ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ‍ಪ್ರಕರಣ: ಉವಾನ್‌ಗೆ 9 ವರ್ಷ ಜೈಲು

Last Updated 30 ಆಗಸ್ಟ್ 2018, 12:20 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ದಕ್ಷಿಣ ಅಮೆರಿಕದ ಫುಟ್‌ಬಾಲ್‌ ಕಾನ್ಫೆಡರೇಷನ್‌ನ ಮುಖ್ಯಸ್ಥರಾಗಿದ್ದ ಉವಾನ್ ಎಂಜೆಲ್‌ ನಪೌ ಅವರಿಗೆ 9 ವರ್ಷ ಜೈಲು ಶಿಕ್ಷೆ ಘೋಷಿಸಲಾಗಿದೆ.

ಫುಟ್‌ಬಾಲ್‌ ಪಂದ್ಯಗಳ ಟಿ.ವಿ ಹಾಗೂ ಮಾರುಕಟ್ಟೆಯ ಹಕ್ಕುಗಳನ್ನು ನೀಡಲು ಕೋಟಿಗಟ್ಟಲೆ ಹಣ ಪಡೆದ ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣಗಳಲ್ಲಿ ಉವಾನ್‌ ಅವರು ಪ್ರಮುಖ ಆರೋಪಿಯಾಗಿದ್ದರು. ಈ ಪ್ರಕರಣ ನಡೆದ ವೇಳೆ ಪರುಗ್ವೆ ಫುಟ್‌ಬಾಲ್‌ ಸಂಸ್ಥೆಯ ಮುಖ್ಯಸ್ಥರಾಗಿಯೂ ನಪೌ ಕಾರ್ಯನಿರ್ವಹಿಸುತ್ತಿದ್ದರು.

2017ರಲ್ಲಿ ಬೆಳಕಿಗೆ ಬಂದ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾರದ ಹಿಂದೆ ಬ್ರೆಜಿಲ್‌ ಫುಟ್‌ಬಾಲ್‌ ಸಂಸ್ಥೆಯ ಮುಖ್ಯಸ್ಥರಾಗಿದ್ದ ಮರಿಯಾ ಮರಿನ್‌ ಅವರಿಗೂ ನಾಲ್ಕು ವರ್ಷಗಳ ಕಾಲ ಸೆರೆವಾಸದ ಶಿಕ್ಷೆ ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT