ಸೋಮವಾರ, ನವೆಂಬರ್ 29, 2021
20 °C
5000 ಮೀಟರ್ಸ್, 10 ಸಾವಿರ ಮೀಟರ್ಸ್ ಓಟದಲ್ಲೂ ಸಾಧನೆ ಮಾಡಿದ್ದ ಅಥ್ಲೀಟ್‌

ಹಾಫ್ ಮ್ಯಾರಥಾನ್‌: ಇಥಿಯೋಪಿಯಾದ ಗಿಡಿಗೆ ವಿಶ್ವದಾಖಲೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್: ಮೊದಲ ಬಾರಿ ಹಾಫ್ ಮ್ಯಾರಥಾನ್‌ನಲ್ಲಿ ಪಾಲ್ಗೊಂಡ ಇಥಿಯೋಪಿಯಾದ ಲೆಟೆಸೆನ್‌ಬೆಟ್‌ ಗಿಡಿ ಮಹಿಳಾ ವಿಭಾಗದ ವಿಶ್ವದಾಖಲೆ ಮುರಿದು ಚಾಂಪಿಯನ್‌ ಆದರು. 

ಭಾನುವಾರ ಶುಭ್ರ ಬೆಳಕಿನಲ್ಲಿ ನಡೆದ ವೆಲೆನ್ಸಿಯಾ ಚಾಂಪಿಯನ್‌ಷಿಪ್‌ನಲ್ಲಿ ಒಂದು ತಾಸು ಎರಡು ನಿಮಿಷ 52 ಸೆಕೆಂಡುಗಳಲ್ಲಿ 23 ವರ್ಷದ ಗಿಡಿ ಗುರಿ ಮುಟ್ಟಿದರು. ಈ ಮೂಲಕ ಒಂದು ನಿಮಿಷದ ಅಂತರದಲ್ಲಿ ಹಿಂದಿನ ದಾಖಲೆ ಮುರಿದರು.

ಕೆನ್ಯಾದ ರೂಥ್ ಚೆಪನ್‌ಗೆಟಿಚ್‌ ಈ ವರ್ಷದ ಏಪ್ರಿಲ್‌ನಲ್ಲಿ ದಾಖಲೆ ಬರೆದಿದ್ದರು. 5000 ಮೀಟರ್ಸ್ ಮತ್ತು 10,000 ಮೀಟರ್ಸ್ ಒಟದಲ್ಲೂ ಅವರು ವಿಶ್ವ ದಾಖಲೆ ಬರೆದಿದ್ದಾರೆ. 2020ರಲ್ಲಿ ವೆಲೆನ್ಸಿಯಾದಲ್ಲೇ ಅವರು 5000 ಮೀಟರ್ಸ್ ದಾಖಲೆ ಮಾಡಿದ್ದರು.

ಮೊದಲ 10 ಕಿಲೋಮೀಟರ್ಸ್ ದೂರವನ್ನು 29 ನಿಮಿಷ 45 ಸೆಕೆಂಡುಗಳಲ್ಲಿ ಕ್ರಮಿಸಿದ ಅವರು ನಂತರ ಇನ್ನಷ್ಟು ವೇಗ ಪಡೆದುಕೊಂಡು ಗುರಿಯತ್ತ ಮುನ್ನುಗ್ಗಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು