ಎಫ್‌ಐಎಚ್‌ ಸೀರಿಸ್‌ ಫೈನಲ್‌ನಲ್ಲಿ ಭಾರತ ಕಣಕ್ಕೆ

7

ಎಫ್‌ಐಎಚ್‌ ಸೀರಿಸ್‌ ಫೈನಲ್‌ನಲ್ಲಿ ಭಾರತ ಕಣಕ್ಕೆ

Published:
Updated:

ಲಾಸನ್‌: ಭಾರತ ಪುರುಷರ ಮತ್ತು ಮಹಿಳಾ ಹಾಕಿ ತಂಡದವರು ಮುಂಬರುವ ಎಫ್‌ಐಎಚ್‌ ಸೀರಿಸ್‌ ಫೈನಲ್ಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಪುರುಷರ ತಂಡದವರು ಎರಡನೇ ಗುಂಪಿನಲ್ಲಿ ಸ್ಥಾನ ಗಳಿಸಿದ್ದು ಜೂನ್‌ 6ರಿಂದ 16ರವರೆಗೆ ಭುವನೇಶ್ವರದಲ್ಲಿ ಪಂದ್ಯಗಳನ್ನು ಆಡಲಿದ್ದಾರೆ. ಜಪಾನ್‌, ಮೆಕ್ಸಿಕೊ, ಪೋಲೆಂಡ್‌, ರಷ್ಯಾ, ದಕ್ಷಿಣ ಆಫ್ರಿಕಾ, ಅಮೆರಿಕ ಮತ್ತು ಉಜ್‌ಬೆಕಿಸ್ತಾನ ತಂಡಗಳು ಇದೇ ಗುಂಪಿನಲ್ಲಿ ಆಡಲಿವೆ.

ಟೂರ್ನಿಯಲ್ಲಿ ಒಟ್ಟು 24 ತಂಡಗಳು ಭಾಗವಹಿಸಲಿವೆ. ಇವುಗಳನ್ನು ಮೂರು ಗುಂಪುಗಳನ್ನಾಗಿ ವಿಭಾಗಿಸಲಾಗಿದೆ. ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಗಳಿಸುವ ತಂಡಗಳಿಗೆ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಆಡುವ ಅವಕಾಶ ಸಿಗಲಿದೆ.

ಮಹಿಳಾ ತಂಡದವರು ಚಿಲಿ, ಫಿಜಿ, ಮೆಕ್ಸಿಕೊ, ಪೋಲೆಂಡ್‌, ರಷ್ಯಾ ಮತ್ತು ಉರುಗ್ವೆ ತಂಡಗಳೊಟ್ಟಿಗೆ ಎರಡನೇ ಗುಂಪಿನಲ್ಲಿ ಸ್ಥಾನ ಹೊಂದಿದ್ದು, ಜೂನ್‌ 15ರಿಂದ 23ರವರೆಗೆ ಹಿರೋಶಿಮಾದಲ್ಲಿ ಪಂದ್ಯಗಳನ್ನು ಆಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !