ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್ನಾಸ್ಟಿಕ್‌ ಚಾಂಪಿಯನ್‌ಷಿಪ್‌: ತರುಷ್‌, ಪಾವನಾಗೆ ಮೊದಲ ಸ್ಥಾನ

ರಾಜ್ಯಮಟ್ಟ
Last Updated 16 ನವೆಂಬರ್ 2018, 18:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಂಗಳೂರು ದಕ್ಷಿಣದ ಎಲ್‌. ತರುಷ್‌ ಮತ್ತು ಬೆಂಗಳೂರಿನ ಪಾವನಾ ಬಿ. ಜೋಶಿ ಅವರು ಶುಕ್ರವಾರ ಧಾರವಾಡದಲ್ಲಿ ಆರಂಭವಾದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ರಾಜ್ಯಮಟ್ಟದ ಜಿಮ್ನಾಸ್ಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸ್ಥಾನ ಪಡೆದರು.

ಹಾರಡಿ ರಾಮಣ್ಣ ಶೆಟ್ಟಿ ಬಾಲ ಮಾರುತಿ ಜಿಮ್ನಾಸ್ಟಿಕ್‌ ಸಂಸ್ಥೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋ ಜಿಸಿರುವ ಎರಡು ದಿನಗಳ ಚಾಂಪಿ ಯನ್‌ಷಿಪ್‌ನಲ್ಲಿ ರಾಜ್ಯದ ವಿವಿಧ ಶಾಲೆಗಳ 850 ಸ್ಪರ್ಧಿಗಳು ಭಾಗವಹಿಸಿದ್ದಾರೆ. ತರುಷ್‌ ವೈಯಕ್ತಿಕ ಪ್ರಶಸ್ತಿ ಕೂಡ ಪಡೆದರು.

ಬಾಲಕಿಯರ 14 ವರ್ಷದ ಒಳಗಿನವರ ವಿಭಾಗದಲ್ಲಿ ಬ್ಯಾಲನ್ಸಿಂಗ್ ಬೀಮ್‌, ಫ್ಲೋರ್‌ ಎಕ್ಸರ್‌ಸೈಸ್‌, ಟೇಬಲ್‌ ವಾಲ್ಟ್‌, ಅನಿವನ್‌ ಬಾರ್‌ ಈ ನಾಲ್ಕೂ ವಿಭಾಗಗಳಲ್ಲಿ ಪಾವನಾ ಗಮನ ಸೆಳೆದರು. ಈ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಜಿಮ್ನಾ ಸ್ಟ್‌ಗಳು ತ್ರಿಪುರಾದಲ್ಲಿ ನಡೆಯುವ ರಾಷ್ಟ್ರೀಯ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಮೊದಲ ದಿನದ ಫಲಿತಾಂಶ: (14 ವರ್ಷದ ಒಳಗಿನವರ ಬಾಲಕರ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್‌): ಟೇಬಲ್‌ ವಾಲ್ಟ್‌: ಎಸ್‌. ಶಕ್ತಿಪ್ರದರ್ಶನ್ (ಬೆಂಗಳೂರು ಉತ್ತರ)–1, ಯತೀಂದ್ರ ಎ. ಗೊಲ್ಲರ (ಧಾರವಾಡ)–2, ಎಚ್‌.ಸಿ. ಪ್ರೀತಮ್‌ (ಕೊಡಗು)–3.

ಪ್ಯಾರಲಾಲ್‌ ಬಾರ್ಸ್‌: ಎಸ್‌. ಪುನೀತ್‌ (ಕೊಡಗು)–1, ಎಲ್‌. ತರುಷ್‌ (ಬೆಂಗಳೂರು ದಕ್ಷಿಣ)–2, ಯತೀಂದ್ರ ಎ. ಗೊಲ್ಲರ (ಧಾರವಾಡ)–3.

ಹೈಬಾರ್ಸ್‌: ಡಿ. ನಿಖಿಲ್‌ (ಧಾರವಾಡ)–1, ಎಸ್‌. ವಿವೇಕ್‌ (ಕೊಡಗು)–2, ಎಲ್‌. ತರುಷ್‌ (ಬೆಂಗಳೂರು ದಕ್ಷಿಣ)–3.

ಫ್ಲೋರ್‌ ಎಕ್ಸರ್‌ಸೈಸ್‌: ಎಲ್‌. ತರುಷ್‌ (ಬೆಂಗಳೂರು ದಕ್ಷಿಣ)–1, ಎಚ್‌.ಸಿ. ಪ್ರೀತಮ್‌ (ಕೊಡಗು)–2, ಎಸ್‌. ಪುನೀತ್‌ (ಕೊಡಗು)–3.

ಪೊಮೆಲ್‌ ಹಾರ್ಸ್‌: ಎಲ್‌. ತರುಷ್‌ (ಬೆಂಗಳೂರು ದಕ್ಷಿಣ)–1, ಮಲ್ಲಿಕಾರ್ಜುನ ಎಫ್‌. ಅಮರಗೋಳ (ಕೊಡಗು)–2, ಭರತ್‌ (ತುಮಕೂರು)–3.

ರೋಮನ್‌ ರಿಂಗ್ಸ್‌: ಯತೀಂದ್ರ ಎ. ಗೊಲ್ಲರ (ಧಾರವಾಡ)–1, ಎಸ್‌. ವಿವೇಕ್‌ (ಕೊಡಗು)–2, ಆಕಾಶ ಡಿ. ಜಾಧವ್ (ಧಾರವಾಡ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT