ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ನಾಲ್ಕು ಪದಕ

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ತಂಡ ಹರಿಯಾಣದಲ್ಲಿ ಶನಿವಾರ ಮುಕ್ತಾಯಗೊಂಡ ಥ್ರೋಬಾಲ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಪದಕ ಗೆದ್ದುಕೊಂಡಿದೆ.

ಕರ್ನಾಟಕದ ಸೀನಿಯರ್ ಮಹಿಳೆಯರು ಹಾಗೂ ಜೂನಿಯರ್ ಬಾಲಕರ ತಂಡಗಳು ಬೆಳ್ಳಿ ಪದಕ ಗೆದ್ದುಕೊಂಡಿದ್ದರೆ, ಸೀನಿಯರ್ ಪುರುಷರು ಮತ್ತು ಜೂನಿಯರ್ ಬಾಲಕಿಯರ ತಂಡಗಳು ಕಂಚಿನ ಪದಕಕ್ಕೆ ಕೊರಳೊಡ್ಡಿದವು. ಹರಿಯಾಣ ತಂಡವು ಒಟ್ಟು ನಾಲ್ಕು ವಿಭಾಗಗಳಲ್ಲಿ ಚಿನ್ನ ಗೆದ್ದುಕೊಂಡಿದೆ.

ಕರ್ನಾಟಕ  ಮಹಿಳೆಯರ ತಂಡದಲ್ಲಿ ಜೆ.ಶಾಲಿನಿ, ಭಾನುಪ್ರಿಯಾ, ತನುಶ್ರೀ ಉತ್ತಮವಾಗಿ ಆಡಿದರು. ಜೂನಿಯರ್ ಬಾಲಕಿಯರಲ್ಲಿ ಕಾವ್ಯ, ಪಂಕಜಾ, ಪೂರ್ವಿತಾ ಹೆಚ್ಚು ಪಾಯಿಂಟ್ಸ್‌ ಕಲೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT