ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ಲೋಕ್‌ಗೆ ಚಿನ್ನ: ಶಶಾಂಕ್‌ ಶ್ರೇಷ್ಠ ಸವಾರ

ರಾಷ್ಟ್ರೀಯ ಜೂನಿಯರ್‌ ಈಕ್ವೆಸ್ಟ್ರಿಯನ್‌ ಚಾಂಪಿಯನ್‌ಷಿಪ್‌: ಮಿಂಚಿದ ಇಐಆರ್‌ಎಸ್‌ ವಿದ್ಯಾರ್ಥಿಗಳು
Last Updated 28 ಡಿಸೆಂಬರ್ 2020, 19:32 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿಯ ಎಂಬೆಸಿ ಇಂಟರ್‌ನ್ಯಾಷನಲ್ ರೈಡಿಂಗ್ ಶಾಲೆಯ (ಇಐಆರ್‌ಎಸ್‌) ಶಶಾಂಕ್ ಕನುಮುರಿ ಅವರು ನವದೆಹಲಿಯಲ್ಲಿ ಸೋಮವಾರ ಕೊನೆಗೊಂಡ ರಾಷ್ಟ್ರೀಯ ಜೂನಿಯರ್ ಈಕ್ವೆಸ್ಟ್ರಿಯನ್‌ ಚಾಂಪಿಯನ್‌ಷಿಪ್‌ನಲ್ಲಿ ಶ್ರೇಷ್ಠ ಸವಾರ ಗೌರವ ಗಳಿಸಿದರು. ಡ್ರೆಸ್ಸೇಜ್‌ ಹಾಗೂ ಜಂಪಿಂಗ್ ವಿಭಾಗಗಳಲ್ಲಿ ಅವರು ಅತಿಹೆಚ್ಚು ಪಾಯಿಂಟ್ಸ್ ಕಲೆಹಾಕಿದರು.

ಜೂನಿಯರ್ ವಿಭಾಗದ (14ರಿಂದ 18 ವರ್ಷದೊಳಗಿನವರು) ವೈಯಕ್ತಿಕ ಶೋ ಜಂಪಿಂಗ್‌ನಲ್ಲಿ ಇಐಆರ್‌ಎಸ್‌ನ ಶ್ಲೋಕ್ ಜುಂಜುನ್‌ವಾಲಾ ಚಿನ್ನದ ಪದಕ ಗೆದ್ದರು. ಇಐಆರ್‌ಎಸ್‌ ಹಲವು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ಫಲಿತಾಂಶ: ಪ್ರಿಲಿಮ್‌ ಜಂಪಿಂಗ್‌ ತಂಡ (ಬೆಳ್ಳಿ ಪದಕ): ಸನ್ಯೋಗಿತಾ ಲಿಮಯೆ, ಶಶಾಂಕ್ ಕನುಮುರಿ ಹಾಗೂ ಅನೀಶ್ ಕಾಮತ್.

10–12 ವರ್ಷದವರು: ಶೋ ಜಂಪಿಂಗ್ ನಾರ್ಮಲ್‌ (ಬೆಳ್ಳಿ): ಜೈವೀರ್ ವರ್ಮಾ, ಕೃಷ್ಣಾ ಸಹಿತಿ. ಡ್ರೆಸ್ಸೇಜ್ ತಂಡ (ಬೆಳ್ಳಿ): ಜೈವೀರ್ ವರ್ಮಾ, ಕೃಷ್ಣಾ ಸಹಿತಿ. ಶೋ ಜಂಪಿಂಗ್ ಅಕ್ಯುಮುಲೇಟರ್‌ (ನಾಲ್ಕನೇ ಸ್ಥಾನ): ಜೈವೀರ್ ಮಕ್ಕರ್‌.

12ರಿಂದ 14 ವರ್ಷದವರು: ಶೋ ಜಂಪಿಂಗ್ ನಾರ್ಮಲ್ ವಿಭಾಗದ ತಂಡ (ಚಿನ್ನ): ಗೀತಿಕಾ ಟಿಕ್ಕಿಶೆಟ್ಟಿ, ಅನನ್ಯಾ ಸೆಟ್ಟಿಪಲ್ಲಿ, ಋತ್ವಿಕ್‌ ಚೌಧರಿ ಹಾಗೂ ಧೃವ ಕಮ್ಮಿಲಿ. ಶೋ ಜಂಪಿಂಗ್‌ ಅಕ್ಯುಮುಲೇಟರ್‌: ಋತ್ವಿಕ್ ಚೌಧರಿ (ಬೆಳ್ಳಿ), ಮೋಕ್ಷ್‌ ಕೊಠಾರಿ (ನಾಲ್ಕನೇ ಸ್ಥಾನ).

ಡ್ರೆಸ್ಸೇಜ್ ತಂಡ(ಚಿನ್ನ): ಅನನ್ಯಾ ಸೆಟ್ಟಿಪಲ್ಲಿ, ಮೋಕ್ಷ್ ಕೊಟಾರಿ, ಋತ್ವಿಕ್‌ ಚೌಧರಿ ಹಾಗೂ ಧೃವ ಕಮ್ಮಿಲಿ.

ಜಂಪಿಂಗ್‌:14ರಿಂದ 18 ವರ್ಷ): ಶೋ ಜಂಪಿಂಗ್ ನಾರ್ಮಲ್‌ ವೈಯಕ್ತಿಕ ವಿಭಾಗ: ಶಶಾಂಕ್ ಕನುಮುರಿ (ಬೆಳ್ಳಿ). ಶೋ ಜಂಪಿಂಗ್ ನಾರ್ಮಲ್ ತಂಡ ವಿಭಾಗ (ಚಿನ್ನ): ಶಶಾಂಕ್ ಕನುಮುರಿ, ಈಶ್ವರ್ ಕಾಳಿಂಗರಾಯರ್, ಮಲ್ಹಾರ್ ನಿಂಬಾಳ್ಕರ್‌. ಶೋ ಜಂಪಿಂಗ್ ಅತಿ ಹೆಚ್ಚು ಪಾಯಿಂಟ್ಸ್ (ಕಂಚು): ಮಲ್ಹಾರ್ ನಿಂಬಾಳ್ಕರ್‌ (ಶೋ ಜಂಪಿಂಗ್‌ನಲ್ಲಿ ನಾಲ್ಕನೇ ಸ್ಥಾನ).

ಡ್ರೆಸ್ಸೇಜ್ ವೈಯಕ್ತಿಕ ವಿಭಾಗ (ಚಿನ್ನ): ಶಶಾಂಕ್ ಕನುಮುರಿ. ಡ್ರೆಸ್ಸೇಜ್ ತಂಡ ವಿಭಾಗ (ಚಿನ್ನ): ಶಶಾಂಕ್ ಕನುಮುರಿ, ಮಲ್ಹಾರ್ ನಿಂಬಾಳ್ಕರ್‌ ಮತ್ತು ಈಶ್ವರ್ ಕಾಳಿಂಗರಾಯರ್‌.‌

ಯುವ ರೈಡರ್‌ (16–21 ವರ್ಷದವರು): ಡ್ರೆಸ್ಸೇಜ್ ವೈಯಕ್ತಿಕ ವಿಭಾಗ (ಕಂಚು): ವಿನಾಯಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT