ಸೋಮವಾರ, ಫೆಬ್ರವರಿ 24, 2020
19 °C

ಪ್ರೊ ಲೀಗ್‌ ಪಂದ್ಯಕ್ಕೆ ಭಾರತ ತಂಡ: ಮನ್‌ಪ್ರೀತ್‌ಗೆ ಮುಂದಾಳತ್ವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿಶ್ವದ ಅಗ್ರಮಾನ್ಯ ತಂಡ ಬೆಲ್ಜಿಯಂ ವಿರುದ್ಧ ನಡೆಯಲಿರುವ ಎಫ್‌ಐಎಚ್‌ ಪ್ರೊ ಲೀಗ್‌ ಪಂದ್ಯಗಳನ್ನು ಆಡಲಿರುವ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. 24 ಆಟಗಾರರ ತಂಡವನ್ನು ಸೋಮವಾರ ಪ್ರಕಟಿಸಲಾಯಿತು.

ಹರ್ಮನ್‌ಪ್ರೀತ್‌ ಸಿಂಗ್‌ ಅವರು ಉಪನಾಯಕರಾಗಿರುವ ತಂಡದಲ್ಲಿ ರಾಜಕುಮಾರ್‌ ಪಾಲ್‌ ಹೊಸದಾಗಿ ಅವಕಾಶ ಪಡೆದಿರುವ ಏಕೈಕ ಆಟಗಾರರಾಗಿದ್ದಾರೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಇದೇ ತಿಂಗಳ 8 ಮತ್ತು 9 ರಂದು ಪಂದ್ಯಗಳು ನಡೆಯಲಿವೆ.

ಭಾರತ ಜೂನಿಯರ್‌ ತಂಡದ ಪರ ರಾಜಕುಮಾರ್ ಅವರು ಸ್ಫೂರ್ತಿಯುತ ಪ್ರದರ್ಶನ ನೀಡಿದ್ದರು. ಆ ತಂಡ ಮಲೇಷ್ಯಾದಲ್ಲಿ ನಡೆದ ಸುಲ್ತಾನ್‌ ಆಫ್‌ ಜೋಹರ್‌ ಕಪ್‌ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿತ್ತು.

ಒಲಿಂಪಿಕ್‌ ಆಯ್ಕೆಗಾಗಿ ಆಟಗಾರರಿಗೆ ಅವಕಾಶ ನೀಡುವ ವಿಷಯದಲ್ಲಿ ಸಮತೋಲನ ಕಾಪಾಡಿಕೊಳ್ಳುವುದೇ ಪ್ರೊ ಲೀಗ್‌ ಪಂದ್ಯಗಳ ಉದ್ದೇಶವಾಗಿದೆ. ಪ್ರಬಲ ತಂಡಕ್ಕೆ ಬೇಕಾಗಿರುವ ಸಂಯೋಜನೆ ರೂಪಿಸುವುದರ ಜೊತೆಗೆ ಬಲಿಷ್ಠ ತಂಡಗಳ ಜೊತೆಗೆ ನಾವು ಪೈಪೋಟಿ ನಡೆಸಬಹುದು ಎಂಬುದನ್ನು ತೋರಿಸುವುದೂ ಇದರ ಉದ್ದೇಶ ಎಂದು ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್‌ ತಿಳಿಸಿದರು.

ತಂಡ ಹೀಗಿದೆ: ಪಿ.ಆರ್‌.ಶ್ರೀಜೇಶ್‌, ಕೃಷನ್‌ ಬಹಾದ್ದೂರ್‌ ಪಾಠಕ್‌, ಹರ್ಮನ್‌ಪ್ರೀತ್‌ ಸಿಂಗ್‌, ಗುರಿಂದರ್‌ ಸಿಂಗ್‌, ಅಮಿತ್‌ ರೋಹಿದಾಸ್‌, ಸುರೇಂದರ್‌ ಕುಮಾರ್‌, ಜರ್ಮನ್‌ಪ್ರೀತ್‌ ಸಿಂಗ್‌, ರೂಪಿಂದರ್‌ ಪಾಲ್‌ ಸಿಂಗ್‌, ಮನ್‌ಪ್ರೀತ್‌ ಸಿಂಗ್‌ (ನಾಯಕ), ವಿವೇಕ್‌ ಸಾಗರ್ ಪ್ರಸಾದ್‌, ಚಿಂಗ್ಲೇಸನ ಸಿಂಗ್‌, ರಾಜಕುಮೃ್‌ ಪಾಲ್‌, ದಿಲ್‌ಪ್ರೀತ್‌ ಸಿಂಗ್‌, ಹಾರ್ದಿಕ್‌ ಸಿಂಗ್‌, ರಮಣದೀಪ್‌ ಸಿಂಗ್‌, ಲಲಿತ್‌ ಕುಮಾರ್‌ ಉಪಾಧ್ಯಾಯ, ಮನದೀಪ್‌ ಸಿಂಗ್‌, ಶಂಶೇರ್‌ ಸಿಂಗ್‌, ಗುರುಸಾಹಿಬ್‌ಜಿತ್‌ ಸಿಂಗ್‌, ಕೊತಜಿತ್‌ ಸಿಂಗ್‌, ಕದಂಗಬಾಮ್‌, ಬಿರೇಂದ್ರ ಲಾಕ್ರಾ, ನೀಲಕಂಠ ಶರ್ಮಾ, ಗುರ್ಜತ್‌ ಸಿಂಗ್‌, ಎಸ್‌.ವಿ.ಸುನೀಲ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು