ಭಾನುವಾರ, ಸೆಪ್ಟೆಂಬರ್ 22, 2019
28 °C

ಫಾರ್ಮುಲಾ ಒನ್‌ ರೇಸ್‌: ಲೆಕ್ಲರ್ಕ್‌ಗೆ ಪ್ರಶಸ್ತಿ

Published:
Updated:
Prajavani

ಮೊಂಜಾ, ಇಟಲಿ: ಅಮೋಘ ಚಾಲನಾ ಕೌಶಲ ಮೆರೆದ ಫೆರಾರಿ ತಂಡದ ಚಾರ್ಲ್ಸ್‌ ಲೆಕ್ಲರ್ಕ್‌ ಅವರು ಇಟಾಲಿಯನ್‌ ಗ್ರ್ಯಾನ್‌ ಪ್ರಿ ಫಾರ್ಮುಲಾ ಒನ್‌ ರೇಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ನಡೆದ ಸ್ಪರ್ಧೆಯಲ್ಲಿ 21 ವರ್ಷದ ಲೆಕ್ಲರ್ಕ್‌ 1 ಗಂಟೆ, 15 ನಿಮಿಷ, 26.665 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಸಂಭ್ರಮಿಸಿದರು.

ಈ ಮೂಲಕ ಫಾರ್ಮುಲಾ ಒನ್‌ನಲ್ಲಿ ಸತತ ಎರಡನೇ ಪ್ರಶಸ್ತಿ ಗೆದ್ದ ಹಿರಿಮೆಗೆ ಭಾಜನರಾದರು.

ಮರ್ಸಿಡೀಸ್‌ ತಂಡದ ವಲಟ್ಟೆರಿ ಬೊಟ್ಟಾಸ್‌ ಮತ್ತು ಲೂಯಿಸ್‌ ಹ್ಯಾಮಿಲ್ಟನ್‌ ಅವರು ಕ್ರಮವಾಗಿ ಎರಡು ಮತ್ತು ಮೂರನೇಯವರಾಗಿ ಸ್ಪರ್ಧೆ ಮುಗಿಸಿದರು.

ರೆನಾಲ್ಟ್‌ ತಂಡದ ಡೇನಿಯಲ್‌ ರಿಕಿಯಾರ್ಡೊ ಮತ್ತು ನಿಕೊ ಹುಕೆನ್‌ಬರ್ಗ್‌ ಅವರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿದರು.

Post Comments (+)