‘ಟಾಪ್‌ ಯೋಜನೆಯ ಬಳಕೆಗೆ ಆದ್ಯತೆ’

7

‘ಟಾಪ್‌ ಯೋಜನೆಯ ಬಳಕೆಗೆ ಆದ್ಯತೆ’

Published:
Updated:
Deccan Herald

ನವದೆಹಲಿ: ‘ಟೋಕಿಯೊದಲ್ಲಿ 2020ರಲ್ಲಿ ನಡೆಯಲಿರುವ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸುತ್ತಿರುವ ಅಥ್ಲೀಟ್‌ಗಳಿಗೆ ಆರ್ಥಿಕ ನೆರವು ಅಗತ್ಯ. ಇದಕ್ಕಾಗಿ ಟಾಪ್‌ (ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಮ್‌) ಯೋಜನೆಯನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಲಾಗುವುದು’ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಹೇಳಿದ್ದಾರೆ. 

ಇಂಡೊನೇಷ್ಯಾದಲ್ಲಿ ನಡೆದ 18ನೇ ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದ ಅಥ್ಲೀಟ್‌ಗಳ ಸನ್ಮಾನ ಸಮಾರಂಭದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಯಾವುದೇ ಕಾರಣಕ್ಕೂ ಆರ್ಥಿಕ ನೆರವು ಪಡೆಯುವ ಹಂತದಲ್ಲಿ ಕ್ರೀಡಾಪಟುಗಳಿಗೆ ತೊಡಕಾಗಬಾರದು. ಟಾಪ್‌ ಯೋಜನೆಯ ಪ್ರಯೋಜನ ಅರ್ಹರಿಗೆ ಸಿಗಬೇಕು. ಹೀಗಾಗಿ ಇದರಲ್ಲಿ ಪಾರದರ್ಶಕತೆ ತರಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಯೋಜನೆಗಳನ್ನು ಆರಂಭಿಸಿದ್ಧೇವೆ’ ಎಂದು ರಾಥೋಡ್‌ ಹೇಳಿದ್ದಾರೆ. 

‌‘ಭಾರತ ಕ್ರೀಡಾರಂಗದಲ್ಲಿ ಈಗ ಹಣದ ಸಮಸ್ಯೆ ಇಲ್ಲ. ಕಾರ್ಪೊರೇಟ್‌ ಕಂಪನಿಗಳು ಆರ್ಥಿಕ ನೆರವಿಗೆ ಮುಂದಾಗಿರುವುದೇ ಇದಕ್ಕೆ ಕಾರಣ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !