ಗುರುವಾರ , ನವೆಂಬರ್ 21, 2019
21 °C
ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್‌ ಒಪ್ಪಿಗೆ

ದ್ಯುತಿ ಚಾಂದ್‌ಗೆ ಅವಕಾಶ

Published:
Updated:
Prajavani

ನವದೆಹಲಿ: ವೇಗದ ಓಟಗಾರ್ತಿ ದ್ಯುತಿ ಚಾಂದ್ ಅವರನ್ನು ಇದೇ ತಿಂಗಳಾಂತ್ಯದಲ್ಲಿ ದೋಹಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡಕ್ಕೆ ಸೇರಿಸಲಾಗಿದೆ.

ಭಾರತ ಅಥ್ಲೆಟಿಕ್ ಫೆಡರೇಷನ್ ಸೆಪ್ಟೆಂಬರ್‌ 9ರಂದು 25 ಮಂದಿ ಅಥ್ಲೀಟ್‌ಗಳ ಹೆಸರನ್ನು ಅಂತಿಮಗೊಳಿಸಿತ್ತು. ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹತಾ ಮಾನದಂಡವಾದ 11.24 ಸೆಕೆಂಡುಗಳಲ್ಲಿ ಗುರಿ ಮುಟ್ಟಲು ವಿಫಲವಾದ ಕಾರಣ ದ್ಯುತಿ ಚಾಂದ್ ಅವರ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಆದರೆ ತಂಡದಲ್ಲಿ ನಿಗದಿತ ಸಂಖ್ಯೆಯ ಅಥ್ಲೀಟ್‌ಗಳು ಇಲ್ಲದೇ ಇದ್ದ ಕಾರಣ ಅವರಿಗೆ ಅವಕಾಶ ನೀಡಲು ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್‌ ಒಪ್ಪಿಕೊಂಡಿದೆ.

ಪ್ರತಿಕ್ರಿಯಿಸಿ (+)