ಸೋಮವಾರ, ಸೆಪ್ಟೆಂಬರ್ 27, 2021
22 °C

ಪೋಲ್‌ವಾಲ್ಟ್‌: ‘ಮತ್ತಷ್ಟು ಎತ್ತರಕ್ಕೆ’ ಡುಪ್ಲಾಂಟಿಸ್‌

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಲಂಡನ್‌: ಸ್ವೀಡನ್‌ನ ಅರ್ಮಾಂಡ್‌ ‘ಮಾಂಡೊ’ ಡುಪ್ಲಾಂಟಿಸ್‌ ಪೋಲ್‌ವಾಲ್ಟ್‌ನಲ್ಲಿ ಮತ್ತಷ್ಟು ಎತ್ತರಕ್ಕೆ ಜಿಗಿದು ತಮ್ಮದೇ ವಿಶ್ವ ದಾಖಲೆಯನ್ನು ಉತ್ತಮಪಡಿಸಿದರು. ಗ್ಲಾಸ್ಗೊ ಒಳಾಂಗಣ ಗ್ಯಾನ್‌ಪ್ರಿ ಕೂಟದಲ್ಲಿ ಅವರು ಮೊದಲ ಯತ್ನದಲ್ಲೇ 6.18 ಮೀ. ಎತ್ತರವನ್ನು ಸಲೀಸಾಗಿ ಜಿಗಿದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ 20 ವರ್ಷದ ಅರ್ಮಾಂಡ್‌, ಕಳೆದ ಶನಿವಾರವಷ್ಟೇ (ಫೆ. 8) ಪೋಲೆಂಡ್‌ನ ಟೊರುನ್‌ನಲ್ಲಿ  6.17 ಮೀ. ಜಿಗಿದು ದಾಖಲೆ ಸ್ಥಾಪಿಸಿದ್ದರು. ಅಮೆರಿಕ ಸಂಜಾತ ಅರ್ಮಾಂಡ್‌ ಆವರು, ಫ್ರಾನ್ಸ್‌ನ ರೆನಾಡ್‌ ಲವಲೆನಿ ಅವರು ಉಕ್ರೇನ್ನ ಡೊನಸ್ಕ್‌ನಲ್ಲಿ 2014ರಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು ಒಂದು ಸೆ.ಮೀ. ಅಂತರದಿಂದ ಮುರಿದಿದ್ದರು.

ಪೋಲ್‌ವಾಲ್ಟ್‌ ಪಟುವಿನ ಪುತ್ರನಾಗಿರುವ ಡುಪ್ಲಾಂಟಿಸ್‌, ಲೂಸಿಯಾನದಲ್ಲಿ ಬಾಲ್ಯ ಕಳೆಯುವಾಗಲೇ ಪೋಲ್‌ವಾಲ್ಟ್‌ನಲ್ಲಿ ಆಸಕ್ತಿ ತಳೆದಿದ್ದರು. ಹದಿನೇಳನೇ ವಯಸ್ಸಿನಲ್ಲೇ 5.90 ಮೀ. ಎತ್ತರ ಜಿಗಿದಿದ್ದರು. ಈಗ ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಮೇಲೆ ಕಣ್ಣಿರುವ ಅರ್ಮಾಂಡ್‌ಗೆ ಆಗಸವೇ ಮಿತಿ ಎಂಬಂತಾಗಿದೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು