ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್‌ ಗಾಂಧಿ ವಿ.ವಿ ಅಥ್ಲೆಟಿಕ್ಸ್‌: ಮೂಡುಬಿದಿರೆಯ ಪ್ರಿಯಾಂಕಾಗೆ ‘ಟ್ರಿಪಲ್‌’

ಲಾಂಗ್‌ಜಂಪ್‌ನಲ್ಲಿ ಮನೀಷ್‌ ಕೂಟ ದಾಖಲೆ
Last Updated 13 ನವೆಂಬರ್ 2018, 17:24 IST
ಅಕ್ಷರ ಗಾತ್ರ

ದಾವಣಗೆರೆ: ಮೊದಲ ದಿನ ಎರಡು ಕೂಟ ದಾಖಲೆಗಳನ್ನು ಬರೆದಿದ್ದ ಮೂಡುಬಿದಿರೆಯ ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌ನ ವಿದ್ಯಾರ್ಥಿನಿ ಪ್ರಿಯಾಂಕಾ, ಮಂಗಳವಾರ ಜಾವೆಲಿನ್‌ ಥ್ರೋದಲ್ಲೂ ದಾಖಲೆ ನಿರ್ಮಿಸಿದರು.

ಇಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತರ ಕಾಲೇಜು ಅಥ್ಲೆಟಿಕ್‌ ಕೂಟದಲ್ಲಿ ಅವರು ‘ಟ್ರಿಪಲ್‌ ಸಾಧನೆ’ಗೆ ಭಾಜನರಾದರು.

ನಗರದ ಜೆ.ಜೆ.ಎಂ. ವೈದ್ಯಕೀಯ ಕಾಲೇಜು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕೂಟದ ಎರಡನೇ ದಿನ ಲಾಂಗ್‌ಜಂಪ್‌ನಲ್ಲಿ ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌ನ ವಿದ್ಯಾರ್ಥಿ ಮನೀಷ್‌ ಶರ್ಮಾ ಕೂಡ ಕೂಟ ದಾಖಲೆ ಮಾಡಿದರು.

ಒಟ್ಟು 106 ಪಾಯಿಂಟ್‌ ಗಳಿಸಿರುವ ಆಳ್ವಾಸ್‌ ಕಾಲೇಜು ಮೊದಲ ಸ್ಥಾನದಲ್ಲಿದ್ದು ಧಾರವಾಡದ ಎಸ್‌.ಡಿ.ಎಂ. ಫಿಸಿಯೋಥೆರಪಿ ಕಾಲೇಜು 24 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಫಲಿತಾಂಶಗಳು: ಪುರುಷರು: 400 ಮೀ ಓಟ: ನೀರಜ್‌ ಕೇರಕರ್‌ (ಎಸ್‌.ಡಿ.ಎಂ. ಫಿಸಿಯೋಥೆರಪಿ ಕಾಲೇಜು, ಧಾರವಾಡ; ಕಾಲ: 53.59 ಸೆ.)–1, ಅಮಲಕೃಷ್ಣ ಎ.ವಿ. (ಆಚಾರ್ಯ ಬಿ.ಎಂ. ರೆಡ್ಡಿ ಫಿಸಿಯೋಥೆರಪಿ ಕಾಲೇಜು, ಬೆಂಗಳೂರು)–2, ಅಲೇನ್‌ ಜೆ. ಮಲಿಯೆಕಲ್‌ (ಲಕ್ಷ್ಮಿ ಮೆಮೊರಿಯಲ್‌ ಕಾಲೇಜ್‌ ಆಫ್‌ ಫಿಸಿಯೋಥೆರಪಿ, ಮಂಗಳೂರು)–3; 1500 ಮೀ ಓಟ: ಬಬನ್‌ ಧವನ್‌ (ಆಳ್ವಾಸ್ ಕಾಲೇಜು. ಸಮಯ: 4:38.75 ಸೆ.)–1, ಜಸ್ಟೀನ್‌ ಕೆ. ಮ್ಯಾಥ್ಯೂ (ನಾರಾಯಣ ಹೃದಯಾಲಯ ಆರೋಗ್ಯ ವಿಜ್ಞಾನ ಕಾಲೇಜು, ಬೆಂಗಳೂರು)–2, ಸುಹಾಸ್‌ ಕುಮಾರ್‌ ಕೆ.ವಿ. (ಲಕ್ಷ್ಮಿ ಮೆಮೊರಿಯಲ್‌ ಕಾಲೇಜ್‌ ಆಫ್‌ ಫಿಸಿಯೋಥೆರಪಿ, ಮಂಗಳೂರು)–3; 110 ಮೀ. ಹರ್ಡಲ್ಸ್‌: ಅಲೇನ್‌ ಜೆ. ಮಾಲಿಯೇಕ್ಕಲ್‌ (ಲಕ್ಷ್ಮಿ ಮೆಮೊರಿಯಲ್‌ ಕಾಲೇಜ್‌ ಆಫ್‌ ಫಿಸಿಯೋಥೆರಪಿ, ಮಂಗಳೂರು; ಸಮಯ: 17.74 ಸೆ.)–1, ಹರಿಕೃಷ್ಣನ್‌ ಎನ್‌.ಆರ್‌. (ಜೆ.ಜೆ.ಎಂ.ಎಂ.ಸಿ, ದಾವಣಗೆರೆ)–2, ಪ್ರಜ್ವಲ್‌ ಎನ್‌. ಯಾದವ್‌ (ಕಿಮ್ಸ್‌, ಹುಬ್ಬಳ್ಳಿ)–3; ಲಾಂಗ್‌ ಜಂಪ್‌: ಮನೀಷ್‌ ಶರ್ಮಾ (ಆಳ್ವಾಸ್‌ ಸಿ.ಎಚ್‌.ಎ, ಮೂಡಬಿದಿರೆ; ಕೂಟ ದಾಖಲೆ–ದೂರ: 6.89 ಮೀ.; ಹಳೆಯ ದಾಖಲೆ: ಕ್ರಿಯನ್‌ ಬಿನಾಯ್‌, ಸೇಂಟ್‌ ಜಾನ್ಸ್‌ ಎಂ.ಸಿ, ಬೆಂಗಳೂರು; ದೂರ: 6.29 ಮೀ)–1 ಪಿ. ಕಪಿಲ್‌ ಆನಂದ್‌ (ಆಳ್ವಾಸ್‌ ಸಿ.ಎಚ್‌.ಎ)–2, ಜಾಯ್‌ ರೆಕ್ಸ್‌ (ಎಂ.ಎಸ್‌. ರಾಮಯ್ಯ ವೈದ್ಯಕೀಯ ಕಾಲೇಜು, ಬೆಂಗಳೂರು)–3; ಜಾವೆಲಿನ್‌ ಥ್ರೋ: ಶ್ರವಣ್‌ ರೈ ಎಸ್‌. (ಕರ್ನಾಟಕ ಆಯುರ್ವೇದ ಮೆಡಿಕಲ್‌ ಕಾಲೇಜು, ಮಂಗಳೂರು; ದೂರ: 40.06)–1, ರಾಹುಲ್‌ (ಶ್ರೀ ದೇವರಾಜ ಅರಸ್‌ ನರ್ಸಿಂಗ್‌ ಕಾಲೇಜು, ಕೋಲಾರ)–2, ನಿವೇದ್‌ ಪಾರಮಲ್‌ (ಮಂಗಳಾ ಗ್ರೂಪ್‌ ಆಫ್‌ ಎಜುಕೇಷನಲ್‌ ಇನ್‌ಸ್ಟಿಟ್ಯೂಟ್‌, ಮಂಗಳೂರು)–3.

ಮಹಿಳೆಯರು: 100 ಮೀ. ಹರ್ಡಲ್ಸ್‌: ದೇವತಾ ನಾಯ್ಕ (ಎಸ್‌.ಡಿ.ಎಂ ಫಿಸಿಯೋಥೆರಪಿ ಕಾಲೇಜು, ಧಾರವಾಡ; ಸಮಯ: 20.91 ಸೆ.)–1, ಮೆಲಿಸಾ ಥಾಮಸ್‌ (ಸೇಂಟ್‌ ಜಾನ್ಸ್‌ ಮೆಡಿಕಲ್‌ ಕಾಲೇಜು, ಬೆಂಗಳೂರು)–2, ಲೆನಿಶಾ (ಫಾದರ್‌ ಮುಲ್ಲರ್ಸ್‌ ನರ್ಸಿಂಗ್‌ ಕಾಲೇಜು, ಮಂಗಳೂರು)–3; ಲಾಂಗ್‌ ಜಂಪ್‌: ವೈಷ್ಣವಿ (ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಕಾಲೇಜು, ಮಂಗಳೂರು; ದೂರ: 4.63 ಮೀ)–1, ದೇವತಾ ನಾಯ್ಕ (ಎಸ್‌.ಡಿ.ಎಂ. ಫಿಸಿಯೋಥೆರಪಿ ಕಾಲೇಜು, ಧಾರವಾಡ)–2, ಸಂಧ್ಯಾ (ಆಳ್ವಾಸ್‌ ಸಿ.ಎಚ್‌.ಎ, ಮೂಡಬಿದರೆ)–3; 400 ಮೀ ಓಟ: ಮೈತ್ರಿ ಸಿ.ಸಿ (ಎಸ್‌ಡಿಎಂ ಇನ್‌ಸ್ಟಿಟ್ಯೂಟ್‌ ಆಫ್‌ ಆಯುರ್ವೇದ, ಅಂಚಪಾಳ್ಯ; ಸಮಯ: 1:13.37 ಸೆ.)–1, ಅಖಿಲಾ ಆರ್‌. (ಕೆ.ಎಲ್‌.ಇ ನರ್ಸಿಂಗ್‌ ವಿಜ್ಞಾನ ಕಾಲೇಜು, ಹುಬ್ಬಳ್ಳಿ)–2, ಸೋನಿಯಾ ಪೀಟರ್‌ (ಆದಿತ್ಯ ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಫಾರ್ಮಸಿ ಎಜ್ಯುಕೇಶನ್‌ ಆ್ಯಂಡ್‌ ರಿಸರ್ಚ್‌, ಯಲಹಂಕ)–3; 1500 ಮೀ ಓಟ: ಸುಪ್ರೀತ್‌ ಬಿ.ಕೆ (ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌, ಮೂಡಬಿದರೆ; ಸಮಯ: 5:22.45 ಸೆ.)–1, ಸಮೀಕ್ಷಾ (ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್, ಮೂಡಬಿದರೆ)–2, ಅನಿಲಾ ವರ್ಗೀಸ್‌ (ಕೋಶಿಸ್‌ ಕಾಲೇಜ್‌ ಆಫ್‌ ನರ್ಸಿಂಗ್‌, ಕೆನ್ನೂರು)–3; 5 ಕಿ.ಮೀ ನಡಿಗೆ: ಅಖಿಲಾ ಎಂ.ಎನ್‌. (ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌, ಮೂಡಬಿದಿರೆ; ಸಮಯ: 36:54.41 ಸೆ.)–1, ನಯನಾ ಯಳ್ಳೂರು (ಸರ್ಕಾರಿ ನರ್ಸಿಂಗ್‌ ಕಾಲೇಜು, ಕಿಮ್ಸ್‌; ಹುಬ್ಬಳ್ಳಿ)–2, ಚೈತ್ರಾ (ಆಳ್ವಾಸ್‌ ಕಾಲೇಜ್‌ ಆಫ್‌ ನ್ಯಾಚುರೋಪಥಿ ಆ್ಯಂಡ್‌ ಯೋಗಿಕ್‌ ಸೈನ್ಸ್‌, ಮೂಡಬಿದಿರೆ)–3; ಜಾವೆಲಿನ್‌ ಥ್ರೋ: ಪ್ರಿಯಾಂಕಾ (ಆಳ್ವಾಸ್‌ ಕಾಲೇಜ್‌; ನೂತನ ಕೂಟ ದಾಖಲೆ– ದೂರ: 38.36 ಮೀ.; ಹಿಂದಿನ ದಾಖಲೆ: ದೇವತಾ ನಾಯ್ಕ, ಎಸ್‌.ಡಿ.ಎಂ. ಫಿಸಿಯೋಥೆರಪಿ ಕಾಲೇಜು, ಧಾರವಾಡ; ದೂರ: 28.67 ಮೀ.)–1, ದೇವತಾ ನಾಯ್ಕ–2, ಐಶ್ವರ್ಯಾ ಬಿ.ಕೆ. (ಜೆ.ಜೆ.ಎಂ.ಎಂ.ಸಿ, ದಾವಣಗೆರೆ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT