ಸೋಮವಾರ, ಮಾರ್ಚ್ 1, 2021
19 °C

ಟ್ರ್ಯಾಕ್ ಸೈಕ್ಲಿಂಗ್: ಮಂಜುನಾಥ್‌ಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿ.ಎಂ.ಆರ್‌ ಸೈಕ್ಲಿಂಗ್ ಸಂಸ್ಥೆಯ ಮಂಜುನಾಥ ಎಸ್‌.ಎನ್, ಬೆಂಗಳೂರು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ಎಲೀಟ್ ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು. ನೆಲಮಂಗಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಎಸ್‌ಐಸಿಎಂ ಸಂಸ್ಥೆಯ ಎ. ಫರ್ದೀನ್‌ ಖಾನ್ ಬೆಳ್ಳಿ ಪದಕ ಗಳಿಸಿದರೆ ಬಿ‌ಎನ್‌ಸಿಸಿಯ ಮಂಜುನಾಥ ಸಿ ಕಂಚಿನ ಪದಕ ಗೆದ್ದರು. 

ಮಹಿಳೆಯರ ವಿಭಾಗದಲ್ಲಿ ಸೇಂಟ್ ಕ್ಲಾರೆಟ್ ಕಾಲೇಜಿನ ಜಿಯಾಲೈಮಿನ ಖಾತುನ್ ಮತ್ತು ನೆಲಮಂಗಲ ಜಿಎಫ್‌ಜಿಸಿಯ ಕಾವ್ಯ ಕ್ರಮವಾಗಿ ಮೊದಲ ಎರಡು ಸ್ಥಾನ ಗಳಿಸಿದರು. ಇವರಿಬ್ಬರಿಗೆ ಭಾಗವಹಿಸುವಿಕೆಯ ಪ್ರಮಾಣ ಪತ್ರ ನೀಡಲಾಯಿತು. 18 ವರ್ಷದೊಳಗಿನ ಜೂನಿಯರ್ ಬಾಲಕರ ವಿಭಾಗದಲ್ಲಿ ಎಸ್‌ಐಸಿಎಂನ ಹೇಮಂತ್ ಎಸ್‌ ಮತ್ತು ಬಾಲಕಿಯರ ವಿಭಾಗದಲ್ಲಿ ಜಿಎಫ್‌ಜಿಸಿ ನೆಲಮಂಗಲದ ಕೀರ್ತನ ಎಸ್‌, 16 ವರ್ಷದೊಳಗಿನವರ ಸಬ್‌ ಜೂನಿಯರ್ ಬಾಲಕರ ವಿಭಾಗದಲ್ಲಿ ಬಿಎನ್‌ಸಿಸಿಯ ಜೆಫ್ರಿ ಇಮ್ಯಾನುಯೆಲ್ ಮಾತ್ರ ಪಾಲ್ಗೊಂಡಿದ್ದರು. ಇವರಿಗೂ ಪ್ರಮಾಣ ಪತ್ರ ನೀಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು