ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಜೆಎಸ್‌ಡಬ್ಲ್ಯು ಜಯಭೇರಿ

Last Updated 11 ಆಗಸ್ಟ್ 2022, 15:33 IST
ಅಕ್ಷರ ಗಾತ್ರ

ಮೈಸೂರು: ಹೊಂದಾಣಿಕೆಯ ಆಟವಾಡಿದ ಜೆಎಸ್‌ಡಬ್ಲ್ಯು ಬೆಂಗಳೂರು ತಂಡದವರು ಸೂಪರ್‌ ಡಿವಿಷನ್‌ ತಂಡಗಳಿಗಾಗಿ ಇಲ್ಲಿ ನಡೆಯುತ್ತಿರುವ ಸಿ. ಪುಟ್ಟಯ್ಯ ಸ್ಮಾರಕ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದರು.

ಗುರುವಾರ ನಡೆದ ಪಂದ್ಯದಲ್ಲಿ ಜೆಎಸ್‌ಡಬ್ಲ್ಯು 5–0 ಗೋಲುಗಳಿಂದ ಕೊಡಗು ಎಫ್‌ಸಿ ತಂಡವನ್ನು ಮಣಿಸಿತು. ಆಕಾಶ್‌ದೀಪ್‌ ಸಿಂಗ್‌ (32 ಮತ್ತು 46ನೇ ನಿ.) ಎರಡು ಗೋಲುಗಳನ್ನು ಗಳಿಸಿದರೆ, ಹುದ್ರಮ್‌ ಥಾಯ್ ಸಿಂಗ್ (54), ಲಾಲ್‌ಮಿಂಗ್‌ಚುವಾಂಗ (82) ಮತ್ತು ಎಡ್ವಿನ್‌ ರೊಸಾರಿಯೊ (86) ತಲಾ ಒಂದು ಗೋಲು ತಂದಿತ್ತರು.

ಇನ್ನೊಂದು ಪಂದ್ಯದಲ್ಲಿ ರೂಟ್ಸ್‌ ಎಫ್‌ಸಿ 1–0 ಗೋಲಿನಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ಆರ್.ವಿಶಾಲ್‌ ಅವರು ಗೆಲುವಿನ ಗೋಲು (45+2) ಗಳಿಸಿದರು.

ಶುಕ್ರವಾರ ನಡೆಯುವ ಪಂದ್ಯಗಳಲ್ಲಿ ಎಂಇಜಿ ಮತ್ತು ಸೆಂಟರ್‌ ಎಫ್‌ಸಿ– ಬೆಂಗಳೂರು ಈಗಲ್ಸ್ ಎಫ್‌ಸಿ ಹಾಗೂ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ– ಎಎಸ್‌ಸಿ ಮತ್ತು ಸೆಂಟರ್‌ ಎಫ್‌ಸಿ ತಂಡಗಳು ಎದುರಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT