ಶನಿವಾರ, ಜೂಲೈ 11, 2020
25 °C

ಜುಲೈ 4ರಿಂದ ಆನ್‌ಲೈನ್‌ ಶೂಟಿಂಗ್‌ ಲೀಗ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿಶ್ವದ ಪ್ರಥಮ ಆನ್‌ಲೈನ್‌ ಶೂಟಿಂಗ್‌ ಲೀಗ್‌ಗೆ ಜುಲೈ 4ರಂದು ಚಾಲನೆ ಸಿಗಲಿದೆ.

ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರಿಯನ್‌ ರಾಕ್ಸ್‌ ಮತ್ತು ಇಟಾಲಿಯನ್‌ ಸ್ಟೈಲ್‌ ತಂಡಗಳು ಸೆಣಸಲಿವೆ.

ಲೀಗ್‌ನಲ್ಲಿ ಭಾರತದ ‘ಇಂಡಿಯನ್‌ ಟೈಗರ್ಸ್‌’ ತಂಡವೂ ಪಾಲ್ಗೊಳ್ಳುತ್ತಿದೆ. ಜುಲೈ 5ರಂದು ನಡೆಯುವ ಹೋರಾಟದಲ್ಲಿ ಟೈಗರ್ಸ್‌ ತಂಡವು ಇಟಾಲಿಯನ್‌ ಸ್ಟೈಲ್ ಸವಾಲು ಎದುರಿಸಲಿದೆ. ಜುಲೈ 11ರ ಹಣಾಹಣಿಯಲ್ಲಿ ಟೈಗರ್ಸ್‌ ತಂಡ ಆಸ್ಟ್ರಿಯನ್‌ ರಾಕ್ಸ್‌ ಎದುರು ಆಡಲಿದೆ.

ಫ್ರೆಂಚ್‌ ಫ್ರಾಗ್ಸ್‌ ಮತ್ತು ಇಸ್ರೇಲ್‌ ಮಾಬರೋಟ್‌ ಹಾಗೂ ಸ್ಪ್ಯಾನಿಷ್‌ ಚಾನೊಸ್‌ ಮತ್ತು ಫ್ರೆಂಚ್‌ ಫ್ರಾಗ್ಸ್‌ ನಡುವಣ ಪಂದ್ಯಗಳು ಕ್ರಮವಾಗಿ ಜುಲೈ 10 ಮತ್ತು 12ರಂದು ನಿಗದಿಯಾಗಿವೆ.

ಜುಲೈ 18 ಮತ್ತು 19ರಂದು ಸೆಮಿಫೈನಲ್‌ ಪಂದ್ಯಗಳು ಆಯೋಜನೆಯಾಗಿವೆ. ಮೂರನೇ ಸ್ಥಾನದ ಪಂದ್ಯವು 25ರಂದು ಹಾಗೂ ಫೈನಲ್‌ ಹೋರಾಟವು 26ರಂದು ನಿಗದಿಯಾಗಿವೆ.

ಲೀಗ್‌ನಲ್ಲಿ ಭಾಗವಹಿಸುವ ಪ್ರತಿ ತಂಡದಲ್ಲೂ ಕೋಚ್‌ ಹಾಗೂ ಮೂವರು ರೈಫಲ್‌ ಶೂಟರ್‌ಗಳು ಇರಲಿದ್ದಾರೆ. ‘ರೇಸ್‌ ಟು ಟೆನ್‌’ ಮಾದರಿಯಲ್ಲಿ ಪಂದ್ಯಗಳು ನಡೆಯುತ್ತವೆ.

‘ಶೂಟರ್‌ಗಳು ತಾವು ಇರುವ ಸ್ಥಳದಿಂದಲೇ (ಝೂಮ್‌ ಆ್ಯಪ್ ಮೂಲಕ‌) ಲೀಗ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಒಂದು ತಿಂಗಳ ಅವಧಿಯಲ್ಲಿ ಒಟ್ಟು 10 ಪಂದ್ಯಗಳು ನಡೆಯುತ್ತವೆ. @indianshooting ಫೇಸ್‌ಬುಕ್‌ ಪುಟದಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು’ ಎಂದು ಲೀಗ್‌ನ ಆಯೋಜಕ ಶಿಮನ್‌ ಶರೀಫ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು