ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮರಿದ ಭಾರತದ ಕನಸು

ಫಿಬಾ ಮಹಿಳೆಯರ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿ
Last Updated 25 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಆರಂಭ ಅಮೋಘ. ಆದರೆ ನಂತರ ಲಯ ತಪ್ಪಿದ ಭಾರತ ತಂಡಫಿಬಾ ಮಹಿಳೆಯರ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಎರ ಡನೇ ಪಂದ್ಯದಲ್ಲೂ ಸೋತಿತು.

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ 97-62ರಲ್ಲಿ ಭಾರತವನ್ನು ಮಣಿಸಿತು. ಈ ಮೂಲಕ ‘ಎ’ ವಲಯದಲ್ಲಿ ಚೊಚ್ಚಲ ಜಯ ಗಳಿಸುವ ಭಾರತದ ಆಸೆಗೆ ತಣ್ಣೀರು ಹಾಕಿತು;ನೇರವಾಗಿ ಸೆಮಿಫೈನಲ್ ಪ್ರವೇಶಿಸುವ ಕನಸನ್ನು ಭಗ್ನಗೊಳಿಸಿತು.

12 ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾ ಮಂಗಳವಾರ ಚೀನಾ ತೈಪೆ ವಿರುದ್ಧ ಕೇವಲ ನಾಲ್ಕು ಪಾಯಿಂಟ್‌ಗಳಿಂದ (48–44) ಗೆದ್ದಿತ್ತು. ಹೀಗಾಗಿ ಭಾರತ ಬುಧ ವಾರ ಭರವಸೆಯಲ್ಲೇ ಕಣಕ್ಕೆ ಇಳಿ ದಿತ್ತು.ಮೊದಲ ಕ್ವಾರ್ಟರ್‌ನಲ್ಲೇ ಆಧಿ ಪತ್ಯ ಸ್ಥಾಪಿಸಿದ ರಾಜಪ್ರಿಯದರ್ಶಿನಿ ಬಳಗ ಆಕ್ರಮಣಕಾರಿ ಆಟದ ಮೂಲಕ ಎದುರಾಳಿಗಳನ್ನು ಕಂಗೆಡಿಸುವಲ್ಲಿ ಯಶಸ್ವಿಯಾಯಿತು.

ಚುರುಕಿನ ಆಟದ ಮೂಲಕ ಮೂರನೇ ಸೆಕೆಂಡಿನಲ್ಲಿ ಜಂಪ್ ಶಾಟ್‌ನಲ್ಲಿ ಎರಡು ಪಾಯಿಂಟ್ಸ್ ಹೆಕ್ಕಿ ಭಾರತದ ಮು‌ನ್ನಡೆಗೆ ನಾಂದಿ ಹಾಡಿದ ಜೀನಾ ಪಿ.ಸ್ಕರಿಯಾ ನಂತರವೂ ಸತತ ಪಾಯಿಂಟ್‌ಗಳನ್ನು ತಂದುಕೊಟ್ಟರು. ಐದನೇ ನಿಮಿಷದಲ್ಲಿ ಭಾರತದ ಮುನ್ನಡೆ 12–2ಕ್ಕೆ ಏರಿತು. ಆದರೆ 7ನೇ ನಿಮಿಷದಲ್ಲಿ ಕೊರಿಯಾ 13–12ರ ಮುನ್ನಡೆ ಗಳಿಸಿ ನಗೆ ಸೂಸಿತು.

ರಂಗೇರಿದ ಹೇಜಿನ್ ಪಾರ್ಕ್ ಆಟ:ದ್ವಿತೀಯ ಕ್ವಾರ್ಟರ್‌ನಲ್ಲಿ ಕೊರಿಯಾದ ‘3 ಪಾಯಿಂಟ್‌ ಪ್ರವೀಣೆ’ ಜಿನ್ ಪಾರ್ಕ್ ಆಟ ರಂಗೇರಿತು. ಹೀಗಾಗಿ ಭಾರತದ ಆಟಗಾರ್ತಿಯರು ತಬ್ಬಿಬ್ಬಾದರು. ಈ ಕ್ವಾರ್ಟರ್‌ನಲ್ಲಿ ಒಟ್ಟು 24 ಪಾಯಿಂಟ್ಸ್ ಕಲೆ ಹಾಕಿ ಕೇವಲ 6 ಪಾಯಿಂಟ್ ಮಾತ್ರ ಬಿಟ್ಟುಕೊಟ್ಟ ಕೊರಿಯಾ 44–28ರ ಮುನ್ನಡೆ ಯೊಂದಿಗೆ ವಿರಾಮಕ್ಕೆ ತೆರಳಿತು.

ಮೂರನೇ ಕ್ವಾರ್ಟರ್‌ನಲ್ಲೂ ಕೊರಿಯಾ ಆಟಗಾರ್ತಿಯರೇ ಆಧಿಪತ್ಯ ಸ್ಥಾಪಿಸಿದರು. 43–74ರ ಹಿನ್ನಡೆಯೊಂದಿಗೆ ಕೊನೆಯ ಕ್ವಾರ್ಟರ್‌ಗೆ ಸಜ್ಜಾದ ಭಾರತಕ್ಕೆ ಪಾಯಿಂಟ್ ಗಳಿಕೆಯನ್ನು 50 ದಾಟಿಸಲಷ್ಟೇ ಸಾಧ್ಯವಾಯಿತು.ಕೊರಿಯಾ ಪರ ಆನ್‌ ಜಿನ್ 21, ಲೂಸಲ್ ಕಾಂಗ್ 13 ಪಾಯಿಂಟ್ ಗಳಿಸಿದರೆ ಭಾರತಕ್ಕೆ ಜೀನಾ ಸ್ಕರಿಯ 14, ಅಂಜನಾ ಪಿ. ಗೀತಾ 9 ಪಾಯಿಂಟ್ಸ್‌ ತಂದುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT