ಬುಧವಾರ, ಸೆಪ್ಟೆಂಬರ್ 22, 2021
24 °C

ಟೋಕಿಯೊ ಒಲಿಂಪಿಕ್ಸ್: ಭಾರತಕ್ಕೆ ಕುಸ್ತಿಯಲ್ಲಿ ನಾಲ್ಕು ಪದಕ -ಸಾಕ್ಷಿ ಮಲಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿ ತಂಡವು ಕನಿಷ್ಠ ನಾಲ್ಕು ಪದಕಗಳನ್ನು ಜಯಿಸುವ ಸಾಮರ್ಥ್ಯ ಹೊಂದಿದೆ ಎಂದು ಒಲಿಂಪಿಯನ್ ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿದ್ದಾರೆ.

ರಿಯೊ ಡಿ ಜನೈರೊದಲ್ಲಿ ಐದು ವರ್ಷಗಳ ಹಿಂದೆ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಕುಸ್ತಿಯಲ್ಲಿ ಪದಕ ಜಯಿಸಿದ್ದ ಭಾರತದ ಸಾಕ್ಷಿ ಮಲಿಕ್ ಈ ಬಾರಿಯ ಕೂಟದಲ್ಲಿ ಸ್ಪರ್ಧಿಸುತ್ತಿಲ್ಲ. ಆದರೆ ಈ ಬಾರಿಯೂ ಭಾರತಕ್ಕೆ ಕುಸ್ತಿಯಲ್ಲಿ ಪದಕಗಳು ಲಭಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಭಾರತದ ಕುಸ್ತಿ ತಂಡವು ಬಲಿಷ್ಠವಾಗಿದೆ. ಬಜರಂಗ್ ಪೂನಿಯಾ, ವಿನೇಶ ಪೋಗಟ್, ಅನ್ಷು ಮಲಿಕ್ ಮತ್ತು ರವಿ ಪದಕ ಗೆಲ್ಲುವ ನಿರೀಕ್ಷೆ ಇದೆ‘ ಎಂದು ಸೋನಿ ಲಿವ್ ಏರ್ಪಡಿಸಿದ್ದ ಆನ್‌ಲೈನ್ ಸಂವಾದದಲ್ಲಿ ಅವರು ಹೇಳಿದರು.

‘ಅನ್ಷು ಮಲಿಕ್ ಅವರಿಗೆ ಇದು ಮೊದಲ ಒಲಿಂಪಿಕ್ಸ್. ಆದರೆ ಅವರಿಗೆ ಉತ್ತಮ ಕೌಶಲ ಹಾಗೂ ಆತ್ಮವಿಶ್ವಾಸವಿದೆ. ಆದ್ದರಿಂದ ಪದಕ ಜಯಿಸುವ ಸಾಧ್ಯತೆ ದಟ್ಟವಾಗಿದೆ’ ಎಂದರು.

‘ನಾನು ಅಭ್ಯಾಸ  ಆರಂಭಿಸಿದ್ದೇನೆ. ಗಾಯದಿಂದ ಚೇತರಿಸಿಕೊಂಡಿದ್ದು, ಮತ್ತೆ ಕುಸ್ತಿ ಕಣಕ್ಕೆ ಮರಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ತಯಾರಿ ನಡೆಸುತ್ತೇನೆ‘ ಎಂದು ಸಾಕ್ಷಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು