈ ಸಾಧನವನ್ನು ನೇತು ಹಾಕಿ ಅದರ ಸಹಾಯದಲ್ಲಿ ಕೂಡ ಬಳಸಿಕೊಳ್ಳ ಬಹುದು.

ದೇಹದ ತೂಕ, ಸಮಯ ಮತ್ತು ಸ್ಥಳಕ್ಕೆ ಅನುಗುಣವಾಗಿ ಈ ಸಾಧನವನ್ನು ಬಳಸಿಕೊಳ್ಳುವಂತೆ ತಯಾರಿಸಲಾಗಿದೆ. ಹೆಚ್ಚು ಸಮಯವಿದ್ದು ಸಾವಕಾಶವಾಗಿ ಬಳಸುವವರಿಗೆ ಈ ಸಾಧನದ ಮಧ್ಯ ಭಾಗಕ್ಕೆ ಡಂಬಲ್ಸ್‌ಗಳನ್ನು ಆಳವಡಿಸಿಕೊಳ್ಳಬಹುದು. ಈ ಡಂಬಲ್ಸ್‌ಗಳು ಮೂರು ಹಂತದಲ್ಲಿದೆ. ಮೊದಲನೆಯದು 5 ಕೆ.ಜಿ ಎರಡು ಮತ್ತು ಮೂರನೆಯದು ತಲಾ 10 ಕೆ.ಜಿ ಯಿಂದ ಕೂಡಿದೆ.

ವ್ಯಾಯಾಮ ಮಾಡುವವರು ಅಗತ್ಯ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ತೂಕವನ್ನು ಸೇರಿಸಿಕೊಂಡು ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಲು ಅನುವಾಗಿದೆ. ಮನೆಯಲ್ಲಿ ವ್ಯಾಯಾಮ ಮಾಡುವಾಗ ಈ ಸಾಧನವನ್ನು ಮಡಚಿ ಮತ್ತು ಸಾಧನದಲ್ಲಿರುವ ಕೈ ಹಿಡಿಕೆಯ ಮೂಲಕ ದಾರದಂತೆ ಎಳೆದು ವ್ಯಾಯಾಮ ಮಾಡುವುದಕ್ಕೆ ಸಾಧನದಲ್ಲಿ ಅಳವಡಿಸಿರುವ ಸ್ಪ್ರಿಂಗ್‌ ಸಹಾಯಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT