ಬಬನ್‌ ಧವನ್‌, ದೇವತಾ ನಾಯ್ಕ ಚಾಂಪಿಯನ್‌

7
ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಅಥ್ಲೆಟಿಕ್ಸ್‌: ಆಳ್ವಾಸ್‌ ಸಿ.ಎಚ್.ಎ. ತಂಡಕ್ಕೆ ಪ್ರಶಸ್ತಿ ಟ್ರಿಪಲ್‌

ಬಬನ್‌ ಧವನ್‌, ದೇವತಾ ನಾಯ್ಕ ಚಾಂಪಿಯನ್‌

Published:
Updated:
Deccan Herald

ದಾವಣಗೆರೆ: ಮೂಡುಬಿದಿರೆಯ ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌ನ ವಿದ್ಯಾರ್ಥಿ ಬಬನ್‌ ಧವನ್‌ ಹಾಗೂ ಧಾರವಾಡದ ಎಸ್‌ಡಿಎಂ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿನಿ ದೇವತಾ ನಾಯ್ಕ ಬುಧವಾರ ಇಲ್ಲಿ ಮುಕ್ತಾಯಗೊಂಡ 19ನೇ ವರ್ಷದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಅಂತರ ಕಾಲೇಜು ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆದರು.

ನಗರದ ಜೆ.ಜೆ.ಎಂ. ವೈದ್ಯಕೀಯ ನಡೆದ ಮೂರು ದಿನಗಳ ಕ್ರೀಡಾಕೂಟದಲ್ಲಿ ಬಬನ್‌ ಧವನ್‌ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಪಡೆದರೆ, ದೇವತಾ ನಾಯ್ಕ ಎರಡು ಚಿನ್ನ, ಮೂರು ಬೆಳ್ಳಿ ಪದಕಗಳನ್ನು ಜಯಿಸಿದರು.

ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಶನ್‌ನ ಕ್ರೀಡಾಪಟುಗಳು ಸಮಗ್ರ ಚಾಂಪಿಯನ್‌ಷಿಪ್‌ (162 ಪಾಯಿಂಟ್ಸ್‌) ಜೊತೆ ಪುರುಷರ (82 ಪಾಯಿಂಟ್ಸ್‌) ಹಾಗೂ ಮಹಿಳೆಯರ ವಿಭಾಗದ (80 ಪಾಯಿಂಟ್ಸ್‌) ಟೀಮ್‌ ಚಾಂಪಿಯನ್‌ಷಿಪ್‌ ಅನ್ನೂ ಗೆದ್ದುಕೊಂಡರು.

ಫಲಿತಾಂಶಗಳು: ಪುರುಷರು: 100 ಮೀ. ಓಟ: ರಿತೇಶ್‌ ಕುಮಾರ್‌ ಶೆಟ್ಟಿ (ಆಳ್ವಾಸ್‌ ಕಾಲೇಜ್ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌, ಮೂಡುಬಿದಿರೆ; ಸಮಯ: 11.45 ಸೆ.)–1, ಕೆ.ಇ. ಸೂರ್ಯ ರಾವ್‌ (ಕೆಂಪೇಗೌಡ ನರ್ಸಿಂಗ್‌ ಕಾಲೇಜು, ಬೆಂಗಳೂರು)–2, ಜಾಯ್‌ ರೆಕ್ಸ್‌ (ಎಂ.ಎಸ್‌. ರಾಮಯ್ಯ ಮೆಡಿಕಲ್‌ ಕಾಲೇಜು, ಬೆಂಗಳೂರು)–3; 5000 ಮೀ ಓಟ: ಕಯುಮ್‌ ಮೌಲಾ ಶೇಖ್‌ (ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌, ಮೂಡುಬಿದಿರೆ; ಸಮಯ: 16:35.75 ಸೆ.)–1, ಬಬನ್‌ ಧವನ್‌ (ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌, ಮೂಡುಬಿದಿರೆ)–2, ಜಸ್ಟಿನ್‌ ಕೆ. ಮ್ಯಾಥ್ಯೂ (ನಾರಾಯಣ ಹೃದಯಾಲಯ ಆರೋಗ್ಯ ವಿಜ್ಞಾನ ಕಾಲೇಜು, ಬೆಂಗಳೂರು)–3; 400 ಮೀ ಹರ್ಡಲ್ಸ್‌: ಅಲೆನ್‌ ಮಲಿಯೆಕಲ್‌ (ಲಕ್ಷ್ಮಿ ಮೆಮೊರಿಯಲ್‌ ಫಿಸಿಯೋಥೆರಪಿ ಕಾಲೇಜು, ಮಂಗಳೂರು; ಸಮಯ: 1:05.81 ಸೆ.)–1, ಅಲೆನ್‌ ಥಾಮಸ್‌ (ಸೇಂಟ್‌ ಜಾನ್ಸ್‌ ಮೆಡಿಕಲ್‌ ಕಾಲೇಜು, ಬೆಂಗಳೂರು)–2, ಡೆನಿಲ್‌ ಜೋಸ್‌ (ಜೆ.ಜೆ.ಎಂ. ವೈದ್ಯಕೀಯ ಕಾಲೇಜು, ದಾವಣಗೆರೆ)–3; 4x400 ಮೀ. ರಿಲೆ: ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌, ಮೂಡುಬಿದಿರೆ (ನಿಯಾಸ್‌ ಎಸ್‌., ಜಿತಿನ್‌ ಎಸ್‌.ಎಂ, ಬಬನ್‌ ಧವನ್‌, ಕಯುಮ್‌ ಮೌಲಾ ಶೇಖ್‌; ಸಮಯ: 4:02.82 ಸೆ.)–1, ಅಡ್ವೆನಿಸ್ಟ್‌ ಕಾಲೇಜ್‌ ಆಫ್‌ ನರ್ಸಿಂಗ್‌, ಬೆಂಗಳೂರು (ರೋನಿ ಪಿಂಟು ತಿರು, ಸಾಮ್ಯುಯಲ್‌ ಎಲ್‌, ಚಂದನ್‌ ಎಂ, ರುಬನ್‌ ಶೇನ್‌ ಲಿ)–2, ನಾರಾಯಣ ಹೃದಯಾಲಯ ಆರೋಗ್ಯ ವಿಜ್ಞಾನ ಕಾಲೇಜು, ಬೆಂಗಳೂರು (ಜಸ್ಟೀನ್‌ ಕೆ. ಮ್ಯಾಥ್ಯೂ, ಜತಿನ್‌ ಥಾಮಸ್‌, ಮಹಮ್ಮದ್‌ ಮಿಥಿಲಾಜ್‌ ಸಿ., ಮಹಮ್ಮದ್‌ ಹಫೀಸ್‌ ಎ.ಕೆ)–3; 20 ಕಿ.ಮೀ ನಡಿಗೆ: ನಿಯಾಸ್‌ ಎಸ್‌. (ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌, ಮೂಡುಬಿದಿರೆ; ಸಮಯ: 2:28:19 ಸೆ.)–1, ಸಾಗರ್‌ ಮಲ್ಲೂರು (ಸರ್ಕಾರಿ ನರ್ಸಿಂಗ್‌ ಕಾಲೇಜು, ಕಿಮ್ಸ್‌, ಹುಬ್ಬಳ್ಳಿ)–2, ಗಿರೀಶ್‌ ಎಚ್‌.ಎಸ್‌. (ಶ್ರೀ ಸಿದ್ದಗಂಗಾ ಫಾರ್ಮಸಿ ಕಾಲೇಜು, ತುಮಕೂರು)–3; ಟ್ರಿಪಲ್‌ ಜಂಪ್‌: ಜಿ. ಕಾರ್ತಿಕ್‌ (ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌, ಮೂಡುಬಿದಿರೆ; ದೂರ: 14.18 ಮೀ)–1, ಪಿ. ಕಪಿಲ್‌ ಆನಂದ್‌ (ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್, ಮೂಡುಬಿದಿರೆ)–2, ಜಾಯ್‌ ರೆಕ್ಸ್‌ (ಎಂ.ಎಸ್‌. ರಾಮಯ್ಯ ವೈದ್ಯಕೀಯ ಕಾಲೇಜು, ಬೆಂಗಳೂರು)–3; ಹ್ಯಾಮರ್‌ ಥ್ರೋ: ನಿಯೋಲ್‌ ಥಾಮಸ್‌ ಅಬ್ರಹಾಂ (ಕೆ.ವಿ.ಜಿ. ಡೆಂಟಲ್‌ ಕಾಲೇಜ್‌ ಆ್ಯಂಡ್‌ ಹಾಸ್ಪಿಟಲ್‌, ಸುಳ್ಯಾ; ದೂರ: 20.13 ಮೀ)–1, ಸುಹೇಲ್‌ (ನಾರಾಯಣ ಹೃದಯಾಲಯ ಆರೋಗ್ಯ ವಿಜ್ಞಾನ ಕಾಲೇಜು, ಬೆಂಗಳೂರು)–2, ಕೃಷ್ಣಾ ಹೊಸಮನಿ (ಸರ್ಕಾರಿ ನರ್ಸಿಂಗ್‌ ಕಾಲೇಜು, ಕಿಮ್ಸ್‌, ಹುಬ್ಬಳ್ಳಿ)–3; ಮಹಿಳೆಯರು: 100 ಮೀ ಓಟ: ನಿಖಿತಾ ದರೇಕರ (ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌, ಮೂಡುಬಿದಿರೆ; ಸಮಯ: 14:09 ಸೆ. )–1, ಮೈತ್ರಿ ಸಿ.ಸಿ (ಎಸ್‌.ಡಿ.ಎಂ. ಇನ್‌ಸ್ಟಿಟ್ಯೂಟ್‌ ಆಫ್‌ ಆಯುರ್ವೇದ, ಅಂಚೆಪಾಳ್ಯ)–2, ಸ್ನೇಹಾ ಎಚ್‌. (ಕೊಡಗು ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌)–3; 5000 ಮೀ ಓಟ: ಸುಪ್ರೀತ್‌ ಬಿ.ಕೆ. (ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌, ಮೂಡುಬಿದಿರೆ; ಸಮಯ: 21:05.58 ಸೆ.)–1, ಶ್ರೀವಿದ್ಯಾ (ಶ್ರೀ ದೇವರಾಜ ಅರಸ್‌ ನರ್ಸಿಂಗ್‌ ಕಾಲೇಜು, ಕೋಲಾರ)–2, ರಮ್ಯಾ (ಫಾದರ್‌ ಮುಲ್ಲಾರ್‌ ನರ್ಸಿಂಗ್‌ ಕಾಲೇಜು, ಮಂಗಳೂರು)–3; 400 ಮೀ ಹರ್ಡಲ್ಸ್‌: ದೇವತಾ ನಾಯ್ಕ (ಎಸ್‌.ಡಿ.ಎಂ. ಫಿಸಿಯೋಥೆರಪಿ ಕಾಲೇಜು, ಧಾರವಾಡ; ಸಮಯ: 1:29.58 ಸೆ.)–1, ಮಧು ಪ್ಯಾಟಿಮಠ (ಸರ್ಕಾರಿ ನರ್ಸಿಂಗ್‌ ಕಾಲೇಜು, ಕಿಮ್ಸ್‌, ಹುಬ್ಬಳ್ಳಿ)–2, ಸ್ವಾತಿ ಡಿ. (ಎಸ್‌.ಡಿ.ಎಂ. ನರ್ಸಿಂಗ್‌ ಕಾಲೇಜು, ಧಾರವಾಡ)–3; 4x400 ಮೀ ರಿಲೆ: ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಷನ್‌, ಮೂಡುಬಿದಿರೆ (ಸುಪ್ರೀತ್‌ ಬಿ.ಕೆ, ನಿಖಿತಾ ದರೇಕರ್‌, ಅಖಿಲಾ ಎಂ.ಎನ್‌., ಸಮೀಕ್ಷಾ; ಸಮಯ: 4:53.58 ಸೆ.)–1, ಫಾದರ್‌ ಮುಲ್ಲರ್ಸ್‌ ನರ್ಸಿಂಗ್‌ ಕಾಲೇಜು, ಮಂಗಳೂರು (ರಮ್ಯಾ, ಲೆನಿಶಾ, ಕ್ವೀನ್ಸಿ, ಫ್ಲಾವಿಯಾ)–2, ಶ್ರೀ ದೇವರಾಜ ಅರಸು ನರ್ಸಿಂಗ್‌ ಕಾಲೇಜು, ಕೋಲಾರ (ಜಿಬಿನಾ, ರಿಂಟು, ಶ್ರೀಲಕ್ಷ್ಮಿ, ಜೈಮಿ ಮಸ್ಟಿನ್‌)–3; ಹ್ಯಾಮರ್‌ ಥ್ರೋ: ಸಿಂಥಿಯಾ ಗೌಡೆಲ್ಲರ್‌ (ಸರ್ಕಾರಿ ನರ್ಸಿಂಗ್‌ ಕಾಲೇಜು, ಕಿಮ್ಸ್‌, ಹುಬ್ಬಳ್ಳಿ; ದೂರ: 30.31 ಮೀ.)–1, ಚೈತ್ರಾ (ಆಳ್ವಾಸ್‌ ಕಾಲೇಜ್‌ ಆಫ್‌ ನ್ಯಾಚುರೋಪಥಿ ಆ್ಯಂಡ್‌ ಯೋಗಿಕ್‌ ಸೈನ್ಸ್‌, ಮೂಡುಬಿದಿರೆ)–2, ವರ್ಷಾ ಆರ್‌. ಸುವರ್ಣಾ (ಆಳ್ವಾಸ್‌ ಕಾಲೇಜ್‌ ಆಫ್‌ ನ್ಯಾಚುರೋಪಥಿ ಆ್ಯಂಡ್‌ ಯೋಗಿಕ್‌ ಸೈನ್ಸ್‌, ಮೂಡುಬಿದಿರೆ)–3; ಟ್ರಿಪಲ್‌ ಜಂಪ್‌: ವೈಷ್ಣವಿ (ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್ ಕಾಲೇಜು, ಮಂಗಳೂರು: ದೂರ: 9.28 ಮೀ)–1, ಶ್ರೀಲತಾ ಪಟಗಾರ (ಸರ್ಕಾರಿ ನರ್ಸಿಂಗ್‌ ಕಾಲೇಜು, ಕಿಮ್ಸ್‌, ಹುಬ್ಬಳ್ಳಿ)–2, ಪೂಜಾ ಎಸ್‌.ಟಿ. (ಸರ್ಕಾರಿ ನರ್ಸಿಂಗ್‌ ಕಾಲೇಜು, ಕಿಮ್ಸ್‌, ಹುಬ್ಬಳ್ಳಿ)–3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !