ಒಲಿಂಪಿಕ್ಸ್‌: ಮುಖಚಹರೆ ಪತ್ತೆಗೆ ಹೊಸ ತಂತ್ರಜ್ಞಾನ

5

ಒಲಿಂಪಿಕ್ಸ್‌: ಮುಖಚಹರೆ ಪತ್ತೆಗೆ ಹೊಸ ತಂತ್ರಜ್ಞಾನ

Published:
Updated:

ಟೊಕಿಯೊ : 2020ರಲ್ಲಿ ಇಲ್ಲಿ ನಡೆಯುವ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮುಖಚಹರೆ ಪತ್ತೆ ಹಚ್ಚುವ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಲು ಒಲಿಂಪಿಕ್‌ ಸಂಸ್ಥೆ ನಿರ್ಧರಿಸಿದೆ. 

‘ಎನ್‌ಇಸಿ ಕಂಪನಿಯು ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನದ ಹೆಸರು ನಿಯೊಫೇಸ್‌. ಇದೇ ಮೊದಲ ಬಾರಿಗೆ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಇಂತಹ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.  ಇದರ ಮೂಲಕ ಮಾನ್ಯತೆ ಹೊಂದಿರುವ ಅಥ್ಲೀಟ್‌ಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಾಧ್ಯಮದವರನ್ನು ಪತ್ತೆ ಹಚ್ಚಲಾಗುವುದು. ಕ್ರೀಡಾ ಹಾಗೂ ಮಾಧ್ಯಮ ಕೇಂದ್ರಗಳು ಸೇರಿದಂತೆ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಇದನ್ನು ಅಳವಡಿಸಲಾಗುವುದು’ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ. 

‘ಈ ತಂತ್ರಜ್ಞಾನದ ನೆರವಿನಿಂದ ಕ್ರೀಡಾಕೂಟದ ವೇಳೆ ಭದ್ರತೆಯನ್ನು ಬಲಪಡಿಸಲಾಗುವುದು. ನೂಕುನುಗ್ಗಲು, ನಕಲಿ ಐಡಿ ಕಾರ್ಡ್‌ ಹಾವಳಿಯನ್ನು ತಡೆಗಟ್ಟಲು ಇದು ನೆರವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !