ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್: ಗೀತಿಕಾ, ಆಫಿಯಾಗೆ ಚಿನ್ನ

Last Updated 4 ಜುಲೈ 2022, 15:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿಶ್ವ ಯೂತ್‌ ಚಾಂಪಿಯನ್ ಆಫಿಯಾ ಪಠಾಣ್‌ ಮತ್ತು ಗೀತಿಕಾ ಅವರು ಕಜಕಸ್ತಾನದ ನೂರ್‌ ಸುಲ್ತಾನ್‌ನಲ್ಲಿ ನಡೆದ ಚೊಚ್ಚಲ ಎಲೊರ್ಡ ಬಾಕ್ಸಿಂಗ್‌ ಕಪ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು.

ಕೊನೆಯ ದಿನವಾದ ಸೋಮವಾರ ನಡೆದ ಸ್ಪರ್ಧೆಯಲ್ಲಿ ಕಲೈವನಿ ಶ್ರೀನಿವಾಸನ್‌ ಮತ್ತು ಜಮುನಾ ಬೋರೊ ಅವರು ಬೆಳ್ಳಿ ಜಯಿಸಿದರು. ಭಾರತ ಒಟ್ಟು 14 ಪದಕಗಳೊಂದಿಗೆ ತನ್ನ ಅಭಿಯಾನ ಕೊನೆಗೊಳಿಸಿತು. ತಲಾ ಎರಡು ಚಿನ್ನ ಮತ್ತು ಬೆಳ್ಳಿಯ ಜತೆ 10 ಕಂಚಿನ ಪದಕಗಳನ್ನು ಜಯಿಸಿತು.

ಮಹಿಳೆಯರ 81 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಆಫಿಯಾ 5–0 ರಲ್ಲಿ ಲಜ್ಜತ್‌ ಕಂಗಿಬಯೆವಾ ಅವರನ್ನು ಮಣಿಸಿದರು. 48 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ ಗೀತಿಕಾ 4–1 ರಲ್ಲಿ ಭಾರತದವರೇ ಆದ ಕಲೈವನಿ ವಿರುದ್ಧ ಗೆದ್ದರು.

2019ರ ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತೆ ಜಮುನಾ ಅವರು 54 ಕೆ.ಜಿ. ವಿಭಾಗದ ಫೈನಲ್‌ನಲ್ಲಿ 0–5 ರಲ್ಲಿ ಉಜ್ಬೆಕಿಸ್ತಾನದ ನಿಗಿನಾ ಉಕ್ತಕೊವಾ ಕೈಯಲ್ಲಿ ಪರಾಭವಗೊಂಡರು.

ಭಾರತ ಮತ್ತು ಆತಿಥೇಯ ಕಜಕಸ್ತಾನ ಅಲ್ಲದೆ ಉಜ್ಬೆಕಿಸ್ತಾನ, ಕ್ಯೂಬಾ, ಚೀನಾ ಮತ್ತು ಮಂಗೋಲಿಯ ದೇಶಗಳ ಸ್ಪರ್ಧಿಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT