ದಕ್ಷಿಣ್‌ ಡೇರ್‌ ರ‍್ಯಾಲಿ: ಗೌರವ್‌ ಗಿಲ್‌ಗೆ ಪ್ರಶಸ್ತಿ

7

ದಕ್ಷಿಣ್‌ ಡೇರ್‌ ರ‍್ಯಾಲಿ: ಗೌರವ್‌ ಗಿಲ್‌ಗೆ ಪ್ರಶಸ್ತಿ

Published:
Updated:

ಗೋವಾ: ಗೌರವ್‌ ಗಿಲ್‌ ಹಾಗೂ ಮೂಸಾ ಶರೀಫ್‌ ಜೋಡಿಯು ಶನಿವಾರ ಮುಕ್ತಾಯಗೊಂಡ ಮಾರುತಿ ಸುಜುಕಿ ದಕ್ಷಿಣ್‌ ಡೇರ್‌ ರ‍್ಯಾಲಿಯಲ್ಲಿ ಪ್ರಶಸ್ತಿ ಗೆದ್ದಿದೆ.

ಈ ತಂಡವು ಎಲ್ಲ ಐದು ಲೆಗ್‌ಗಳಲ್ಲಿ ಪಾರಮ್ಯ ಮೆರೆಯಿತು. ಒಟ್ಟು 6 ಗಂಟೆ 57.44 ನಿಮಿಷಗಳಲ್ಲಿ ರ‍್ಯಾಲಿ ಪೂರ್ಣಗೊಳಿಸಿತು. ಈ ಮೂಲಕ ದಾಖಲೆಯ 31ನೇ ಜಯ ತನ್ನದಾಗಿಸಿಕೊಂಡಿತು. 

7 ಗಂಟೆ 12 ನಿಮಿಷಗಳಲ್ಲಿ ಗುರಿ ತಲುಪಿದ ಫಿಲಿಪ್ಪೋಸ್‌ ಮ್ಯಾಥ್ಯೂ ಹಾಗೂ ಪಿವಿಎಸ್‌ ಮೂರ್ತಿ ಜೋಡಿಯು ಎರಡನೇ ಸ್ಥಾನ ಪಡೆಯಿತು. ಸಾಮ್ರಾಟ್‌ ಯಾದವ್‌ ಹಾಗೂ ಕರಣ್‌ ಔಕ್ತಾ ಜೋಡಿಯು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಜೋಡಿಯು 7 ಗಂಟೆ 21.10 ನಿಮಿಷಗಳಲ್ಲಿ ರ‍್ಯಾಲಿ ಪೂರ್ಣಗೊಳಿಸಿತು.

ರ‍್ಯಾಲಿ ಮುಗಿದ ನಂತರ ಮಾತನಾಡಿದ ಗಿಲ್‌, ‘ಐದು ದಿನಗಳು ನಡೆದ ಈ ಸ್ಪರ್ಧೆ ಅಮೋಘವಾಗಿತ್ತು. ಮೂಸಾ ಜೊತೆಗೂಡಿ ನಾನು ರೂಪಿಸಿದ ತಂತ್ರಗಾರಿಕೆ ಫಲ ನೀಡಿತು’ ಎಂದು ಸಂತಸ ವ್ಯಕ್ತಪಡಿಸಿದರು.

ಬೈಕ್‌ ರ‍್ಯಾಲಿ ವಿಭಾಗದಲ್ಲಿ ಎಸ್‌. ಡಿ. ವಿಶ್ವಾಸ್‌ ಅವರು ಚಾಂಪಿಯನ್‌ ಆದರು. ಯುವಕುಮಾರ್‌ ಅವರು ಎರಡನೇ ಸ್ಥಾನ ಗಳಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !