ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಗೋವಾದ ಲಿಯೋನ್‌ಗೆ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ

Last Updated 31 ಡಿಸೆಂಬರ್ 2020, 12:32 IST
ಅಕ್ಷರ ಗಾತ್ರ

ನವದೆಹಲಿ: ಗೋವಾದ 14 ವರ್ಷದ ಆಟಗಾರ ಲಿಯೋನ್‌ ಮೆಂಡೋನ್ಕಾ ಅವರು ಭಾರತದ 67ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಎನಿಸಿದ. ಇಟಲಿಯ ವೆರ್ಗನಿ ಟೂರ್ನಿಯಲ್ಲಿ ಮೂರನೇ ಹಾಗೂ ಅಂತಿಮ ಜಿಎಂ ನಾರ್ಮ್‌ ಪಡೆಯುವ ಮೂಲಕ ಲಿಯೋನ್‌ ಈ ಸಾಧನೆಗೆ ಪಾತ್ರನಾದ.

14 ವರ್ಷ, 9 ತಿಂಗಳು 17 ದಿನಗಳಿರುವಾಗ ಲಿಯೋನ್‌ ಗ್ರ್ಯಾಂಡ್‌ಮಾಸ್ಟರ್‌ ಆಗಿದ್ದಾನೆ.

ಅಕ್ಟೋಬರ್‌ನಲ್ಲಿ ರಿಗೊ ಚೆಸ್‌ ಜಿಎಂ ರೌಂಡ್‌ರಾಬಿನ್ ಟೂರ್ನಿಯಲ್ಲಿ ಮೊದಲ ಜಿಎಂ ನಾರ್ಮ್ ಮಾಡಿದ್ದ ಲಿಯೋನ್‌, ನವೆಂಬರ್‌ ಆರಂಭದಲ್ಲಿ ಬುಡಾಪೆಸ್ಟ್‌ನಲ್ಲಿ (ಹಂಗೆರಿ) ನಡೆದ ಟೂರ್ನಿಯಲ್ಲಿ ಎರಡನೇ ನಾರ್ಮ್‌ ಗಳಿಸಿದ್ದ. ಇಟಲಿಯಲ್ಲಿ ಬುಧವಾರ ಮೂರನೇ ನಾರ್ಮ್ ಪಡೆದ. ಮೂರು ನಾರ್ಮ್‌ಗಳ ಜೊತೆಗೆ 2,500 ರೇಟಿಂಗ್‌ ತಲುಪುವ ಆಟಗಾರ ಗ್ರ್ಯಾಂಡ್‌ಮಾಸ್ಟರ್‌ ಪದವಿ (ಟೈಟಲ್‌)ಗೆ ಅರ್ಹತೆ ಪಡೆಯುತ್ತಾರೆ

ಇಟಲಿಯಲ್ಲಿ ಬುಧವಾರ ಮುಕ್ತಾಯಗೊಂಡ ಟೂರ್ನಿಯಲ್ಲಿ ಲಿಯೋನ್‌ 6.5 ಪಾಯಿಂಟ್ಸ್‌ ಸಂಗ್ರಹಿಸಿ ಎರಡನೇ ಸ್ಥಾನ ಪಡೆದ. ಉಕ್ರೇನ್‌ನ ವಿತಾಲಿ ಬೆರ್ನಾಡ್‌ಸ್ಕಿ (7 ಪಾಯಿಂಟ್) ಅಗ್ರಸ್ಥಾನದಲ್ಲಿ ಟೂರ್ನಿಯನ್ನು ಮುಗಿಸಿದರು.

ಮೆಂಡೊನ್ಕಾ ಮತ್ತು ಅವರ ತಂದೆ ಲಿಂಡನ್‌ ಅವರು, ಕೊರೊನಾ ಲಾಕ್‌ಡೌನ್‌ ನಿಮಿತ್ತ ಹೇರಲಾದ ಪ್ರಯಾಣ ನಿರ್ಬಂಧದಿಂದಾಗಿ ಕಳೆದ ಮಾರ್ಚ್‌ನಲ್ಲಿ ಯುರೋಪ್‌ನಲ್ಲೇ ಇರಬೇಕಾಯಿತು. ಅವರು ಈ ಅವಕಾಶವನ್ನು ಚೆಸ್‌ ಸುಧಾರಣೆಗೆ ಬಳಸಿಕೊಂಡರು.

ಈ ಅವಧಿಯಲ್ಲಿ ಜಿಎಂ ಪದವಿ ಪಡೆಯಲು ಲಿಯೋನ್‌ ಹಲವು ಟೂರ್ನಿಗಳಲ್ಲಿ ಪಾಲ್ಗೊಂಡ. ಮಾರ್ಚ್‌ನಿಂದ ಡಿಸೆಂಬರ್‌ವರೆಗಿನ ಒಂಬತ್ತು ತಿಂಗಳ ಅವಧಿಯಲ್ಲಿ 16 ಟೂರ್ನಿಗಳಲ್ಲಿ ಆಡಿದ ಲಿಯೋನ್‌ 2,452 ರೇಟಿಂಗ್‌ ಪಾಯಿಂಟ್‌ಗಳನ್ನು 2,544ಕ್ಕೆ ಹೆಚ್ಚಿಸುವಲ್ಲಿ ಯಶಸ್ವಿಯಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT