ಗುರುವಾರ , ಏಪ್ರಿಲ್ 15, 2021
26 °C

ರಾಜ್ಯ ಈಜು: ತನಿಶ್, ವಿದಿತ್‌ಗೆ ಎರಡು ಕೂಟ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತ ಈಜು ಫೆಡರೇಷನ್‌ನ ಅತಿಥಿ ಕ್ರೀಡಾಪಟುಗಳ ಅಮೋಘ ಸಾಧನೆಗೆ ಸಾಕ್ಷಿಯಾದ ರಾಜ್ಯ ಈಜು ಕೂಟದ ಎರಡನೇ ದಿನವಾದ ಶನಿವಾರ ಒಟ್ಟು 13 ದಾಖಲೆಗಳು ಸೃಷ್ಟಿಯಾದವು. ಇಲ್ಲಿನ ಡಾಲ್ಫಿನ್ ಅಕ್ವಾಟಿಕ್ಸ್‌, ಪಡುಕೋಣೆ–ದ್ರಾವಿಡ್‌ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ರಾಜ್ಯ ಈಜು ಸಂಸ್ಥೆ ಆಯೋಜಿಸಿರುವ ಕೂಟದಲ್ಲಿ ಬಸವನಗುಡಿ ಈಜುಕೇಂದ್ರದ ತನಿಶ್ ಜಾರ್ಜ್ ಮ್ಯಾಥ್ಯೂ, ಡಾಲ್ಫಿನ್ ಅಕ್ವಾಟಿಕ್ಸ್‌ನ ವಿದಿತ್ ಎಸ್‌.ಶಂಕರ್‌ ಮತ್ತು ಅತಿಥಿ ಈಜುಪಟು ಆದಿತ್ಯ ಡಿ ತಲಾ ಎರಡು ದಾಖಲೆಗಳನ್ನು ಬರೆದರು.

ತನಿಶ್‌, ಬಾಲಕರ 100 ಮೀಟರ್ಸ್ ಬಟರ್‌ಫ್ಲೈ ಮತ್ತು 200 ಮೀ ಫ್ರೀಸ್ಟೈಲ್‌ನಲ್ಲಿ ದಾಖಲೆ ಬರೆದರು. ಮೊದಲ ದಿನ ಮಿಂಚಿದ್ದ ಡಾಲ್ಫಿನ್ ಅಕ್ವಾಟಿಕ್ಸ್‌ನ ಶ್ರೀಹರಿ ನಟರಾಜ್ ಎರಡನೇ ದಿನ ಪುರುಷರ 200 ಮೀ ಫ್ರೀಸ್ಟೈಲ್‌ನಲ್ಲಿ ದಾಖಲೆ ಬರೆದರು. ಡಾಲ್ಫಿನ್ ಅಕ್ವಾಟಿಕ್ಸ್‌ನ ವಿದಿತ್ ಎಸ್‌.ಶಂಕರ್‌ ಬಾಲಕರ 200 ಮೀ ಮತ್ತು 50 ಮೀ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ, ಭಾರತ ಈಜು ಫೆಡರೇಷನ್‌ (ಎಸ್‌ಎಫ್‌ಐ) ಅತಿಥಿ ಈಜುಪಟು ಆದಿತ್ಯ ಡಿ, ಪುರುಷರ 100 ಮೀ ಬಟರ್‌ಫ್ಲೈ ಮತ್ತು 50 ಮೀ ಫ್ರೀಸ್ಟೈಲ್‌ನಲ್ಲಿ, ಅಪೇಕ್ಷಾ ಫರ್ನಾಂಡಿಸ್‌ ಮಹಿಳೆಯರ 100 ಮೀ ಬಟರ್‌ಫ್ಲೈನಲ್ಲಿ ದಾಖಲೆ ಮಾಡಿದರು.

ಡಾಲ್ಫಿನ್‌ ಕೇಂದ್ರದ ಅತಿಥಿ ವಿಕಾಸ್ ಪಿ, ಬಾಲಕರ ಗುಂಪು 1ರ 50 ಮೀ ಫ್ರೀಸ್ಟೈಲ್‌ನಲ್ಲಿ, ಎಸ್‌ಎಫ್‌ಐ ಅತಿಥಿಗಳಾದ ಕೆನಿಶಾ ಗುಪ್ತಾ ಮಹಿಳೆಯರ ಗುಂಪು 1ರ 50 ಮೀ ಫ್ರೀಸ್ಟೈಲ್‌ನಲ್ಲಿ, ಚಾಹತ್ ಅರೋರ ಮಹಿಳೆಯರ 50 ಮೀ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ, ಶಿವಾನಿ ಕಟಾರಿಯಾ ಮಹಿಳೆಯರ 200 ಮೀ ಫ್ರೀಸ್ಟೈಲ್‌ನಲ್ಲಿ, ಡಾಲ್ಫಿನ್‌ ಅಕ್ವಾಟಿಕ್ಸ್‌ನ ಅನ್ವಿತಾ ಗೌಡ ಬಾಲಕಿಯರ 50 ಮೀ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ದಾಖಲೆ ಮಾಡಿದರು. 

ಎರಡನೇ ದಿನದ ಫಲಿತಾಂಶಗಳು

ಪುರುಷರ 200 ಮೀ ಬ್ರೆಸ್ಟ್‌ಸ್ಟೋಕ್‌

ಸುನೀಶ್‌ (ಬಿಎಸ್‌ಆರ್‌ಸಿ)–1. ಕಾಲ:2:33.8; ಮಹಿಳೆಯರ 200 ಮೀ ಬ್ರೆಸ್ಟ್‌ಸ್ಟೋಕ್‌: ಸಲೋನಿ ದಲಾಲ್‌ (ಬಿಎಸಿ)–1. ಕಾಲ: 2:52.96, ಶ್ರೀಯಾ ಭಟ್‌ (ಬಿಎಸಿ)–2, ಮಹತಿ ಎಸ್‌.ಪಟವರ್ಧನ್ (ನೆಟ್ಟಕಲ್ಲಪ್ಪ ಈಜು ಕೇಂದ್ರ)–3; ಬಾಲಕರ ಗುಂಪು1, 200 ಮೀ ಬ್ರೆಸ್ಟ್‌ ಸ್ಟ್ರೋಕ್‌: ಮಣಿಕಂಠ (ದಾವಣಗೆರೆ)–1. ಕಾಲ: 2:31.58, ಕಲ್ಪ ಎಸ್‌.ಬೊಹ್ರ (ಪೂಜಾ)–2, ಪ್ರಣವ್‌ ಭಾರತಿ (ಪೂಜಾ)–3; ಮಹಿಳೆಯರ ಗುಂಪು2ರ 200 ಮೀ ಬ್ರೆಸ್ಟ್‌ಸ್ಟೋಕ್‌: ಗುಣ (ಬಿಎಸಿ)–1. ಕಾಲ: 2:51.80, ಸಾನ್ವಿ ಎಸ್‌.ರಾವ್‌ (ಬಿಎಸ್‌ಆರ್‌ಸಿ)–2, ಶಾನಿಯಾ (ಜಿಎಎಫ್‌ಆರ್‌ಎ)–3; ಬಾಲಕರ ಗುಂಪು2ರ 200 ಮೀ ಬ್ರೆಸ್ಟ್‌ಸ್ಟ್ರೋಕ್‌:  ವಿದಿತ್ ಶಂಕರ್ (ಡಾಲ್ಫಿನ್‌)–1. ಕಾಲ: 2:29.33, ಸಾಹಿಲ್ ದಲಾಲ್ (ಬಿಎಸಿ)–2, ಇಂದ್ರಪ್ರಕಾಶ್‌ (ಪೂಜಾ)–3; ಬಾಲಕರ ಗುಂಪು1ರ 100 ಮೀ ಬಟರ್‌ಫ್ಲೈ: ತನಿಶ್ ಜಾರ್ಜ್ ಮ್ಯಾಥ್ಯೂ (ಬಿಎಸಿ)–1. ಕಾಲ:55.59, ಸಂಭವ್‌ (ಬಿಎಸ್‌ಆರ್‌ಸಿ)–2, ಉತ್ಕರ್ಷ್‌ (ಬಿಎಸಿ)–3; ಮಹಿಳೆಯರ ಗುಂಪು1ರ 100 ಮೀ ಬಟರ್‌ಫ್ಲೈ: ನೀನಾ ವೆಂಕಟೇಶ್‌ (ಡಾಲ್ಫಿನ್‌)–1. ಕಾಲ: 1:07.98, ಅಣ್ವೇಶ್‌ ಗಿರೀಶ್‌ (ಡಾಲ್ಫಿನ್‌)–2, ತಿತೀಕ್ಷಾ (ಬಿಎಸ್‌ಆರ್‌ಸಿ)–3; ಮಹಿಳೆಯರ  50 ಮೀ ಫ್ರೀಸ್ಟೈಲ್‌: ಸ್ನೇಹಾ (ಬಿಎಸಿ)–1. ಕಾಲ:29.20, ರಿಯಾ ವಿಜಯ್‌ (ನೆಟ್ಟಕಲ್ಲಪ್ಪ ಈಜು ಕೇಂದ್ರ)–2, ಜಾಹ್ನವಿ ಗಿರೀಶ್ (ಕೆ.ವಿ.ಈಜು ಕೇಂದ್ರ)–3; ಮಹಿಳೆಯರ ಗುಂಪು1ರ 50 ಮೀ ಫ್ರೀಸ್ಟೈಲ್: ನೀನಾ ವೆಂಕಟೇಶ್‌ (ಡಾಲ್ಫಿನ್‌)–1. ಕಾಲ:28.10, ಸುವನಾ ಭಾಸ್ಕರ್‌ (ಡಾಲ್ಫಿನ್‌)–2, ಇಂಚರ್ (ಜಿಎಎಫ್ಆರ್‌ಎ)–3; ಬಾಲಕರ ಗುಂಪು2ರ 200 ಮೀ ಮೆಡ್ಲೆ: ವಿದಿತ್ ಶಂಕರ್‌ (ಡಾಲ್ಫಿನ್)–1. ಕಾಲ:2:21.34, ಪವನ್‌ (‍ಪೂಜಾ)–2, ನವನೀತ್‌ (ಡಾಲ್ಫಿನ್‌)–3; ಮಹಿಳೆಯರ 50 ಮೀ ಬ್ರೆಸ್ಟ್‌ಸ್ಟ್ರೋಕ್‌: ಸಲೋನಿ ದಲಾಲ್‌ (ಬಿಎಸಿ)–1. ಕಾಲ:35.75, ಸ್ನೇಹಾ (ಬಿಎಸಿ)–2, ಮಹತಿ ಪಟವರ್ಧನ್‌ (ನೆಟ್ಟಕಲ್ಲಪ್ಪ ಈಜುಕೇಂದ್ರ)–3; ಪುರುಷರ 200 ಮೀ ಫ್ರೀಸ್ಟೈಲ್‌: ಶ್ರೀಹರಿ ನಟರಾಜ್ (ಡಾಲ್ಫಿನ್)–1. ಕಾಲ: 1:53.58, ಸಂಜಯ್‌ (ಡಾಲ್ಫಿನ್‌)–2, ಕೌಸ್ತುಭ್‌ ಅಗರವಾಲ್‌ (ಬಿಎಸಿ)–3; ಮಹಿಳೆಯರ 4 x 200 ಮೀ ಫ್ರೀಸ್ಟೈಲ್‌: ಬಿಎಸಿ–1. ಕಾಲ:10:59.37, ನೆಟ್ಟಕಲ್ಲಪ್ಪ ಈಜು ಕೇಂದ್ರ–2.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.