ಭಾನುವಾರ, ಡಿಸೆಂಬರ್ 8, 2019
20 °C

ಬಿಡಿಎಫ್‌ಎ ಫುಟ್‌ಬಾಲ್‌ ಲೀಗ್‌: ಎಫ್‌ಸಿ ಬೆಂಗಳೂರು ಜಯಭೇರಿ

Published:
Updated:
Prajavani

ಬೆಂಗಳೂರು: ಮೊಹಮ್ಮದ್‌ ಅಸ್ರಾರ್‌ ರೆಹಬರ್‌ ಗಳಿಸಿದ ಗೋಲಿನ ಬಲದಿಂದ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವು ಇನ್‌ಕಮ್‌ ಟ್ಯಾಕ್ಸ್ ಎಫ್‌ಸಿ ಎದುರು 1–0ಯಿಂದ ಜಯಿಸಿತು. ಬೆಂಗಳೂರು ಫುಟ್‌ಬಾಲ್‌ ಸ್ಟೇಡಿಯಂನಲ್ಲಿ ನಡೆದ ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಪಂದ್ಯದಲ್ಲಿ ರೆಹಬರ್‌ 36ನೇ ನಿಮಿಷ ಗೋಲು ದಾಖಲಿಸಿದರು.

ಎ ಡಿವಿಷನ್‌ನ ಹಣಾಹಣಿಯಲ್ಲಿ ಎಫ್‌ಸಿ ಡೆಕ್ಕನ್‌ ತಂಡವು ಸಿಐಎಲ್‌ ಎಫ್‌ಸಿ ಎದುರು 4–2 ಗೋಲುಗಳಿಂದ ಜಯಭೇರಿ ಮೊಳಗಿಸಿತು. ಡೆಕ್ಕನ್‌ ಪರ ಸೂರ್ಯ (20, 56ನೇ ನಿ) ಮಿಂಚಿದರು. ಇನ್ನೆರಡು ಗೋಲುಗಳನ್ನು ಕೆ.ಡಿ.ಅರವಿಂದ್‌ (30, 52ನೇ ನಿ) ಹೊಡೆದರು. ಸಿಐಎಲ್‌ ತಂಡದ ಪರ ಪ್ರಕಾಶ್‌ (64ನೇ ನಿಮಿಷ) ಹಾಗೂ ಕಿಂಗ್‌ಸೆಲಿ (70+2 ನೇ ನಿಮಿಷ) ಯಶಸ್ಸು ಸಾಧಿಸಿದರು.

ಎ ಡಿವಿಷನ್‌ ಲೀಗ್‌ನ ಪಂದ್ಯದಲ್ಲಿ ಜವಾಹರ್‌ ಯೂನಿಯನ್‌ ಎಫ್‌ಸಿಯು 1–1 ಗೋಲಿನಿಂದ ಪರಿಕ್ರಮ ಎಫ್‌ಸಿ ಎದುರು 1–1ರ ಡ್ರಾ ಸಾಧಿಸಿತು. ಪರಿಕ್ರಮ ತಂಡಕ್ಕೆ ಪ್ರಕಾಶ್‌ 3ನೇ ನಿಮಿಷದಲ್ಲಿ ಮುನ್ನಡೆ ಗಳಿಸಿಕೊಟ್ಟಿದ್ದರು.ಆದರೆ ಜವಾಹರ್‌ ಯೂನಿಯನ್‌ ಪರ ಜೋರ್ಡಾನ್‌ 35ನೇ ನಿಮಿಷ ಗೋಲು ದಾಖಲಿಸಿ ಸಮಬಲ ಸಾಧಿಸುವಂತೆ ಮಾಡಿದರು. 

ಫ್ರಾಂಕ್ಲಿನ್‌ ತಲೆಗೆ ಪೆಟ್ಟು: ಐಟಿ ತಂಡದ ಫ್ರಾಂಕ್ಲಿನ್‌ ತರುಣ್ ಅಮಲ್‌ರಾಜ್ ಪಂದ್ಯದ ದ್ವಿತೀಯಾರ್ಧದಲ್ಲಿ ರೆಹಬರ್‌ಗೆ ಡಿಚ್ಚಿ ಹೊಡೆದು ತಲೆಗೆ ಗಾಯಗೊಂಡು ಆಸ್ಪತ್ರೆ ಸೇರಿದರು. ಸಿಟಿ ಸ್ಕ್ಯಾನ್‌ಗೆ ಒಳಪಡಿಸಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)