ಬ್ಯಾಸ್ಕೆಟ್‌ಬಾಲ್‌: ಭಾರತ ತಂಡದಲ್ಲಿ ರಾಜ್ಯದ ಬಾಂಧವ್ಯ

ಗುರುವಾರ , ಜೂನ್ 27, 2019
29 °C

ಬ್ಯಾಸ್ಕೆಟ್‌ಬಾಲ್‌: ಭಾರತ ತಂಡದಲ್ಲಿ ರಾಜ್ಯದ ಬಾಂಧವ್ಯ

Published:
Updated:

ಬೆಂಗಳೂರು: ಕರ್ನಾಟಕದ ಎಚ್‌.ಎಂ.ಬಾಂಧವ್ಯ ಅವರು ಫಿಬಾ 3X3 ಏಷ್ಯಾಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ (ಬಿಎಫ್‌ಐ) ಶನಿವಾರ ‍ಪುರುಷರ ಮತ್ತು ಮಹಿಳೆಯರ ತಂಡಗಳನ್ನು ಪ್ರಕಟಿಸಿದೆ.

ಏಷ್ಯಾಕಪ್‌ ಅರ್ಹತಾ ಹಂತದ ಪಂದ್ಯಗಳು ಇದೇ 22 ಮತ್ತು 23ರಂದು ಚೀನಾದ ಚಾಂಗ್ಸಾದಲ್ಲಿ ಆಯೋಜನೆಯಾಗಿವೆ. ಮುಖ್ಯ ಹಂತದ ಪಂದ್ಯಗಳು 24ರಿಂದ 26ರವರೆಗೆ ನಡೆಯಲಿವೆ. ಅರ್ಹತಾ ಹಂತದಲ್ಲಿ ಪುರುಷರ ತಂಡವು ‘ಬಿ’ ಗುಂಪಿನಲ್ಲಿ ಆಡಲಿದೆ. ದಕ್ಷಿಣ ಕೊರಿಯಾ, ಮಲೇಷ್ಯಾ ಮತ್ತು ವನೌಟು ಕೂಡಾ ಇದೇ ಗುಂಪಿನಲ್ಲಿವೆ.

ಮಹಿಳಾ ತಂಡದವರು ಮಲೇಷ್ಯಾ, ಮಾಲ್ಡೀವ್ಸ್‌ ಮತ್ತು ಥಾಯ್ಲೆಂಡ್‌ ತಂಡಗಳೊಟ್ಟಿಗೆ ‘ಬಿ’ ಗುಂಪಿನಲ್ಲಿ ಸ್ಥಾನ ಹೊಂದಿದ್ದಾರೆ.

2013ರಲ್ಲಿ ಕತಾರ್‌ನಲ್ಲಿ ನಡೆದಿದ್ದ ಚೊಚ್ಚಲ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪುರುಷರ ತಂಡದವರು ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದರು. ಮಹಿಳಾ ತಂಡದವರು ಚಿನ್ನದ ಸಾಧನೆ ಮಾಡಿದ್ದರು. 2017ರಲ್ಲಿ ಮಹಿಳಾ ತಂಡವು ಸೆಮಿಫೈನಲ್‌ನಲ್ಲಿ ಸೋತಿತ್ತು.

ತಂಡ ಇಂತಿದೆ: ಮಹಿಳೆಯರು: ರಸ್‌ಪ್ರೀತ್‌ ಸಿಧು (ನಾಯಕಿ), ಶಿರೀನ್ ಲಿಮಾಯೆ, ಎಚ್‌.ಎಂ.ಬಾಂಧವ್ಯ ಮತ್ತು ಶ್ರೀಕಲಾ ರಾಣಿ.

ಪುರುಷರು: ವಿಶೇಷ್‌ ಭೃಗುವಂಶಿ (ನಾಯಕ), ಯದ್ವಿಂದರ್‌ ಸಿಂಗ್‌, ಅಖಿಲನ್‌ ಪಾರಿ ಮತ್ತು ಅರ್ಷ್‌ಪ್ರೀತ್‌ ಸಿಂಗ್‌ ಭುಲ್ಲಾರ್‌.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !