ಗುರುವಾರ , ನವೆಂಬರ್ 14, 2019
19 °C

ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ದ್ಯುತಿಗೆ ಚಿನ್ನ

Published:
Updated:
Prajavani

ರಾಂಚಿ: ಮಿಂಚಿನ ಗತಿಯಲ್ಲಿ ಓಡಿದ ದ್ಯುತಿ ಚಾಂದ್‌, ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಭಾನುವಾರ ನಡೆದ ಮಹಿಳೆಯರ 200 ಮೀಟರ್ಸ್‌ ಸ್ಪರ್ಧೆಯಲ್ಲಿ ದ್ಯುತಿ 23.17 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು. ಈ ವರ್ಷ 200 ಮೀಟರ್ಸ್‌ನಲ್ಲಿ ಭಾರತದ ಸ್ಪರ್ಧಿಯೊಬ್ಬರಿಂದ ಮೂಡಿಬಂದ ಅತ್ಯುತ್ತಮ ಸಾಮರ್ಥ್ಯ ಇದಾಗಿದೆ.

ದ್ಯುತಿ ಅವರು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ‘ಡಬಲ್‌’ ಸಾಧನೆಯನ್ನೂ ಮಾಡಿದರು. ಶುಕ್ರವಾರ ನಡೆದಿದ್ದ 100 ಮೀಟರ್ಸ್‌ ಸ್ಪರ್ಧೆಯಲ್ಲಿ ಅವರು ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ಪ್ರತಿಕ್ರಿಯಿಸಿ (+)