ಮಂಗಳವಾರ, ಆಗಸ್ಟ್ 3, 2021
21 °C

ಆನ್‌ಲೈನ್‌ ಶೂಟಿಂಗ್‌: ಫ್ರೆಂಚ್‌ ಫ್ರಾಗ್ಸ್‌ಗೆ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಫ್ರೆಂಚ್‌ ಫ್ರಾಗ್ಸ್‌ ತಂಡದವರು ವಿಶ್ವದ ಪ್ರಥಮ ಆನ್‌ಲೈನ್‌ ಶೂಟಿಂಗ್‌ ಲೀಗ್‌ನ ಪಂದ್ಯದಲ್ಲಿ ಗೆದ್ದಿದ್ದಾರೆ.‌

ಭಾನುವಾರ ನಡೆದ ‘ಬಿ’ ಗುಂಪಿನ ತನ್ನ ಎರಡನೇ ಹಣಾಹಣಿಯಲ್ಲಿ ಫ್ರೆಂಚ್‌ ಫ್ರಾಗ್ಸ್‌ 10–5 ಪಾಯಿಂಟ್ಸ್‌ನಿಂದ ಸ್ಪ್ಯಾನಿಷ್‌ ಚಾನೊಸ್‌ ತಂಡವನ್ನು ಪರಾಭವಗೊಳಿಸಿತು.

ಈ ಹೋರಾಟದ ಆರಂಭದಲ್ಲಿ 1–4ರಿಂದ ಹಿನ್ನಡೆ ಕಂಡಿದ್ದ ಫ್ರಾಗ್ಸ್‌ ತಂಡ ಬಳಿಕ ಪುಟಿದೆದ್ದಿತು. ಸತತ ಆರು ಪಾಂಯಿಂಟ್ಸ್‌ ಗಳಿಸಿ 7–4 ಮುನ್ನಡೆ ಪಡೆದ ತಂಡವು 15ನೇ ಶಾಟ್‌ನಲ್ಲಿ ಗೆಲುವಿನ ತೋರಣ ಕಟ್ಟಿತು.

ಉಭಯ ತಂಡಗಳು ತಮ್ಮ ಹಿಂದಿನ ಪಂದ್ಯದಲ್ಲಿ ಇಸ್ರೇಲ್‌ ಮಾಬರೊತ್‌ ತಂಡದ ಎದುರು ಜಯಿಸಿ ಸೆಮಿಫೈನಲ್‌ ಸ್ಥಾನ ಖಚಿತಪಡಿಸಿಕೊಂಡಿದ್ದವು.

ಆಸ್ಟ್ರಿಯನ್‌ ರಾಕ್ಸ್‌ ಮತ್ತು ಇಟಾಲಿಯನ್‌ ಸ್ಟೈಲ್‌ ತಂಡಗಳೂ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ.

ಇದೇ ತಿಂಗಳ 18 ಮತ್ತು 19ರಂದು ನಾಲ್ಕರ ಘಟ್ಟದ ಪಂದ್ಯಗಳು ನಿಗದಿಯಾಗಿವೆ. ಫ್ರಾಗ್ಸ್‌ ತಂಡ ಆಸ್ಟ್ರಿಯನ್‌ ರಾಕ್ಸ್‌ ಎದುರೂ, ಸ್ಪ್ಯಾನಿಷ್‌ ತಂಡ ಇಟಾಲಿಯನ್‌ ಸ್ಟೈಲ್‌ ವಿರುದ್ಧವೂ ಹೋರಾಡಲಿವೆ.

ಇದೇ ತಿಂಗಳ 26ರಂದು ಫೈನಲ್‌ ಪಂದ್ಯವು ಆಯೋಜನೆಯಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು