ಗುರುವಾರ , ಏಪ್ರಿಲ್ 9, 2020
19 °C
ಯುರೋಪ್‌ನಲ್ಲಿ ಸ್ಪರ್ಧೆಗಳ ರದ್ದು

ದ್ಯುತಿಗೆ ಒಲಿಂಪಿಕ್‌ ಅರ್ಹತೆ ಚಿಂತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾ ಸೋಂಕಿನ ಕಾರಣ ಭಾರತದ ಅಥ್ಲೀಟ್‌ ದ್ಯುತಿ ಚಾಂದ್‌ ಅವರು ಒಲಿಂಪಿಕ್ಸ್‌ ಅರ್ಹತೆಯ ಅವಕಾಶ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

24 ವರ್ಷದ ದ್ಯುತಿ ಮಾರ್ಚ್‌ 2ರಿಂದ ಜರ್ಮನಿಯಲ್ಲಿ ನಡೆಯಬೇಕಿದ್ದ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿತ್ತು. ವೀಸಾ ಹಾಗೂ ಪ್ರಾಯೋಜಕತ್ವ ಪಡೆದಿದ್ದರೂ, ಯೂರೋಪ್‌ ಖಂಡವು ಕೊರೊನಾ ವೈರಸ್‌ನ ಕೇಂದ್ರವಾಗಿ ಮಾರ್ಪಟ್ಟಿರುವ ಕಾರಣ ಜರ್ಮನಿಗೆ ತೆರಳಲು ಅವರಿಗೆ ಸಾಧ್ಯವಾಗಲಿಲ್ಲ.

‘ಜರ್ಮನಿ ಸೇರಿದಂತೆ ಯುರೋಪ್‌ನಲ್ಲಿ ನಡೆಯಬೇಕಿದ್ದ ಹಲವು ಟೂರ್ನಿಗಳಲ್ಲಿ ಭಾಗವಹಿಸುವ ಯೋಜನೆ ಹಾಕಿಕೊಂಡಿದ್ದೆ. ಉತ್ತಮ ಸಾಮರ್ಥ್ಯ ತೋರಿ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಪಡೆದುಕೊಳ್ಳಬಯಸಿದ್ದೆ. ಆದರೆ ಕೊರೊನಾ ಕಾರಣ ಎಲ್ಲವೂ ವಿಫಲವಾಯಿತು’ ಎಂದು ಇಂಡಿಯನ್‌ ಗ್ರ್ಯಾನ್‌ ಪ್ರಿ ಅಥ್ಲೆಟಿಕ್ಸ್ ಕೂಟದಲ್ಲಿ ಪಾಲ್ಗೊಳ್ಳಲು ಪಟಿಯಾಲಾಕ್ಕೆ ತೆರಳಿರುವ ದ್ಯುತಿ ಅಳಲು ತೋಡಿಕೊಂಡರು.

ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಪಡೆಯುವ ಭರವಸೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಟೋಕಿಯೊ ಟಿಕೆಟ್‌ ಪಡೆಯುವುದು ಕಠಿಣವಾಗಿದೆ. 100 ಮೀಟರ್‌ನಲ್ಲಿ 11.15 ಸೆಕೆಂಡು ಮಾನದಂಡವಾಗಿದೆ. ಯೂರೋಪ್‌ನಲ್ಲಿ ಉತ್ತಮ ಸ್ಪರ್ಧಿಗಳ ಎದುರು ಕಣಕ್ಕಿಳಿಯುವುದರಿಂದ ಸಹಜವಾಗಿಯೇ ಕಡಿಮೆ ಸಮಯದಲ್ಲಿ ಗುರಿ ಮುಟ್ಟಬೇಕೆಂಬ ಹಂಬಲ ಹೆಚ್ಚುತ್ತದೆ’ ಎಂದು ದ್ಯುತಿ ನುಡಿದರು.

ಕೊರೊನಾದಿಂದ ಉಂಟಾದ ಪರಿಸ್ಥಿತಿಯಲ್ಲಿ ಒಂದೊಮ್ಮೆ ಸುಧಾರಣೆ ಕಂಡುಬಂದರೆ ಯೂರೋಪ್‌ನಲ್ಲಿ ಹಲವು ಟೂರ್ನಿಗಳಲ್ಲಿ ಭಾಗವಹಿಸುವ ವಿಶ್ವಾಸವಿದೆ ಎಂದು ದ್ಯುತಿ ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು