ಗುರುವಾರ , ಮೇ 19, 2022
21 °C
ಫೆಡರೇಷನ್ ಕಪ್ ಅಥ್ಲೆಟಿಕ್ಸ್

ಅನ್ನುರಾಣಿಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ಯಾಲಿಕಟ್‌: ಒಲಿಂಪಿಯನ್‌ ಅನ್ನುರಾಣಿ ಅವರು ಇಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದರು.

ಮಹಿಳೆಯರ ಜಾವೆಲಿನ್ ಥ್ರೊನಲ್ಲಿ ಅವರು ಸೋಮವಾರ 61.5 ಮೀಟರ್ಸ್ ಸಾಧನೆ ಮಾಡಿದರು. ಶಿಲ್ಪಾ ರಾಣಿ ಬೆಳ್ಳಿ (55.72 ಮೀ.) ಮತ್ತು ಸಂಜನಾ ಚೌಧರಿ (54.19 ಮೀ.) ಕಂಚು ಗಳಿಸಿದರು.

ಕರ್ನಾಟಕದ ಕೃಷಿಕ್ ಎಂ. ಅವರಿಗೆ ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ((14.60 ಸೆಕೆಂಡು)) ಕಂಚು ಗೆದ್ದರೆ , ಪುರುಷರ ಹೈಜಂಪ್‌ನಲ್ಲಿ ಜೆಸ್ಸೆ ಸಂದೇಶ್‌ (2.15 ಮೀ., ಕಂಚು) ಮಿಂಚಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು